ಲೋಕದರ್ಶನ ವರದಿ
ಯಲಬುಗರ್ಾ24: ನಮ್ಮ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಅಂಗನವಾಡಿಗಳ ಜೋತೆ ಪಾಲಕರ ಸಂಬಂದ ಉತ್ತಮವಾಗಿರಬೇಕು ಅಂದಾಗ ಮಕ್ಕಳ ಬೆಳವಣಿಗೆ ಸಾದ್ಯ ಎಂದು ಪಪಂ ಸದಸ್ಯ ವಸಂತ ಭಾವಿಮನಿ ಹೇಳಿದರು,
ನಗರದ ಮೀನಾಕ್ಷೀ ನಗರದ 9ನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,
ಸರಕಾರದಿಂದ ಸಿಗುವ ಪ್ರತಿ ಸೌಲಭ್ಯಗಳನ್ನ ಬಳಸಿಕೊಳ್ಳಬೇಕು ಅದರಿಂದ ಮಕ್ಕಳ ಹಾಗೂ ದೇಶದ ಅಭಿವೃದ್ಧಿ ಸಾದ್ಯವಾಗುತ್ತದೆ ಎಂದರು,
ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಕುಂತಲಮ್ಮಾ ಮಾಲೀಪಾಟೀಲ, ಮಾತನಾಡಿ ಸರಕಾರಿ ಅಂಗನವಾಡಿಗಳು ಎಂದು ಯಾರು ನಿರ್ಲಕ್ಷ ಮಾಡಬಾರದು ಯಾಕೆಂದರೆ ಇಲ್ಲಿ ಸಿಗುವ ವಿದ್ಯೆ ಬೇರೆ ಕಡೆ ಸಿಗಲು ಸಾಧ್ಯವಿಲ್ಲಾ ನಮ್ಮ ಕ್ಲಬ್ನಿಂದ ಶಾಲೆಗಳಿಗೆ ಬೇಕಾದ ಕೇಲವು ಸಾಮಾಗ್ರಿಗಳನ್ನ ಹಂತ ಹಂತವಾಗಿ ವಿತರಿಸಿ ಮಕ್ಕಳ ಕಲಿಕೆಗೆ ಸಹಾಯ ಮಾಡಲಾಗುವದು ಎಂದರು,
ಸಿಡಿಪಿಒ ಶರಣಮ್ಮ ಕಾರನೂರು ಮಾತನಾಡಿ ಮಕ್ಕಳಲ್ಲಿ ಸತ್ಯ ಹಾಗೂ ಮುಗ್ದತೆ ಇರುತ್ತದೆ ನಾವು ಹೇಗೆ ಕಲಿಸುತ್ತೆವೆ ಹಾಗೇ ಮಕ್ಕಳು ಕಲಿಯುತ್ತವೆ.
ಅಂಗನವಾಡಿ ಶಿಕ್ಷಕೀಯರ ಜೊತೆಗೆ ಪಾಲಕರ ಕಾಳಜಿಯೂ ಅತ್ಯಂತ ಪ್ರಮುಖವಾಗಿದೆ ಅವರಲ್ಲಿ ಐಕ್ಯತೆಯ ಗುಣಗಳನ್ನ ಬೆಳೆಸಬೇಕು ರಾಷ್ಟ್ರ ಪ್ರೇಮದ ಬಗ್ಗೆ ಹೆಚ್ಚು ಮಕ್ಕಳಿಗೆ ತಿಳಿಸಬೇಕು ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ಊಟದ ಜೋತೆಗೆ ಪಾಠವನ್ನು ಉತ್ತಮ ರೀತಿಯಲ್ಲಿ ಹೇಳಿಕೊಡಲಾಗುತ್ತದೆ ಎಂದರು,
ಅಂಗನವಾಡಿ ಮೇಲ್ವೀಚಾರಕಿ ಲಲೀತಾ ನಾಯಕ ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ರಾಷ್ಟ್ರೀಯ ಐಕ್ಯೆತೆಯ ಬಗ್ಗೆ ಪ್ರಮಾಣ ವಚನ ಬೋಧಿಸಿದರು,
ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗೌರಮ್ಮ ಚಳಗೇರಿ, ಮುಖಂಡರಾದ ಶರಣಪ್ಪ ಗಚ್ಚಿನಮನಿ, ರವಿ ಭಜಂತ್ರಿ, ಹನುಮಂತಪ್ಪ ಚನ್ನದಾಸರ, ಅಂಗನವಾಡಿ ಕಾರ್ಯಕತರ್ೆಯರಾದ ಶಾರದಾ ಆಲೂರು, ಅಕ್ಕಮ್ಮ ಕಂಬಳಿ, ಗಂಗಮ್ಮ ನಾಲತ್ವಾಡ, ಸೇರಿದಂತೆ ಮಕ್ಕಳ ತಾಯಂದಿರು, ಸಮನ್ವಯ ಸಮಿತಿ ಸದಸ್ಯರು ಪಾಲಕರು ಹಾಜರಿದ್ದರು.