ಲೋಕದರ್ಶನ ವರದಿ
ಕಾಗವಾಡ:ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಉಗಾರ ಖುರ್ದ ಪಟ್ಟಣದಲ್ಲಿ ಮಹಾರಾಜರ ಪ್ರತಿಮೆಯ ಭವ್ಯ ಮೆರವಣಿಗೆ ಜರುಗಿತು.
ಉಗಾರದ ಡಾ. ಜೋಗ ವೃತ್ತದಿಂದ ಛತ್ರಪತಿ ಪ್ರತಿಮೆಗೆ ಸಮಾಜದ ಹಿರಿಯರಾದ ಮಾರುತಿ ದೇಸಾಯಿ ಪೂಜೆ ಸಲ್ಲಿಸಿದರು. ಎಲ್ಲ ಪುರಸಭೆ ಸದಸ್ಯರು, ಮರಾಠಾ ಮಂಡಳದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಜಿಜಾವು ಮಹಿಳಾ ಮಂಡಳದ ಕಾರ್ಯಕರ್ತರು, ಫೇಟಾ ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಎಲ್ಲೆಡೆ 'ಜಯ ಶಿವಾಜಿ, ಜಯ ಭವಾನಿ' ಸ್ವರಣಾದ ಕೇಳಿ ಬರುತ್ತಿತ್ತು. ಬೆಳಿಗ್ಗೆ ಪಟ್ಟಣದ ಮರಾಠಾ ಮತ್ತು ಇತರ ಸಮಾಜದ ಮಹಿಳೆಯರು ಛತ್ರಪತಿ ಶಿವಾಜಿ ಮಹಾರಾಜರ ತೋಟ್ಟಲ ತೂಗುವ್ ಕಾರ್ಯಕ್ರಮ ನೇರವೆರಿಸಿ, ಪಲ್ಲಕ್ಕಿದೊಂದಿಗೆ ಸುಮಂಗಲಿಯರು ಕೃಷ್ಣಾ ನದಿಗೆ ತರಳಿ ಜಲ ಕುಂಭಗಳನ್ನು ತೆಗೆದುಕೊಂಡು ಲಕ್ಷ್ಮೀ ಮಂದಿರ ಹತ್ತಿರದ ಶಿವತಿರ್ಥ ಮಹಾರಾಜರ ಪುತ್ತಳಿಗೆ ಜಲಾಭಿಷೇಕ ಮಾಡಿದರು.
ಮಿರಜದ ಖ್ಯಾತ ಢೋಲ ತಾಷಾ 25 ಜನರ ವಿಶೇಷ ಪಥಕದ ದೃಶ್ಯ ಕಾಣಲು ಅನೇಕರು ಪಾಲ್ಗೊಂಡಿದ್ದರು. ಸುಮಾರು 5 ಗಂಟೆ ಕಾಲ ಮೆರವಣಿಗೆ ನೆರವೇರಿತು.