ಮೊಳಗಿದ ಪಟಾಕಿ ಬೇಡ ಧ್ವನಿ ದೀಪ ಹಚ್ಚೋಣ ಬನ್ನಿ, ಗಿಡ ನೆಡೋಣ ಬನ್ನಿ

ಲೋಕದರ್ಶನ ವರದಿ

ಮುದ್ದೇಬಿಹಾಳ 04: ದೀಪಾವಳಿ ಹಬ್ಬದ ಸಮಯದಲ್ಲಿ ಪರಿಸರ ಕಲುಷಿತಗೊಳಿಸುವ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮಾಡುವ, ಅನೇಕ ಮಕ್ಕಳಿಗೆ ಅಪಾಯ ತಂದೊಡ್ಡಬಹುದಾದ ಪಟಾಕಿಗಳಿಂದ ದೂರ ಇರೋಣ ಎನ್ನುವ ಸಂದೇಶ ಸಾರುವ "ಪಟಾಕಿ ಬೇಡ" ಅಭಿಯಾನವನ್ನು ಭಾನುವಾರ ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿತ್ತು. 

ಪಟ್ಟಣದ ಕೆರೆಯ ಹತ್ತಿರದ ಇಂದಿರಾ ವೃತ್ತದಿಂದ ಆರಂಭವಾದ ಅಭಿಯಾನದಲ್ಲಿ ಪಾದಯಾತ್ರೆ ನಡೆಸಿದ ಸದಸ್ಯರು, ಪಟಾಕಿ ತಂದೊಡ್ಡಬಹುದಾದ ಅಪಾಯಗಳನ್ನು ಘೋಷಣೆಗಳ ಮೂಲಕ ಸಾರುತ್ತ ನಡೆದರು. ಭಿತ್ತಿ ಫಲಕಗಳಲ್ಲಿ  "ಪಟಾಕಿ, ಕಣ್ಣು ಕಿವಿಗೆ ಮಾರಕ, ಪಟಾಕಿ ಬಿಟ್ಟಾಕಿ, ಪಟಾಕಿ ವಿಷವಾಯು ಮಾರಣಾಂತಿಕ, ಪ್ರಾಣಿ, ಪಕ್ಷಿಗಳಿಗೆ ಮಾರಕ, ಪಟಾಕಿಯಿಂದ ಪರಿಸರ ಮಾಲಿನ್ಯ, ಪಟಾಕಿ, ಹಣಕ್ಕೆ ಬೆಂಕಿ ಇಟ್ಟಂತೆ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ, ದೀಪ ಹಚ್ಚೋಣ, ಕತ್ತಲೆ ಕಳೆಯೋಣ, ಚೈನಾ ದೇಶದ ಪಟಾಕಿ ಬೇಡ ಎಂಬ ಸಂದೇಶಗಳು ಇದ್ದವು.

ಪಾದಯಾತ್ರೆಯ ಕೊನೆಗೆ ಡಾ.ಅಂಬೇಡ್ಕರ ವೃತ್ತದಲ್ಲಿ ನಡೆದ ಸಮಾರೋಪದಲ್ಲಿ ಮಾತನಾಡಿದ ಡಾ.ಉತ್ಕರ್ಷ ನಾಗೂರ, ಡಾ.ವೀರೇಶ ಇಟಗಿ, ಸಂಚಾಲಕ ಮಹಾಬಲೇಶ ಗಡೇದ, ಶ್ರೀನಿವಾಸರಾವ ಕುಲಕರ್ಣಿ, ಪಟಾಕಿ ಸುಡುವುದರಿಂದ ಆಗುವ ಅನಾಹುತಗಳ ಬಗ್ಗೆ ಮಾತನಾಡಿದರು. ಪಾದಯಾತ್ರೆಯಲ್ಲಿ ಪಟಾಕಿಗಳಿಂದಾಗುವ ಅಪಾಯಗಳನ್ನು ವಿವರಿಸುವ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. 

ಬಳಗದ ಅಧ್ಯಕ್ಷ ಕೆ.ಆರ್.ಕಾಮಟೆ ಹಲಗೆ ಬಾರಿಸುತ್ತ ಘೋಷಣೆ ಕೂಗುತ್ತ ನಡೆದರು. ಅಭಿಯಾನದಲ್ಲಿ ಕಾರ್ಯದಶರ್ಿ ರಾಜಶೇಖರ ಕಲ್ಯಾಣಮಠ, ಅಶೋಕ ರೇವಡಿ, ಅಮರೇಶ ಗೂಳಿ, ಸುರೇಶ ಕಲಾಲ, ಸೋಮಶೇಖರ ಚೀರಲದಿನ್ನಿ, ನಾಗಭೂಷಣ ನಾವದಗಿ ವಕೀಲರು. ವೀರೇಶ ಹಂಪನಗೌಡ್ರ, ಎಲ್.ಎಂ.ಚಲವಾದಿ, ಜಿ.ಎಂ.ಹುಲಗಣ್ಣಿ, ವಿಲಾಸ ದೇಶಪಾಂಡೆ, ಹೇಮಂತ ಹಡಲಗೇರಿ, ಸೋಮಶೇಖರ ಅಣೆಪ್ಪನವರ, ಎಂ.ಎಸ್.ಗೌಡರ, ಬಿ.ಎಂ.ಪಲ್ಲೇದ, ಸಂಗಮೇಶ ನವಲಿ, ಖಾಜಾಹುಸೇನ ಹುನಕುಂಟಿ, ಪಿ.ಡಿ.ಓ ಪಿ.ಎಸ್.ನಾಯ್ಕೋಡಿ, ಮುತ್ತು ಗಣಾಚಾರ್ಯ, ಎಸ್.ಎ.ಬೇವಿನಗಿಡದ, ಶೇಖ್ ಲಾಡ್ಲೇಮಶ್ಯಾಕ ನಧಾಫ, ಗುಲಾಮ ದಫೇದಾರ, ರವಿ ಗೂಳಿ, ಸತೀಶ ಓಸ್ವಾಲ, ರಾಜೇಂದ್ರ ಭೋಸಲೆ ಸೇರಿದಂತೆ ಬಳಗದ ಸದಸ್ಯರು ಪಾಲ್ಗೊಂಡಿದ್ದರು.