ಸಮಾಜಕ್ಕೆ ಮಠಗಳ ಕೊಡುಗೆ ಅಪಾರ ಜಗದ್ಗುರು ಡಾ. ಗುರುಸಿದ್ಧ ಸ್ವಾಮಿಜಿ
ಬೈಲಹೊಂಗಲ 25: ಈ ಭಾಗದ ಭಕ್ತರಿಗೆ ಹಾಗೂ ಸಮಾಜಕ್ಕೆ ರುದ್ರಾಕ್ಷಿ ಮಠ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಡಾ ಗುರುಸಿದ್ಧ ರಾಜ ಯೋಗಿಂದ್ರ ಮಹಾಸ್ವಾಮಿಗಳು ಹೇಳಿದರು ಪಟ್ಟಣದ ನವೀಕರಣಗೊಂಡ ರುದ್ರಾಕ್ಷಿ ಮಠಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದವರು ಹಳೆಯದಾಗಿರುವ ರುದ್ರಾಕ್ಷಿ ಮಠವನ್ನು ಭಕ್ತರೆಲ್ಲರೂ ಸೇರಿ ನವೀಕರಣಗೊಳಿಸಿ ಮಠವನ್ನು ಸುಂದರವಾಗಿ ನಿರ್ಮಾಣ ಮಾಡಿದ್ದು ಸಂತಸದ ವಿಷಯವಾಗಿದೆ ಕೆಲವು ವರ್ಷಗಳಿಂದ ತೆಗಿತಗೊಂಡಿದ್ದ ಮಠದಲ್ಲಿ ಕಾರ್ಯಕ್ರಮಗಳು ಇನ್ನು ಮುಂದೆ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಗಳು ಸದಾ ಮುಂದುವರೆಯಲಿವೆ ಎಂದು ಪೂಜ್ಯರು ನುಡಿದರು ಸಾನಿಧ್ಯ ವಹಿಸಿದ ಮಠದ ಪೀಠಾಧಿಕಾರಿ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ ಎಲ್ಲ ಭಕ್ತರ ಸಹಕಾರದಿಂದ ಮಠ ನಿರ್ಮಾಣವಾಗಿದ್ದು ಭಕ್ತರ ಉದ್ಧಾರಕ್ಕಾಗಿ ಎಂದಿನಂತೆ ಧಾರ್ಮಿಕ ಅಧ್ಯಾತ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ ಎಂದು ನುಡಿದು ಈ ಸಂದರ್ಭದಲ್ಲಿ ಜಗದ್ಗುರು ಡಾ ಗುರುಸಿದ್ಧ ರಾಜ ಯೋಗಿಂದ್ರ ಮಹಾಸ್ವಾಮಿಗಳನ್ನು ರುದ್ರಾಕ್ಷಿ ಮಠದ ಭಕ್ತರು ಸನ್ಮಾನಿಸಿದರು ಭಕ್ತರಾದ ಮುರುಗಪ್ಪ ಜಿಗಿಜಿನ್ನಿ ಸಿದ್ದಪ್ಪ ಮರಕುಂಬಿ ಬಸವರಾಜ ತಟವಟಿ ಮಡ್ಯಪ್ಪ ಕುರಿ ಕಾಶಿನಾಥ ಬಿರಾದರ ಬಸವರಾಜ ಶಿಂತ್ರಿ ಶ್ರೀಶೈಲ್ ಶರಣಪ್ಪನವರ ಮಹೇಶ್ ಕೋಟಗಿ ಬಸವರಾಜ ಬಡಿಗೇರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು