ಲೋಕದರ್ಶನ ವರದಿ
ಬೆಳಗಾವಿ
14-. ಜಗತ್ತಿನಲ್ಲಿ ಸಾವಿರಾರು ಭಾಷೆಗಳು ತುಟಿಯಲ್ಲಿಯೇ ನಗಿಸಬಲ್ಲವು ಆದರೆ ಹೃದಯದಿಂದ ನಗಿಸಬಲ್ಲ
ಏಕೈಕ ಭಾಷೆ ಕನ್ನಡ. ಸುಂದರ ಬದುಕಿಗೆ ನಗುವೇ
ಟಾನಿಕ್ ಎಂದು ಲಕ್ಷೇಶ್ವರದ
ಅಗಡಿ ಇಂಜನಿಯರಿಂಗ್ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ.
ಎಚ್. ಕೆ ಭಾರ್ಗವ ಇಂದಿಲ್ಲಿ
ಹೇಳಿದರು.
ನಗರದ
ಹಾಸ್ಯಕೂಟ ಹಾಗೂ ಕನ್ನಡ
ಸಾಹಿತ್ಯ ಭವನ ವಿಶ್ವಸ್ತ ಮಂಡಳಿ
ಸಂಯುಕ್ತ ಆಶ್ರಯದಲ್ಲಿ ಕನ್ನಡ
ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ "ಹಾಸ್ಯ ಸಂಗಮ" ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಭಾರ್ಗವ ಮೇಲಿನಂತೆ ಅಭಿಪ್ರಾಯ ಪಟ್ಟರು.
ಮುಂದೆ
ಮಾತನಾಡುತ್ತ ಪ್ರೊ. ಭಾರ್ಗವ ಕನ್ನಡ
ಅನ್ನದ ಭಾಷೆಯಾಗಬೇಕು. ಕನ್ನಡ ಭಾಷೆ ಕಲಿತವನಿಗೂ
ಭಾಷೆಯ ಬಲದಿಂದ ಜೀವನ ನಡೆಸುವಂತಹ ವಾತವರಣ
ನಿಮರ್ಾಣವಾದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ. ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಹಾಗೂ ಕಾಯುವ ಕೆಲಸವನ್ನು ಹಾಸ್ಯಕೂಟವು
ಮಾಡುತ್ತಲಿದೆ ಎಂದು ಹಾಸ್ಯಕೂಟ
ಕಾರ್ಯವೈಖರಿಯನ್ನ ಕೊಂಡಾಡಿದರು.
ಪ್ರೊ.
ಜಿ. ಕೆ. ಕುಲಕಣರ್ಿ
ನಗಿಸುವುದು ತುಂಬ ಕಷ್ಟದ ಕೆಲಸ. ನೈಜ
ನಗೆಯನು ಹುಟ್ಟಿಸುವಂತಹ ಹಾಸ್ಯ
ನಮ್ಮದಾಗಿರಬೇಕು. ದಿನನಿತ್ಯ ನಡೆಯುವ ಘಟಣೆಗಳನ್ನೆ ತಮ್ಮದೇ
ಆ ಶೈಲಿಯಲ್ಲಿ ನಗೆಸುವ ಕಲೆ ಮಾತುಗಾರನಲ್ಲಿರುತ್ತದೆ. ಅದು ಸತತ
ಪ್ರಯತ್ನದಿಂದ ಮಾತ್ರ ಸಾಧಿಸಲು ಸಾಧ್ಯ ಎಂದು ಹೇಳಿ ತಮ್ಮ
ಅನುಭವಗಳನ್ನು ಹಂಚಿಕೊಳ್ಳುತ್ತ ಜನರನ್ನು ರಂಜಿಸಿದರು.
ಬೈಲಹೊಂಗಲದ ಎಂ.
ಬಿ .ಹೊಸಳ್ಳಿ ನಗೆಯೆಂಬ ಔಷಧಿಗೆ ಎಕ್ಸಪೈರಿ
ಡೆಟ್ ಅಂತಾ ಇರೊದಿಲ್ಲ ಇದನ್ನು
ಯಾವಾಗ್ಯ ಬೇಕಾದಾಗ ಸ್ವೀಕರಿಸಬಹುದು ರೋಗ ನಿವಾರಣೆ ಖಚಿತ.
ಆದ್ದರಿಂದ ಎಲ್ಲರೂ ನಗು ನಗುತ್ತ ಬಾಳಿ.
ನಗುವಿನಿಮದ ನಿರೋಗಿಗಳಾಗಿ
ಎಂಬ ಮಾತನ್ನು ಹೇಳುವುದರ ಮೂಲಕ ಜನರನ್ನು ಹಲವಾರು
ಪ್ರಸಂಗಗಳನ್ನ ಹಂಚಿಕೊಳ್ಳುವುದರ ಮೂಲಕ ನಗೆಸಿದರು.
ಕಾರ್ಯಕ್ರಮದಲ್ಲಿ
ಅರವಿಂದ ಹುನಗುಂದ ಉಪಸ್ಥಿತರಿದ್ದರು. ಪ್ರೊ. ಎಂ. ಎಸ್. ಇಂಚಲ
ಅಧ್ಯಕ್ಷತೆ ವಹಸಿದ್ದರು. ಶ್ರೀಮತಿ ಮಾಧುರಿ ಬಂಡಿವಾಡ ಪ್ರಾಯೊಜಕತ್ವ ವಹಿಸಿಕೊಂಡಿದ್ದರು. ಕಲಾವಿದ
ಜಿ. ಎಸ್ .ಸೋನಾರ ತಮ್ಮ
ಮಾತುಗಳಿಂದ ರಂಜಿಸಿದರು. ಗುಂಡೆನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು.