ಕೊಪ್ಪಳ 23: ಕಾಮರ್ಿಕರು ಕಾನೂನು ಅರಿವು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಸಂಜೀವ್ ವಿ. ಕುಲಕಣರ್ಿ ಅವರು ಹೇಳಿದರು.
"ಅಸಂಘಟಿತ ಕ್ಷೇತ್ರಗಳಲ್ಲಿನ ಕಾಮರ್ಿಕರಿಗೆ ಕಾನೂನು ಸೇವೆಗಳ ದಿನಾಚರಣೆ" ಅಂಗವಾಗಿ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾಮರ್ಿಕ ಇಲಾಖೆ ಹಾಗೂ ಕಿನ್ನಾಳ ಗ್ರಾಮದ ಶ್ರೀಸಿದ್ದರಾಮೇಶ್ವರ ಬಾರ್ ಬೆಂಡಿಂಗ್ ಮತ್ತು ಕಟ್ಟಡ ಕಾಮರ್ಿಕರ ಸಂಘ, ಇವರ ಸಹಯೋಗದಲ್ಲಿ ಇತ್ತಿಚಿಗೆ ಕಿನ್ನಾಳ ಗ್ರಾಮದಲ್ಲಿ ಆಯೋಜಿಸಲಾದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಸಂಘಟಿತ ಕ್ಷೇತ್ರಗಳಲ್ಲಿನ ಅತಿಮುಖ್ಯವಾದ ಅಂಶವೆಂದರೆ ಹೆಚ್ಚಿನಂತೆ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ನೀಡುವ ಕಾಮರ್ಿಕ ಕಾನೂನುಗಳು, ನಿಯಮಗಳು ಇಲ್ಲದಿರುವುದು. ಈ ಅಸಂಘಟಿತ ಕಾಮರ್ಿಕರ ಸಾಮೂಹಿಕ ವ್ಯವಹಾರಿಕ ಅಶಕ್ತತೆ ಕಾರಣ ಅವರು ಸುಲಭವಾಗಿ ಹೆಚ್ಚಿನ ಶೋಷಣೆಗೆ ಒಳಗಾಗುತ್ತಾರೆ. ಕಾಮರ್ಿಕರನ್ನು ಸಂಘಟಿತ ವಾತಾವರಣದಲ್ಲಿ ಮಾಡುತ್ತಾ ಅತೀ ಕಡಿಮೆ ಕೂಲಿ ಪಡೆಯುತ್ತಿದ್ದು, ಈ ಕೆಲಸಗಳು ಸ್ವಲ್ಪ ಕಾಲಕ್ಕೆ ಮಾತ್ರ ಲಭ್ಯವಿರುವುದರಿಂದ ಹಾಗೂ ಉದ್ಯೋಗ ಭರವಸೆ ಇಲ್ಲದಿರುವ ಕಾರಣಕ್ಕಾಗಿ ಕೆಲಸಗಾರರು ಸಾಮಾನ್ಯವಾಗಿ ಗುಳೇಹೋಗುತ್ತಾರೆ. ಇದರಿಂದ ಜನರಿಗೆ ನೌಕರಿಗೆ ಅಡಚಣೆ ಉಂಟಾಗಿ ಅವರ ಮಕ್ಕಳ ವಿದ್ಯಾಭ್ಯಾಸ ಕುಠಿತಗೊಳ್ಳುವುದಲ್ಲದೆ ಕಾಮರ್ಿಕರು ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡಬೇಕಾದ ಸ್ಥಿತಿ ನಿಮರ್ಾಣವಾಗುತ್ತದೆ. ಆದ ಕಾರಣ ಕಾಮರ್ಿಕರು ಸಕರ್ಾರದ ಸೌಲಭ್ಯಗಳನ್ನು ಪಡೆಯುವುದರ ಜೊತೆಗೆ ಕಾನೂನು ಅರಿವನ್ನು ಪಡೆದುಕೊಳ್ಳುವುದು ಮುಖ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಸಂಜೀವ್ ವಿ. ಕುಲಕಣರ್ಿ ಅವರು ಹೇಳಿದರು.
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ ಅವರು ಮಾತನಾಡಿ, ಕಾಮರ್ಿಕರಿಗಾಗಿ ಸಕರ್ಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಪಡೆದುಕೊಳ್ಳುವಲ್ಲಿ ಕಾಮರ್ಿಕರು ಮುಂದಾಗಬೇಕು. ಅಷ್ಟೇ ಅಲ್ಲದೆ ವೃತ್ತಿ ಜೀವನ ಕಟ್ಟಿಕೊಳ್ಳಲು ಕಾಮರ್ಿಕ ಇಲಾಖೆ ವತಿಯಿಂದ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದ್ದು, ಇಂತಹ ತರಬೇತಿಗಳಲ್ಲಿ ಕಾಮರ್ಿಕರು ಪಾಲ್ಗೊಂಡು ಸಕರ್ಾರದಿಂದ ದೊರಕುವ ಅನೇಕ ಸೌಲಭ್ಯಗಳಿಂದ ವಂಚಿತರಾಗದೇ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ. ಶ್ರೀನಿವಾಸ್ ಅವರು ಮಾತನಾಡಿ, ಕಾಮರ್ಿಕರಿಗೆ ಯಾವುದೇ ರೀತಿಯ ಕಾನೂನಾತ್ಮಕ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪಕರ್ಿಸಿ. ಕಾಮರ್ಿಕರು ಕಾನೂನು ಸೇವೆಗಳ ಸೌಲಭ್ಯಗಳನ್ನು ಹೇಗೆ ಪಡೆಯಬೇಕು ಮತ್ತು ಯಾಕೆ ಪಡೆಯಬೇಕು ಎಂಬುವುದರ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ತಮಗೆ ಸಂಪೂರ್ಣ ಮಾಹಿತಿ ನೀಡಲಿದೆ ಎಂದರು.
ವಕೀಲರಾದ ಎಂ. ಹನುಮಂತ್ರಾವ್ ಮತ್ತು ಜಿಲ್ಲಾ ಕಾಮರ್ಿಕ ನೀರಿಕ್ಷಕ ಹೊನ್ನಪ್ಪ ಅವರು ಕಾಮರ್ಿಕರಿಗೆ ಸಕರ್ಾರದ ವಿವಿಧ ಯೋಜನೆಗಳ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದರಾಮೇಶ್ವರ ಬಾರ್ ಬೆಂಡಿಂಗ್ ಮತ್ತು ಕಟ್ಟಡ ಕಾಮರ್ಿಕರ ಸಂಘದ ಅಧ್ಯಕ್ಷ ಬಸವರಾಜ ಚಿಲವಾಡಗಿ ವಹಿಸಿದ್ದರು. ಕಾಮರ್ಿಕರು, ಸಾರ್ವಜನಿಕರು ಮತ್ತು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.