ಚಿಕ್ಕೋಡಿ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಮಗೆಣ್ಣವರಗೆ ಸನ್ಮಾನ

ಮಾಂಜರಿ 15: ಮುಂಬರುವ ದಿನಮಾನಗಳಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಮತಕ್ಷೇತ್ರದ ಜೊತೆಗೆ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಜಾತ್ಯಾತೀತ ಜನತಾ ದಳ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಪಕ್ಷವನ್ನು ಬಲಿಷ್ಟಗೊಳಿಸಲಾಗುವುದೆಂದು ನೂತನ ಚಿಕ್ಕೋಡಿ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ಣವರ ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಇಂದು ಲಕ್ಷ್ಮೀ ಸೌಹಾರ್ದ ಸಂಸ್ಥೆಯ ಸಭಾಗೃಹದಲ್ಲಿ ಚಿಕ್ಕೋಡಿ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

 ಸಮಾರಂಭದ ಅಧ್ಯಕ್ಷತೆಯನ್ನು ಶಿರಗುಪ್ಪಿ ಗ್ರಾಮದ ಹಿರಿಯ ಮುಖಂಡ ಎಮ್.ಕೆ.ಪಾಟೀಲ ವಹಿಸಿದ್ದರು. ನೂತನವಾಗಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಶಾಸಕ ಕಲ್ಲಪ್ಪಾ ಮಗೆಣ್ಣವರ ಇವರನ್ನು ಚಿಕ್ಕೊಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರದ ಪಕ್ಷ ಹಲವಾರು ಮುಖಂಡರು ಸನ್ಮಾನಿಸಿದರು.

 ರಾಜೇಂದ್ರ ಐಹೋಳೆ, ಗಿರಿಶ ಬುಟಾಳೆ, ರಮೇಶ ಮಾಳಿ, ಬಿ.ಆರ್.ಪಾಟೀಲ, ಪ್ರಮೋದ ಪಾಟೀಲ, ಈರಣ್ಣ ಕುಮಟೋಳಿ, ಪ್ರಕಾಶ ಐಹೊಳೆ ಹಾಗೂ ಹಲವಾರು ಮುಖಂಡರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

 ಸುನಿತಾ ಹೊನಕಾಂಬಳೆ, ಮುಸ್ತಾಕ ಅವಟಿ, ಕಾಡಗೌಡಾ ಪಾಟೀಲ, ಬಸಗೌಡಾ ಪಾಟೀಲ, ಅಣ್ಣಾ ಪಾಟೀಲ, ಜಿನ್ನಪ್ಪಾ ಶೇಡಬಾಳೆ, ಪ್ರಕಾಶ ಹುಲ್ಲೋಳಿ, ರಾಜೇಂದ್ರ ಐಹೊಳೆ, ಬಸವರಾಜ ಪಾಟೀಲ, ಶ್ರೀಶೈಲ ಹಳಸನವರ, ರಾಜೇಶ ಐಹೊಳೆ ಹಾಗೂ ಇನ್ನಿತರರು ಹಾಜರಿದ್ದರು.

 ಸುನಿತಾ ಹೊನಕಾಂಬಳೆ ಸ್ವಾಗತಿಸಿ, ಬಿ.ಆರ್.ಕೋಳಿ ನಿರೂಪಿಸಿ, ಚಂದ್ರಕಾಂತ ಪಾಟೀಲ ವಂದಿಸಿದರು.