ನೇರ ಸಂದರ್ಶನ ಕಾರ್ಯಕ್ರಮಕ್ಕೆ ಆಯ್ಕೆ

ಬ್ಯಾಡಗಿ29:ಪಟ್ಟಣದ ಖ್ಯಾತ ಮಹಿಳಾ ಸಾಹಿತಿ ಸಂಕಮ್ಮ ಸಂಕಣ್ಣನವರ, ದೂರದರ್ಶನದ ಚಂದನ ವಾಹಿನಿಯ 'ಶುಭೋದಯ ಕನರ್ಾಟಕ' ನೇರ ಸಂದರ್ಶನ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

 ಜ.31 ರಂದು ಅಂದು ಬೆಳಿಗ್ಗೆ 7 ರಿಂದ 9 ಗಂಟೆಯವರೆಗೂ ಕಾರ್ಯಕ್ರಮ ಜರುಗಲಿದೆ. ಮಹಿಳಾ ಸಾಹಿತಿಯಾಗಿ, ಲೇಖಕಿ ಯಾಗಿ ಹತ್ತು ಹಲವು ಜೀವನ ಚರಿತ್ರೆಯ ಗ್ರಂಥಗಳನ್ನು ರಚಿಸಿದ್ದಾರೆ, ಚಲನಚಿತ್ರದ 'ಬೆಳ್ಳಿಮಂಡಲ' ಸದಸ್ಯೆಯಾಗಿ ಕೆಲಸ ಮಾಡಿದ ಅನುಭವ ಅವರಿಗಿದ್ದು, ಇತ್ತೀಚೆಗೆ ಬಿಡುಗಡೆಯಾದ 'ಮೈಲಾರ ಮಹದೇವ' ಚಲನಚಿತ್ರದಲ್ಲಿಯೂ ನಟಿಸಿದ್ದಾರೆ, ಇತ್ತೀಚೆಗೆ ಧಾರವಾಡದ ಪ್ರತಿಷ್ಟಿತ ಕನರ್ಾಟಕ ವಿದ್ಯಾವರ್ಧಕ ಸಂಸ್ಥೆಯ ಸಂಕಮ್ಮ ಅವರನ್ನು ಉಪಾಧ್ಯಕ್ಷೆ ಮಾಡಿದ್ದು ಅವರ ಜೀವನದ ಮೈಲಿಗಲ್ಲುಗಳಾಗಿವೆ, ಸಂಕಮ್ಮ ಅವರ ಸಾಧನೆಗಳನ್ನು ಪರಿಗಣಿಸಿದ ದೂರದರ್ಶನ ವಾಹಿನಿಯು ಸಾಧನೆಯನ್ನು 'ಶುಭೋದಯ ಕನರ್ಾಟಕ' ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.