ಬಾಲಿವುಡ್ ಬ್ಯೂಟಿಫುಲ್ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮದುವೆ ನಂತರ ಈಗ ಬಾಲಿವುಡ್ ನ ಕಿರುತೆರೆ ಕಲಾವಿದ ಕಪಿಲ್ ಶಮರ್ಾ ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟಿದ್ದಾರೆ. 'ಕಾಮಿಡಿ ನೈಟ್ಸ್ ವಿತ್ ಕಪಿಲ್ ಶಮರ್ಾ ಕಾರ್ಯಕ್ರಮದ ಮೂಲಕ ಜನರನ್ನ ನಕ್ಕು ನಗಿಸುತ್ತಿದ್ದ ಕಪಿಲ್ ಶಮರ್ಾ ತಮ್ಮ ಬಹುಕಾಲದ ಗೆಳತಿ ಗಿನ್ನಿ ಚತ್ರಾತ್ ಅವರ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.
ಡಿಸೆಂಬರ್ 12 ರಂದು ಜಲಾಂದರ್ ನಲ್ಲಿ ನಡೆದ ಮದುವೆಯಲ್ಲಿ ಪಂಜಾಬಿ ಸಂಪ್ರದಾಯದಂತೆ ಕಪಿಲ್ ಮತ್ತು ಗಿನ್ನಿ ವಿವಾಹವಾದರು. ಬಹುದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಕೊನೆಗೂ ಮದುವೆ ಆಗುವ ಮೂಲಕ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಪಿಲ್ ಮತ್ತು ಗಿನ್ನಿ ಮದುವೆ ಸಮಾರಂಭಕ್ಕೆ ಹಲವು ಪಂಜಾಬಿ ಸಿನಿಮಾ ತಾರೆಯರು ಸೇರಿದಂತೆ ಗಣ್ಯರು ಆಗಮಿಸಿದ್ದರು. ಕೃಷ್ಣ ಅಭಿಷೇಕ್, ಸುಮೋನಾ ಚಕ್ರವತರ್ಿ, ಹಷರ್್ ಲಿಂಬಾಚಿಯಾ, ಭಾರತಿ ಸಿಂಗ್ ಸೇರಿದಂತೆ ಚಿತ್ರರಂಗದ ಸ್ನೇಹಿತರು ಹಾಗೂ ಕುಟುಂಬಸ್ಥರು ಮದುವೆಯಲ್ಲಿ ಪಾಲ್ಗೊಂಡು ನವಜೋಡಿಗೆ ಶುಭಹಾರೈಸಿದರು.
ಯಾರು ಈ ಗಿನ್ನಿ? ಕಪಿಲ್ ಶಮರ್ಾ ಮದುವೆ ಆಗಿರುವ ಹುಡುಗಿ ಪೂರ್ಣ ಹೆಸರು ಗಿನ್ನಿ ಚತ್ರಾತ್. ಈ ಹಿಂದೆ ಕಪಿಲ್ ಜೊತೆ 'ಊಚಿ ಃಚಿಟಥಿಜ' ಎಂಬ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು. ಇವರು ಪ್ರಸ್ತುತದಲ್ಲಿ ಜಲಾಂಧರ್ ನಲ್ಲಿ ವಾಸವಾಗಿದ್ದಾರೆ. ಕಪಿಲ್ ಶಮರ್ಾ ಮತ್ತು ಗಿನ್ನಿ ಚತ್ರಾತ್ ಇಬ್ಬರು ಕಾಲೇಜ್ ಫ್ರೆಂಡ್ಸ್ ಆಗಿದ್ದು, ಕಳೆದ 10 ವರ್ಷಗಳಿಂದ ಇಬ್ಬರು ಪರಿಚಿತರು.