'ಚತುರ್ಮುಖ' ಪಪ್ಪಾಯಿ!

                                        

        'ವೇಷ ಬದಲಾದರೆ ಭಾಷೆ ಬದಲಾದೀತೆ' ಎನ್ನುವ ಅನುಭವಿಗಳ ಮಾತು ಒಪ್ಪಿ ಕೊಳ್ಳುತ್ತಲೆ 'ಮುಖ ಹತ್ತಾದರೇನು ರುಚಿ ಬದಲಾದೀತೆ' ಎನ್ನುವ ಹೊಸ ನುಡಿಯನ್ನು ಈ 'ಚತುರ್ಮುಖ' ಪಪ್ಪಾಯಿ ನೋಡಿದ ನಂತರ ಸೇರಿಸ ಬಹುದೇನೊ! ನಾಲ್ಕು ಕಡೆಗಳಲ್ಲೂ ಒಂದೊಂದು ಮುಖವನ್ನು ತೋರಿಸುವ ಈ ಪಪ್ಪಾಯಿಯಲ್ಲಿ ನಾಲ್ಕು ಪಪ್ಪಾಯಿಗಳು ಐಕ್ಯಗೊಂಡಿವೆ. ಸಾಕಷ್ಟು ಔಷಧಿಯ ಗುಣ ಹೊಂದಿರುವ ಈ ಪಪ್ಪಾಯಿಯ ರುಚಿಯಲ್ಲಿ ಯಾವ ಬದಾಲಾವಣೆ ಇಲ್ಲ!

        ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಾರಿಮಕ್ಕಿಯ ಮಹಾಭಲೇಶ್ವರ ಹಮ್ಮು ಪಟಗಾರ ಅವರ ತೋಟದಲ್ಲಿ ಬೆಳೆದ ಈ 'ಚತುರ್ಮುಖ' ಪಪ್ಪಾಯಿ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ! 

                                                             -ಬೀರಣ್ಣ ನಾಯಕ ಮೊಗಟಾ.