ಲೋಕದರ್ಶನ ವರದಿ
ಕಂಪ್ಲಿ 07: ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ನೇಗಿಲು ಯುವ ಬಳಗದ ಸಂಚಾಲಕ ಮೇಷಕ್ ರಾಜ್ ಹೇಳಿದರು.
ಅವರು ತಾಲೂಕಿನ ಪ್ರಭು ಕ್ಯಾಂಪಿನಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 25ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೀರವೇರಿಸಲಾಯಿತು. ನಂತರ ಮಾತನಾಡಿ ನೇಗಿಲು ಯುವ ಬಳಗ ಸಂಘಟನೆ ಸಾರ್ವಜನಿಕರು ಸುತ್ತಲಿನ ಪರಿಸರವನ್ನು ಕಾಪಾಡಲು ನಾಗರಿಕರು ನಮ್ಮೊಂದಿಗೆ ಕೈ ಜೋಡಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸುರಕ್ಷಿತವಾಗಿರುತ್ತದೆ. ಯುವ ಜನರು ಸಂಘಟಿತರಾಗಿ ಈ ಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಸಲಹೆ ನೀಡಿದರು.
ಸಂಘಟನೆಯ ಅಧ್ಯಕ್ಷ ಪ್ರತಾಪ್, ಉಪಾಧ್ಯಕ್ಷೆ ಚೈತ್ರಾ, ಕಾರ್ಯದಶರ್ಿ, ನಿದರ್ೇಸಕರುಗಳಾದ ಸುನೀಲ್, ಲೋಕೇಶ್, ನಾಗವೇಣಿ, ಶಶಿಕಲಾ, ರೆಹಮತ್ಬೀ, ಸ್ವಾತಿಮುತ್ತು, ಅಮೃತಾ, ಸಂಜಯ್, ಪ್ರಶಾಂತ್, ಸುಮನ್, ಅನಿಲ್, ಮಂಜು, ವೀರೇಶ್, ಶಿಕ್ಷಕರಾದ ಚಂದ್ರಪ್ಪ, ಹನುಮಂತಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.