ಮಕ್ಕಳು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ : ನ್ಯಾ. ಶಿವಕುಮಾರ

ಲೋಕದರ್ಶನ ವರದಿ

  ಕಾರವಾಡಿ ನ.19: ಕಷ್ಟದಲ್ಲಿರುವಮಕ್ಕಳನ್ನು ರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಅನೇಕ ಕಾನೂನುನಾತ್ಮಕ ಕ್ರಮಗಳು ಜಾರಿಯಲ್ಲಿದ್ದರೂ ಕೂಡಾಪ್ರಜ್ಞಾವಂತರಇಚ್ಛಾಶಕ್ತಿಯಕೊರತೆಯತಿಂದ ಮಕ್ಕಳು ತಮ್ಮ ಮೂಲಭೂತ ಹಕ್ಕುಗಳಿಂದ  ವಂಚಿತರಾಗಿದ್ದಾರೆಎಂದುನ್ಯಾಯಾಧೀಶ ಶಿವಕುಮಾರ ಬಿ. ಹೇಳದರು         

ಅವರುನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಭಾಭವನದಲ್ಲಿರವಿವಾರಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ ಮತ್ತು ಸರಕಾರಿ ಬಾಲಕಿಯರ ಬಾಲಮಂದಿರಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. 

ಪ್ರಜ್ಞಾವಂತ ನಾಗರೀಕ ಸಮಾಜಜಾಗ್ರತವಾಗಿ ಅವಕಾಶ ವಂಚಿತ ಶೋಷಿತ ಮಕ್ಕಳಿಗೆ ಅವಕಾಶಗಳನ್ನು ಒದಗಿಸಿ ಉತ್ತಮ ಪಾಲನೆ, ಪೋಷಣೆ, ರಕ್ಷಣೆ ಹಾಗೂ ಶಿಕ್ಷಣವನ್ನು ಒದಗಿಸಿದಾಗ ಮಕ್ಕಳಲ್ಲಿಯ ಸುಪ್ತ ಪ್ರತಿಭೆಗಳು ಹೊರಹೊಮ್ಮುತ್ತವೆ.  ಇದರಿಂದ ಸದೃಡಆರೋಗ್ಯಕರ ಸಮಾಜ ನಿಮರ್ಾಣವಾಗಲು ಸಾದ್ಯ . ಶಿಕ್ಷಣ ಒಂದು  ಶಕ್ತಿಯಾಗಿದ್ದು ಶೋಷಿತರನ್ನುರಕ್ಷಿಸಲು ಬಳಸಬೇಕು.ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಶಿಷ್ಯವೇತನ ಸೌಲಭ್ಯಗಳು ಇರುವಂತೆಯೇ ಬಡಅನಾಥ  ಶೋಷಿತ ಮಗುವಿನ ಮುಂದಿನ ಜೀವನಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳು ರೂಪುಗೊಳ್ಳಗಬೇಕು. ಕಾನೂನುಗಳು ಎಲ್ಲರಿಗೂ ಸಮಾನವಾಗಿದ್ದು ಅವುಗಳು ಸದುಪಯೋಗವಾಗುವಂತೆ ನೋಡಿಕೊಂಡಾಗ ಮಾತ್ರಯಶಸ್ಸು ಸಾದ್ಯಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಕರಾಜೇಂದ್ರ ಬೇಕಲ್ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ.ಗೋವಿಂದಯ್ಯ, ನ್ಯಾಯಾಧೀಶರುಗಳಾದ ವಿಸ್ಮತಾ ಮೂತರ್ಿ, ವಿನುತಾಡಿ.ಎಸ್ , ಬಂದರು ಇಲಾಖೆ ಅಧಿಕಾರಿ ಸುರೇಶ ಶೆಟ್ಟಿ, ಮಕ್ಕಳ ಕಲ್ಯಾಣ ಸಮಿತಿಅಧ್ಯಕ್ಷೆರಾಜೇಶ್ವರಿ ಕೆ.ಬಿ,ಪದಾಧಿಕಾರಿಗಳಾದ  ಜ್ಯೋತಿ ಮಿರಾಶಿ, ಶ್ರೀಪಾದ ಬಿ. ಬಾಲನ್ಯಾಯ ಮಂಡಳಿ ಸದಸ್ಯರಾದ ಅನು ಕಳಸ,  ಮಾರುತಿ, ಬಾಲಮಂದಿರದಅಧೀಕ್ಷಕಿ ಸುಮಂಗಲಾ ನಾಯಕ ವೇದಿಕೆಯಲ್ಲಿ  ಉಪಸ್ಥಿತರಿದ್ದರು.

 ಮಕ್ಕಳ ದಿನಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರಿಂದ ಬಹುಮಾನವನ್ನು ವಿತರಿಸಲಾಯಿತು.ಆಪ್ತಸಮಾಲೋಚಕಿ ಮೋಹಿನಿ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು.  ದಿವ್ಯಶ್ರೀ ನಾಯಕ ವಂದನಾರ್ಪಣೆ ಸಲ್ಲಿಸಿದರು.