ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಹಾನಿಯಾದ ಕುಟುಂಬದವರಿಗೆ ಸಾಂತ್ವನ
ಮುಂಡಗೋಡ 05: ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಜೈತುನಾಬಿ ಗಾಡಿವಾಲಿ ಅವರ ಮನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ಬಂಗಾರದ ಒಡವೆ, ನಗದು, ಬಟ್ಟೆ, ಪಾತ್ರೆ ಸೇರಿದಂತೆ ಅನೇಕ ಸಾಮಾಗ್ರಿಗಳು ಸುಟ್ಟು ಹಾನಿಗೆ ಒಳಗಾದ ಮನೆಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶಾಸಕ ಶಿವರಾಮ ಹೆಬ್ಬಾರ್ ಅವರು ಸರ್ಕಾರದಿಂದ ನೂತನ ಮನೆ ಮಂಜೂರಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲಾಗುವುದಾಗಿ ಎಂದು ಜೈತುನಾಬಿ ಗಾಡಿವಾಲಿ ಅವರಿಗೆ ಭರವಸೆ ನೀಡಿದರು.