ಲೋಕದರ್ಶನ ವರದಿ
ಗಂಗಾವತಿ: ಬಾಲಾಜಿ ಗ್ಯಾಸ್ ಕಂಪನಿ ಕಾಮರ್ಿಕರನ್ನು ಶೋಷಣೆ ಮಾಡುತ್ತಿದ್ದು ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಕಾಮರ್ಿಕ ಸಂಘಟನೆಗಳ ಮತ್ತು ಗ್ರಾಹಕ ಸಂಘಟನೆಗಳ ಅಧ್ಯಕ್ಷ ಅಡಿವೆಪ್ಪ ತಿಳಿಸಿದರು.
ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಪಕ್ಕದ ಬಳ್ಳಾರಿ, ಕಂಪ್ಲಿ ಮತ್ತು ಹೊಸಪೇಟೆ ಪಟ್ಟಣಗಳಲ್ಲಿ ಸಿಲೆಂಡರ್ ಲೋಡ್ ಮತ್ತು ಅನ್ ಲೋಡ್ ಮಾಡುವ ಕಾಮರ್ಿಕರಿಗೆ ಹೆಚ್ಚಿನ ಹಮಾಲಿ ನೀಡುತ್ತಿದ್ದಾರೆ. ಆದರೆ ಬಾಲಾಜಿ ಗ್ಯಾಸ್ ಕಂಪನಿ ಮಾಲೀಕರು ಕಡಿಮೆ ಹಮಾಲಿ ನೀಡಿ ಕಾಮರ್ಿಕರ ಶೋಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾಮರ್ಿಕರಿಗೆ ನಿಗದಿತ ವೇತನ ನೀಡಬೇಕು ಎಂದು ಒತ್ತಾಯಿಸಿದ ಅವರು ಕಾಮರ್ಿಕರು ತಮ್ಮ ನ್ಯಾಯಯುತ ಬೇಡಿಕೆಯನ್ನು ಕೇಳಿದರೆ ಕಂಪನಿ ಮಾಲೀಕರು ದೌರ್ಜನ್ಯ ಎಸಗುತ್ತಾರೆ ಎಂದು ಹೇಳಿದರು. ಜೀವ ವಿಮೆ, ಪಿಎಫ್, ಗುರುತಿನ ಚೀಟಿ ಮತ್ತು ಮಹಿಳಾ ಕಾಮರ್ಿಕರಿಗೆ ಪ್ರತ್ಯೇಕ ಶೌಚಾಲಯ ನಿಮರ್ಿಸಬೇಕು ಎಂದು ಅವರು ಒತ್ತಾಯಿಸಿದರು. ಬಸವರಾಜ, ಹುಲುಗಪ್ಪ, ತಿಮ್ಮಣ್ಣ, ಸಯ್ಯದ್, ರಾಜೇಶ್ವರಿ, ಕರಿಯಪ್ಪ, ಶಂಕರಪ್ಪ, ಶ್ರೀಕಾಂತ, ಲಿಂಗಪ್ಪ ಹಣವಾಳ, ಯಮನೂರಪ್ಪ ಪಾಲ್ಗೊಂಡಿದ್ದರು.