ಬೈಲಹೊಂಗಲ ತಾಲೂಕಿನ ಚಿವುಟಗುಂಡಿ : 40 ವರ್ಷಗಳ ನಂತರ ಚಿವುಟಗುಂಡಿ ಗ್ರಾಮದೇವಿ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ


23 ರಿಂದ ಏಪ್ರಿಲ್ 5 ರವರೆಗೆ ಅದ್ದೂರಿಯಿಂದ ಮಾಡಲು ನಿಧರ್ಾರ 

ಬೈಲಹೊಂಗಲ 18: ತಾಲೂಕಿನ ಚಿವುಟಗುಂಡಿ ಗ್ರಾಮದ ಬಸವೇಶ್ವರ ಹಾಗೂ ಗ್ರಾಮದೇವಿ ಜಾತ್ರಾ ಮಹೋತ್ಸವವು ಮಾರ್ಚ ದಿ. ಶನಿವಾರ 23 ರಿಂದ ಏಪ್ರಿಲ್ 5 ರವರೆಗೆ ಸಡಗರ ಸಂಭ್ರಮದಿಂದ ಜರುಗುವುದು ಎಂದು ಬಿ.ಬಿ.ಸಂಗನಗೌಡ್ರ ಹೇಳಿದರು.

      ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,  ಸುಮಾರು 40 ವರ್ಷದ ನಂತರ ಗ್ರಾಮದಲ್ಲಿ ಗ್ರಾಮದೇವಿ ಜಾತ್ರೆ ನಡೆಯುತ್ತಿದ್ದು ಗ್ರಾಮಸ್ಥರೆಲ್ಲರೂ ಕೂಡಿ ಜಾತಿ ಭೇದ ಭಾವ ಎನ್ನದೇ ಅದ್ದೂರಿಯಾಗಿ ಮಾಡಲಾಗುವುದು ಎಂದರು. 

      ಶನಿವಾರ ದಿ.23 ರಂದು  ಮುಂಜಾನೆ 11 ಘಂಟೆಗೆ ದೊಡವಾಡ  ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳಿಂದ ಶ್ರೀ ಬಸವಣ್ಣನ ಹಾಗೂ ಶ್ರೀದೇವಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವುದು. ಸಂಜೆ 7 ಗಂಟೆಗೆ ನಡೆಯುವ ಪ್ರವಚನವನ್ನು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಗಳು ಉದ್ಘಾಟಿಸುವರು. ದೊಡವಾಡ  ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸುವರು.ನಂತರ ವಿವಿಧ ಗಣ್ಯಮಾನ್ಯರನ್ನು ಸನ್ಮಾನಿಸಲಾಗುವುದು ಎಂದರು.

    ರವಿವಾರ  ದಿ.24 ರಂದು ಬೆಳಿಗ್ಗೆ ಪಲ್ಲಕ್ಕಿ ಉತ್ಸವ ಹಾಗೂ ಮುತೈದೆಯರಿಗೆ ಉಡಿ ತುಂಬುವಲಾಗವುದು. ಸಂಜೆ 7 ಗಂಟೆಗೆ ಪ್ರವಚನವನ್ನು ನೇಗಿನಹಾಳ ಬಸವಸಿದ್ದಲಿಂಗ ಸ್ವಾಮಿಜಿ, ಪ್ರೇಮಕ್ಕ ಅಂಗಡಿ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಗಣ್ಯಮಾನ್ಯರನ್ನು ಸನ್ಮಾನಿಸಲಾಗುವುದು.

   ಸೋಮವಾರ ದಿ.25 ರಂದು  ಮದ್ಯಾಹ್ನ ಸರ್ವಧರ್ಮ ಸಾಮೂಹಿಕ ವಿವಾಹ ಜರಗುವವು. ಶ್ರೀಕ್ಷೇತ್ರ ಇಂಚಲದ ಡಾ. ಶಿವಾನಂಧ ಭಾರತಿ ಶ್ರೀಗಳು ಸಾನಿಧ್ಯ ವಹಿಸುವರು. ನಾಗನೂರು ರುದ್ರಾಕ್ಷಿಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಗಳು, ಮುರಗೋಡದ ನೀಲಕಂಠ ಸ್ವಾಮಿಗಳು, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಗಳು, ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಗಳು ಆಗಮಿಸುವರು. ಸಂಜೆ 4 ಗಂಟೆಗೆ ಬಸವೇಶ್ವರ ಮಹಾರಥೋತ್ಸವಕ್ಕೆ  ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಗಳು ಚಾಲನೆ ನೀಡುವರು. ಸಂಜೆ 7 ಕ್ಕೆ  ಪ್ರೇಮಕ್ಕಾ ಅಂಗಡಿ ಅವರಿಂದ ಪ್ರವಚನ ಕಾರ್ಯಕ್ರಮ ಜರುಗುವದು.  ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ  ಶಿವಾನಂದ ಕೌಜಲಗಿ, ರಥ ಶಿಲ್ಪಿ ರಾಜು ಬಡಿಗೇರ, ತೇರಿಗೆ ರುದ್ರಾಕ್ಷಿ ಮಾಲೆ ಮಾಡಿಸಿದ ಬಸನಗೌಡ ಸಂಗನಗೌಡರ ಅವರನ್ನು ಸನ್ಮಾನಿಸಲಾಗುವದು ಎಂದರು. ರಾತ್ರಿ ಗ್ರಾಮಸ್ಥರಿಂದ ಜಗಜ್ಯೋತಿ ಬಸವೇಶ್ವರ ನಾಟಕ ಜರುಗುವದು.

