ಕೊಡುಗೆಯಿಂದ ಸಮುದಾಯ ನಿಮರ್ಾಣ: ಸಂಸದ ಅಂಗಡಿ

ಲೋಕದರ್ಶನ ವರದಿ

ಬೆಳಗಾವಿ 28:  ಆಹಾರ ಆಂದೋಲನ ಅನೇಕ ವಿಧವಾದ ಧಾನ್ಯಗಳನ್ನು ಸಂಗ್ರಹಿಸಿ ಸಮಾಜದ ಆಥರ್ಿಕವಾಗಿ ಹಿಂದುಳಿದ ಸಮೂಹಗಳಿಗೆ ವಿತರಿಸುವಂಥ ಕಾರ್ಯಕ್ರಮವಾಗಿದೆ. ಜೈನ್ ಸಮೂಹ ಸಂಸ್ಥೆಗಳು ಪ್ರತಿ ತಿಂಗಳು ನಡೆಸುತ್ತಿರುವ ಕಾರ್ಯಕ್ರಮವಾಗಿದ್ದು, ಸಂಸ್ಥೆಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾಥರ್ಿಗಳ ಪಾಲಕರು, ಸಂಸ್ಥೆಗಳ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳೆಲ್ಲರೂ ಗಣನೀಯ ಪ್ರಮಾಣದಲ್ಲಿ ಸಂಗ್ರಹಣೆ ಮಾಡಿ, ಹಂಚಿಕೆ ಮಾಡುವ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿದೆ. ಈ ತಿಂಗಳು ಧಾನ್ಯ ದವಸಗಳನ್ನು ಪ್ರಜ್ವಲ ಅನಾಥಾಶ್ರಮ ಹಾಗೂ ಚೈಲ್ಡ್ಕೇರ್ ಸಂಸ್ಥೆಗಳಿಗೆ ಹಂಚಿಕೆ ಮಾಡಿದರು.

ಜೈನ್ ಸಮೂಹ ಸಂಸ್ಥೆಗಳು ಹಣಕಾಸಿನ ದೇಣಿಗೆಯನ್ನು ಪಡೆದು, ಇತ್ತೀಚಿಗೆ ಫುಲ್ವಾಮಾದಲ್ಲಿ ಸಂಭವಿಸಿದ ಹುತಾತ್ಮರ ಬಲಿದಾನ ಹಾಗೂ ಈ ಹಣವನ್ನು ಯುದ್ದದಲ್ಲಿ ಗಾಯಾಳುಗಳಾದ ಸೈನಿಕರ ಕುಟುಂಬಗಳಿಗೆ ಕಲ್ಯಾಣ ಧನವೆಂದು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡುತ್ತಾರೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸದ ಸುರೇಶ ಅಂಗಡಿಯವರು ತಮ್ಮ ಭಾಷಣದಲ್ಲಿ ನಮ್ಮ ಸರಕಾರ ಆರಂಭಿಸಿದ ಹಲವಾರು ಕಾರ್ಯಕ್ರಮಗಳಿಗೆ ನೀಡುತ್ತಿರುವ ಕೊಡುಗೆಗಳನ್ನು ಕೊಂಡಾಡಿದರು. ಜ್ಞಾನ ಅತೀವ ಮುಖ್ಯ. ಆದರೆ ಪೋಷಕಾಂಶ ಆಹಾರ ಸೇವನೆಯೂ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದರು. ಶಾಲೆ ಮಾಡುತ್ತಿರುವ ಪ್ರಯತ್ನ ಹಾಗೂ ಆಹಾರ ಆಂದೋಲನ ಈ ಭಾಗದ ಕೃಷಿಕರಿಗೆ ಸಹಾಯವಾಗುತ್ತಿರುವ ಕುರಿತು ಒತ್ತಿ ಹೇಳಿದರು. ಶಿಕ್ಷಣದ ಉಪಯುಕ್ತತತೆ ಮಾಡಿಕೊಂಡು ಅದನ್ನು ಚತುರತೆಯಿಂದ ಬಳಸಿಕೊಂಡು, ಉದ್ಯೋಗಗಳಿಗೆ ಹಂಬಲಿಸದೇ ಉದ್ಯೋಗಗಳನ್ನು ಸೃಷ್ಟಿ ಮಾಡುವಂತವರಾಗಬೇಕೆಂದು ಯುವಕರಿಗೆ ಉಪದೇಶಿಸಿದರು. ಅವರು ಮುಂದುವರೆದು ಮಾತನಾಡುತ್ತಾ ಸಕರ್ಾರ ಶಿಕ್ಷಣ ಕೊಡ ಮಾಡಲಾಗುತ್ತಿರುವ ಆಪತ್ಕಾಲ ಸಹಾಯದ ಯೋಜನೆಗಳಾದಂತಹ ಉಡಾಣ, ಭೇಟಿ ಪಡಾವೋ ಭೇಟಿ ಬಚಾವೋ ಕುರಿತು ಒತ್ತಿ ಹೇಳಿದರು. ಸರಕಾರ ಕೊಡ ಮಾಡುತ್ತಿರುವಂತಹ ಸೌಲಭ್ಯಗಳು ಅರ್ಹರಿಗೆ ಮಾತ್ರ ಸಿಗುವಂತೆ ಕಠೋರ ನಿಯಮ ಮಾಡುವ ಭರವಸೆ ನೀಡಬೇಕು.

ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಾ ಜೈನ್ ಹೆರಿಟೇಜ್ ಸ್ಕೂಲಿನ ನಿದರ್ೇಶಕಿ ಶ್ರೀಮತಿ ಶೃದ್ಧಾ ಖಟವಟೆ ಮಾತನಾಡುತ್ತಾ ಪ್ರತಿಯೋರ್ವ ಕೆಲಸ ಮಾಡಬೇಕಾಗಿರುವುದರಿಂದ ಹೇಗೆ ಮಹಾನ ವ್ಯಕ್ತಿಗಳಾಗಬೇಕೆಂದು ಸಮಾಜದಲ್ಲಿ ಆಥರ್ಿಕವಾಗಿ ಹಿಂದುಳಿದ ಸಮೂಹಗಳ ಕಲ್ಯಾಣಕ್ಕಾಗಿ ಶಾಲೆ ನಿರ್ವಹಿಸುತ್ತಿರುವ ಹಲವಾರು ಚಟುವಟಿಕೆಗಳ ಕುರಿತು ಮಾತನಾಡಿದರು.

ಉತ್ತರ ಕನರ್ಾಟಕದ ಜೆ.ಜಿ.ಐ ದ ಪ್ರೊ. ಆರ್.ಜಿ. ಧಾರವಾಡಕರ ಮಕ್ಕಳ ಮನಸ್ಸಿನಲ್ಲಿ ಚಿಲುಮೆಯಂತೆ ಚೈತನ್ಯ, ಶಿಸ್ತು, ಬೆಳೆದು ಉತ್ತಮ ಮಾನವರು ಹಾಗೂ ವಿದ್ಯಾಥರ್ಿಗಳಾಗ ಬೇಕೆಂದು ಪ್ರೋತ್ಸಾಹಿಸಿದರು. ಸಮಾಜ ಹಾಗೂ ರಾಷ್ಟ್ರದ ಅಭ್ಯುದಯದಲ್ಲಿ ಶಾಲೆ ಯಾವಾಗಲೂ ಬೆಂಬಲಿಸುತ್ತದೆ ಎಂದರು.

ಸಮ್ಮೇಳನದಲ್ಲಿ ಜೆ.ಜಿ.ಐ ದ ಆಡಳಿತ ಮಂಡಳಿ, ರಾಧೇಶ್ಯಾಮ್, ಹೇಡಾ, ರಾಜ ಪುರೋಹಿತ, ಪ್ರೊ. ಕೆ.ಜಿ. ಮಲ್ಲಳಿ, ಪ್ರೊ. ಉದಯಚಂದ್ರ, ಸಂದೀಪ ನಾಯರ್, ಕೆ.ಜಿ. ವಿಶ್ವನಾಥ ಪ್ರೊ. ವಿಜಯ ಕಲ್ಮಣಿ ಹಾಗೂ ಡಾ. ಗೋರಬಾಳ ಇವರುಗಳ ಉಪಸ್ಥಿತಿಯ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದು ಕೊಟ್ಟಿತ್ತು.