ಬೆಳಗಾವಿ, 15: ರಾಜ್ಯ ರಾಷ್ಟ್ರ ಪ್ರಶಸ್ತಿ ವಿಭೂಷಿತ ಶಿಕ್ಷಕ ಶಿವಕವಿ ಉಳವೀಶರು `ಸಾವಿರ ಚುಟುಕುಗಳ ಸರದಾರರಾಗಿ ನಾಡಿನ ಎಲ್ಲ ಹಿರಿಕಿರಿಯ ಸಾಹಿತಿ, ವಿದ್ವಾಂಸಕ ವಿಶೇಷ ಗುಣಗಳನ್ನು ಪ್ರಸ್ತಾಪಿಸುವ ಚುರುಕಿನ ಚುಟುಕುಗಳನ್ನು ಬರೆದಿದ್ದಾರೆ ಎಂದು ಸಂಗೀತಜ್ಞ, ಸಾಹಿತಿ, ರಂಗಕಮರ್ಿ ಸಾಹಿತಿ ಶಿರೀಷ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ 15 ರಂದು ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಲಾಗಿದ್ದ, ಶಿವಕವಿ ಉಳವೀಶ ಹುಲೆಪ್ಪನವರಮಠಯವರ ದತ್ತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,ಉಳವೀಶರ ಚುಟುಕುಗಳಲ್ಲಿ ಕಾವ್ಯದ ಸೊಬಗಿದೆ ಓದುಗರ ಮನಸ್ಸನ್ನು ಮುದಗೊಳಿಸುವ ಪ್ರಸನ್ನಗೊಳಿಸುವ ಸಾವಿರಕ್ಕೂ ಅಧಿಕ ಚುಟುಕು-ಚೌಪದಿಗಳನ್ನು ರಚಿಸಿದ್ದಾರೆ ಎಂದರು.
ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಬದಾಮಿ ಮಾತನಾಡಿ, ಜಿಲ್ಲಾ ಲೇಖಕಿಯರ ಸಂಘವು ದತ್ತಿ ಕಾರ್ಯಕ್ರಮದ ಮೂಲಕ ನಾಡಿನ ಹೆಸರಾಂತ ಸಾಹಿತಿಗಳ, ಸಾಹಿತ್ಯ ಕೃತಿಗಳನ್ನು ಸಾಹಿತ್ಯ ಆಸ್ತರನ್ನು ಪರಿಚಯಿಸುವ ಸಾಹಿತ್ಯ ಸೇವೆಗಳ ತನ್ನನ್ನು ಸಮಪರ್ಿಸಿಕೊಂಡಿದೆ.
ದತ್ತಿ ದಾನಿಗಳ ಅಪೂರ್ವ ಸಹಕಾರನ್ನು ಸಂಸ್ಮರಿಸಿದರೆ ವೇದಿಕೆಯ ಮೇಲೆ ದತ್ತಿದಾನಿಗಳಾದ ಪ್ರೋ. ಬಿ ಎಸ್. ಗವಿಮಠ ರಾಷ್ಟ್ರಪ್ರಶಸ್ತಿ ವಿಭೂಷಿತ ಶಿಕ್ಷಕಿ ಶಾಂತಾದೇವಿ ಹುಲೆಪ್ಪನವರಮಠ, ಆಶಾ ಯಮಕನಮರಡಿ, ಸುನಂದಾ ಮೂಳೆ ಇನ್ನಿತರರು ಇದ್ದರು.
ಕೆಎಲ್ಇ ಸಂಸ್ಥೆ ಆಜೀವ ಸದಸ್ಯರು ಹಾಗೂ ನಿವೃತ್ತ ಪ್ರಾಚಾರ್ಯ ಬಿ ಎಸ್. ಗವಿಮಠರವರು ಪ್ರತಿವರ್ಷದಂತೆ ಈ ವರ್ಷವು ಚುಟುಕು ಸ್ಪಧರ್ೆಯಲ್ಲಿ ವಿಜೇತರಾತ ಮಹಿಳೆಯರಿಗೆ ನಗದು ಪುರಸ್ಕಾರವನ್ನು ನೀಡಿ ಪ್ರೋತ್ಸಾಹಿಸಿದರು.
ಸುನೀತಾ ನಂದೆಣ್ಣವರ-ಪ್ರಥಮ, ರಾಜೇಶ್ವರಿ ಹಿರೇಮಠ- ದ್ವೀತಿಯ, ಸುಪ್ರಿಯಾ ದೇಶಪಾಂಡೆ ತೃತೀಯ ಬಹುಮಾನಗಳನ್ನು ಪಡೆದರು. ಹಮೀದಾ ಬೇಗಂ, ಸುನಂದಾ ಹಾಲಭಾವಿ ಸುಮಾ ಕಿತ್ತೂರ ಸಮಾಧಾನಕರ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಸಾಹಿತಿ ದೀಪಿಕಾ ಚಾಟೆ, ಆಶಾ ಕಡಪಟ್ಟಿ ನಿಣರ್ಾಯಕರಾಗಿ ಆಗಮಿಸಿದ್ದರು. ಡಾ. ಶೈಲಜಾ ಕುಲಕಣರ್ಿ ಅತಿಥಿ ಪರಿಚಯಿಸಿದರು. ಅನ್ನಪೂರ್ಣ ಹಿರೇಮಠ ಪ್ರಾಥರ್ಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಡಾ. ನಂದಾ ಘಾಗರ್ಿ ವಂದಿಸಿದರು. ಡಾ. ಬಸವರಾಜ ಜಗಜಂಪಿ, ಸುಭಾಸ ಏಣಗಿ, ಡಾ. ಶಂಕರಮೂತರ್ಿ, ಡಾ. ಹೇಮಾ ಸೊನೋಳ್ಳಿ ಮುಂತಾದವರು ಉಪಸ್ಥಿತರಿದ್ದರು.