   ಮಂಗಳವಾರ ದಿ.26 ರಂದು ಬೆಳಿಗ್ಗೆ ಗ್ರಾಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರಗುವುದು.  ರಾತ್ರಿ 8 ಗಂಟೆಗೆ ಶಿವಾಜಿ ಬುಡರಕಟ್ಟಿ ಇವರಿಂದ ಡೊಳ್ಳಿನವಾದಿ ಹಾಗೂ ಡೊಳ್ಳಿನ ಕಾರ್ಯಕ್ರಮ ಜರುಗುವದು. ಈ ಸಂದರ್ಭದಲ್ಲಿ ವಿವಿಧ ಗಣ್ಯಮಾನ್ಯರನ್ನು ಸತ್ಕರಿಸಲಾಗುವುದು.

    ಬುಧವಾರ ದಿ.27 ರಂದು ಬೆಳಿಗ್ಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ. ರಾತ್ರಿ 8 ಗಂಟೆಗೆ  ಬಸವೇಶ್ವರ ಮೇಲೋಡಿ ಆಕರ್ೆಸ್ಟಾ ಶಿಕ್ಷಕರ ಕಲಾ ಬಳಗದಿಂದ ಮನರಂಜನಾ ಕಾರ್ಯಕ್ರಮ ಜರಗುವುದು. 

    ಗುರುವಾರ ದಿ.28 ರಂದು ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮ. ರಾತ್ರಿ 8 ಗಂಟೆಗೆ ಗುರು ಆಕರ್ೆಸ್ಟ್ರಾ ಅವರಿಂದ ಮನರಂಜನೆ ಕಾರ್ಯಕ್ರಮ. ನಂತರ ಗಣ್ಯಮಾನನ್ಯರನ್ನು ಸತ್ಕರಿಸಲಾಗವುದು.

   ಶುಕ್ರವಾರ ದಿ.29 ರಂದು  ಬೆಳಿಗ್ಗೆ ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮ. ಸಂಜೆ ಗ್ರಾಮಸ್ಥರಿಂದ  ಕಾಲು ಕೆದರಿದ  ಹುಲಿ ನಾಟಕ ಮೂಡಿ ಬರುವುದು. ನಂತರ ಗಣ್ಯಮಾನ್ಯರನ್ನು ಸತ್ಕರಿಸಲಾಗವುದು.

    ಶನಿವಾರ 30 ರಂದು ಗ್ರಾಮದೇವತೆಗೆ ಉಡಿ ತುಂಬುವ ಕಾರ್ಯಕ್ರಮ. ರಾತ್ರಿ ಇಂಚಲದ ಬಾಬುನಾಯ್ಕ ರಾಯನಾಯ್ಕರ ಅವರಿಂದ ಸಂಗೀತ ಸೇವೆ ನಡೆಯಲಿದೆ.

       ರವಿವಾರ ದಿ.31 ರಂದು ಬೆಳಿಗ್ಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ ಪವಾಡ ಬಸವೇಶ್ವರ ನಾಟ್ಯ ಸಂಘದಿಂದ ನಿಜಗುಣ ಶಿವಯೋಗಿ ಸಣ್ಣಾಟ ಜರಗುವುದು.

    ಸೋಮವಾರ ದಿ. 1 ರಿಂದ 4 ವರೆಗೆ ಬೆಳಿಗ್ಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಹೊನ್ನಾಟ  ಜರಗುವುದು.

     ಶುಕ್ರವಾರ  ದಿ. 5 ರಂದು ಬೆಳಿಗ್ಗೆ  ಗ್ರಾಮದೇವಿಗೆ ಅಭಿಷೇಕ ಶ್ರೀದೇವಿಯನ್ನು ಗದ್ದುಗೆಗೊಳಿಸುವುದು, ಉಡಿ ತುಂಬುವ ಕಾರ್ಯಕ್ರಮ, ಸಂಜೆ ದೀಪೋತ್ಸವ ಕಾರ್ಯಕ್ರಮ ಜರುಗುವದು ಎಂದು ಅವರು ತಿಳಿಸಿದರು.

    ಗೋಷ್ಠಿಯಲ್ಲಿ  ಸಿ.ವಿ.ಮಲ್ಲೂರ, ವಿ.ಆರ್.ಪರ್ವತಗೌಡರ, ಡಿ.ಡಿ.ಮಲ್ಲೂರ, ವ್ಹಿ.ಜಿ.ಪಾಟೀಲ ಇದ್ದರು. 

ಪೊಟೊ ಕ್ಯಾಪ್ಸನ:ಎಚ್18-ಬಿಎಲ್ಎಚ್10

 ಗ್ರಾಮದಲ್ಲಿ ಸುಮಾರು 40 ವರ್ಷಗಳ ನಂತರ ಜರುಗಲಿರುವ ಗ್ರಾಮದೇವಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಗ್ರಾಮದ ಮುಖಂಡರು ಬಿಡುಗಡೆಗೊಳಿಸಿದರು.