ಚಿಕ್ಕೋಡಿ ಜಿಲ್ಲೆ ರಾಜ್ಯದಲ್ಲಿ ಮತ್ತೆ ದಾಖಲೆ ಸೃಷ್ಠಿಸಲಿದೆ: ಡಿಡಿಪಿಐ ದಾಸರ

ಕಾಗವಾಡ 08: ಸಾಮಾನ್ಯ ದಿನಗಳಲ್ಲಿ ಪರೀಕ್ಷೆ ಬರೆದು ಬರೆದು ಪರೀಕ್ಷೆ ದಿನ ಸಾಮಾನ್ಯವಾಗಿದೆ. ಇದರಿಂದ ವಿದ್ಯಾಥರ್ಿಗಳಲ್ಲಿಯ ಪರೀಕ್ಷೆ ಬಗ್ಗೆ ಭಯ ಮುಕ್ತಗೊಳಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾಥರ್ಿಗಳು ಭಯಮುಕ್ತವಾಗಿದ್ದರಿಂದ ಕಳೇದ ವರ್ಷದಂತೆ, ಈ ವರ್ಷವು ಚಿಕ್ಕೋಡಿ ಜಿಲ್ಲೆ ರಾಜ್ಯದಲ್ಲಿ ಮತ್ತೆ ದಾಖಲೆ ಸೃಷ್ಠಿಸಲಿದೆ ಎಂದು ಚಿಕ್ಕೋಡಿ ಜಿಲ್ಲಾ ಡಿಡಿಪಿಐ ಎಂ.ಜಿ.ದಾಸರ ಹೇಳಿದರು.

ಗುರುವಾರ ರಂದು ಉಗಾರ ಖುರ್ದ ಪಟ್ಟಣದ ವಿಹಾರ ಸಭಾ ಭವನದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ 8 ವಲಯಗಳ ಬಿಇಒ, ಪರೀಕ್ಷಾ ಕೇಂದ್ರ ಅಧಿಕ್ಷಕರು, ಮುಖ್ಯಾಧ್ಯಾಫಕರು, ವಿಷಯ ಶಿಕ್ಷಕರ ಸಭೆದೊಂದಿಗೆ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳ ಪರೀಕ್ಷಾ ಪೂರ್ವ ಸಿದ್ಧತೆ ಸಭೆ ಹಮ್ಮಿಕೊಂಡಿದ್ದರು.

ಡಿಡಿಪಿಐ ಎಂ.ಜಿ.ದಾಸರ ಮುಂದೆ ವಿವರಿಸುವಾಗ, ಈ ವರ್ಷ ಜೂನ್, ಜುಲೈ ತಿಂಗಳಿನಿಂದ ವಿಶೇಷ ತರಬೇತಿ,ನಾಲ್ಕು ಸರಣಿ ಪರೀಕ್ಷೆ, ಪೂರ್ವ ಸಿದ್ಧತೆ ಪರೀಕ್ಷೆ, ಗುಂಪು ಅಧ್ಯಾಯನ ಮಾಡಿದ್ದಾರೆ. ರಸಪ್ರಶ್ನೆ ಬಿಡಿಸಿದ್ದಾರೆ. ವಿಜ್ಞಾನದ ರಂಗೋಲಿ ಕಾರ್ಯಕ್ರಮ, ಗುರುಜಿಬಂದರು ಗುರುವಾರ ರಂದು ಮಕ್ಕಳ ಮನೆಗೆ ಭೇಟಿ ನೀಡುವ ಕಾರ್ಯಕ್ರಮ, ತಾಯಂದರ ಸಭೆ, ಶಾಲಾ ಅಭಿವೃದ್ಧಿ ಸದಸ್ಯರ ಸಭೆ, ಪ್ರಶ್ನ ಪತ್ರೀಕೆಗಳ ನಿಲಿ ನಕ್ಷೆ ಪರಿಚಯ ಇದರಂತೆ ಮಕ್ಕಳಿಗೆ ತರಬೇತಿ ನೀಡಿದ್ದು, ಅವರಲ್ಲಿ ಯಾವುದೇ ರೀತಿಯ ಭಯವಿಲ್ಲಾ ಎಂದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 130 ಪರೀಕ್ಷಾ ಕೇಂದ್ರಗಳಲ್ಲಿದ್ದು, ಇದರಲ್ಲಿ 40 ಸಾವಿರ ವಿದ್ಯಾಥರ್ಿಗಳು ಪರೀಕ್ಷೆ ನೀಡಲಿದ್ದಾರೆ.ಕಾಗವಾಡ ಬಿಇಒ ಎ.ಎಸ್.ಜೋಡಗೇರಿ, ಮುಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ.ಬಳಿಗಾರ, ಹುಕ್ಕೇರಿ ಬಿಇಒ ಮೋಹನ ದಂಡಿನ, ಚಿಕ್ಕೋಡಿ ಬಿಇಒ ಎ.ಸಿ.ಗಂಗಾಧರ, ಮಧ್ಯಾಹ್ನ ಆಹಾರ ಅಧಿಕಾರಿ ವಿವೇಕ ಕುಲಕಣರ್ಿ, ಅಥಣಿ ಬಿಇಒ ಚನ್ನಪ್ಪಾ ನೇಮಗೌಡಾ, ಕಾಗವಾಡ ದಹಿಕ ಶಿಕ್ಷಣ ವಿಭಾಗ ಪರವೇಕ್ಷಕ ಸಿ.ಎಂ.ಸಾಂಗಲೆ, ಶಿಕ್ಷಣ ಸಂಯೋಜಕ ರವೀಂದ್ರ ಖಡಾಖಡಿ, ಎಸ್.ಬಿ.ಪಾಟೀಲ, ಉಗಾರ ಶ್ರೀಹರಿ ವಿದ್ಯಾಲಯ ಮುಖ್ಯಾಧ್ಯಾಪಿಕೆ ಡಿ.ಡಿ.ಭೋಸಲೆ, ಸೇರಿದಂತೆ ಅನೇಕರು ಇದ್ದರು.