ಕಾಗವಾಡ 11: ಮಾಜಿ ಶಾಸಕರು ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷರು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಕಲ್ಲಪಣ್ಣಾ ಮಗೆಣ್ಣವರ ಇವರನ್ನು ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಮಾಡಿದರು.
ಗುರುವಾರ ದಿ. 10ರಂದು ಜೆಡಿಎಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಸಕರ್ಾರಿ ಪ್ರವಾಸಿ ಮಂದಿರದಲ್ಲಿ ಜರುಗಿತು.
ಸಭೆಯಲ್ಲಿ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದಶರ್ಿ ಸುನೀತಾ ಹೊನಕಾಂಬಳೆ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ಸಾತಗೌಡಾ ಪಾಟೀಲ ಇವರ ಪ್ರಮುಖ ಉಪಸ್ಥಿತಿಯಲ್ಲಿ ಕಾಗವಾಡ, ಅಥಣಿ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಯಮಕನಮರಡಿ, ಸದಲಗಾ, ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಸಮ್ಮಿಶ್ರ ಸಕರ್ಾರವಿದ್ದು, ಮುಖ್ಯಮಂತ್ರಿ ಸ್ಥಾನ ನಮ್ಮ ಪಕ್ಷದ ಕುಮಾರಸ್ವಾಮಿಜಿ ವಹಿಸಿದ್ದಾರೆ. ರಾಜ್ಯದಲ್ಲಿಯ ಎಲ್ಲ ರೈತರ ಸಾಲಮನ್ನಾ ಮಾಡಿದ್ದು, ಬೇರೆ ಬೇರೆ ಸಮಾಜದ ಸವರ್ಾಂಗೀಣ ಅಭಿವೃದ್ಧಿಗಾಗಿ ಯೋಜನೆಗಳು ರೂಪಿಸಿದ್ದಾರೆ. ಇದರ ಬಗ್ಗೆ ಕಾರ್ಯಕರ್ತರು ಗ್ರಾಮ ಮಟ್ಟದ ಮತದಾರರಿಗೆ ಮಾಹಿತಿ ನೀಡಬೇಕು ಎಂದು ಪಕ್ಷದ ಹಿರಿಯರು ಎಲ್ಲ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ರಾಜ್ಯದ ಸಮ್ಮಿಶ್ರ ಸಕರ್ಾರದಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಕಚೇರಿಗಳಿಗೆ, ನಿಗಮಗಳಿಗೆ ಸದಸ್ಯರ ನಾಮ ನಿದರ್ೇಶನ ಮಾಡುವದಿದ್ದು ಒಮ್ಮತದಿಂದ ಕಾರ್ಯಕರ್ತರು ಹೆಸರು ಸೂಚಿಸಬೇಕೆಂದು ರಾಜ್ಯ ಯುವಾ ಘಟಕ ಉಪಾಧ್ಯಕ್ಷ ಸಾತಗೌಡಾ ಪಾಟೀಲ ತಿಳಿಸಿದರು.
ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಿರಿಯರಾದ ಲಕ್ಕಪ್ಪಾ ಮೂಡಸಿ, ನಿಪ್ಪಾಣಿಯ ಅಣ್ಣಾ ಪಾಟೀಲ, ಸದಲಗಾದ ಸುಭಾಷ ವಾಳಕಿ, ದಯಾನಂದ ಮಠಪತಿ, ಎಂ.ಕೆ.ಪಾಟೀಲ, ಪ್ರಕಾಶ ಹಲ್ಲೋಳಿ, ಗಿರಿಶ ಬುಟಾಳೆ, ಅಶೋಕ ಚೌಗಲಾ, ಆದಮಶಾ ನದಾಫ, ಬಸವರಾಜ ಪಾಟೀಲ, ಕಾಡಗೌಡಾ ಪಾಟೀಲ, ಮುಸ್ತಾಕ ಅವಟಿ,ಸೇರಿದಂತೆ ಅನೇಕರು ಇದ್ದರು.