ಲೋಕದರ್ಶನವರದಿ
ರಾಣೇಬೆನ್ನೂರು10: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿನಿಯರು ಉದ್ಯೋಗವಂತರಾಗಬೇಕೆಂದರೆ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಎಸ್.ಜೆ.ಎಂ.ವ್ಹಿ ಕಾಲೇಜು ಶಿಮುಸ ಭವನದಲ್ಲಿ ವಾಣಿಜ್ಯಶಾಸ್ತ್ರ ಸಂಘದ ಚಟುವಟಿಕೆಗಳ ಸಮಾರೂಪ ಮತ್ತು ಅಂತಿಮ ವರ್ಷದ ವಿದ್ಯಾಥರ್ಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಅತಿಥಿಯಾಗಿ ಬ್ಯಾಡಗಿ ಬಿ.ಇ.ಎಸ್.ಎಂ.ಮಹಾವಿದ್ಯಾಲಯದ ಸಹಪ್ರಾದ್ಯಾಪಕ ಕೆ.ಎಂ.ಕಟಗಿಹಳ್ಳಿ ಹೇಳಿದರು.
ವಿದ್ಯಾಥರ್ಿನಿಯರಿಗೆ ವಿವಿಧ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗ ಅವಕಾಶಗಳಿದ್ದು ಅವುಗಳನ್ನು ಪಡೆದುಕೊಳ್ಳಲು ಅವಶ್ಯಕವಿರುವ ಜ್ಞಾನವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದ ಅವರು ನಾಲ್ಕು ಗೋಡೆಗೆ ಸಿಮೀತವಾಗದೇ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ವಿದ್ಯಾಥರ್ಿ ದೆಸೆಯಿಂದಲೇ ವ್ಯಕ್ತಿತ್ವವನ್ನು ನಿಮರ್ಿಸಿಕೊಳ್ಳಲು ಮುಂದಾಗಬೇಕು ಎಂದರು.
ಕಾಲೇಜು ಪ್ರಾಚಾರ್ಯ ಪ್ರೊ.ಡಿ.ಹೆಚ್. ಹರೀಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರೊ|| ಜಿ.ವ್ಹಿ.ಕೋರಿ ಅವರ ವ್ಯವಹಾರ ಸಂವಹನ ಕೌಶಲ್ಯ ಕುರಿತು ರಚಿಸಿದ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಬರೆದ ಪುಸ್ತಕಗಳ ಲೋಕಾರ್ಪಣೆಗೊಳಿಸಲಾಯಿತು.
ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ಸಂಘದ ಚೇರಮನ್ನ ಪ್ರೊ.ಬಿ.ಆರ್.ಡಮ್ಮಳ್ಳಿ, ಪ್ರಾಧ್ಯಾಪಕರಾದ ಅಶ್ವಿನಿ ಮಾಯಾಚಾರಿ, ಶ್ವೇತಾ ಪಾಟಿಲ, ಸಂಗೀತಾ ಮಡಿವಾಳರ, ಹೇಮಾ ಗದಗಿಮಠ, ಪಲ್ಲವಿ ಸುಣಗಾರ, ಅನುಷಾ ಕುಬಸದ ಮತ್ತಿತರರು ಉಪಸ್ಥಿತರಿದ್ದರು.