ಲೋಕದರ್ಶನ ವರದಿ
ರಾಯಬಾಗ 11: ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರ ಹತ್ತಿರ ತಾಲೂಕು ಆಡಳಿತದಿಂದ ಸಂಗೋಳ್ಳಿ ರಾಯಣ್ಣ ವೀರ ಜ್ಯೋತಿಯನ್ನು ಸಂಭ್ರಮದಿಂದ ಸ್ವಾಗತಿಸಿಕೊಳ್ಳಲಾಯಿತು. ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ವೀರಜ್ಯೋತಿಗೆ ಪೂಜೆ ನೆರವೇರಿಸಿದರು.
ನಂತರ ವೀರಜ್ಯೋತಿಯನ್ನು ಪ್ರವಾಸಿ ಮಂದಿರದಿಂದ ಪಟ್ಟಣದ ಹಳೆ ಪೊಲೀಸ್ ಠಾಣೆವರೆಗೆ ಶಾಲಾ ಮಕ್ಕಳೊಂದಿಗೆ ವೀರಜ್ಯೋತಿಯ ಮೆರವಣಿಗೆ ನಡೆಯಿಸಿ, ಬೀಳ್ಕೊಡಲಾಯಿತು. ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ, ತಾ.ಪಂ.ಇಒ ಡಿ.ಎಮ್.ಜಕ್ಕಪ್ಪಗೋಳ, ಉಪತಹಶೀಲ್ದಾರ ಬಸಪ್ಪ ಪೂಜಾರಿ, ಸದಾನಂದ ಹಳಿಂಗಳಿ, ಬಸವರಾಜ ಡೊಣವಾಡೆ, ಅನೀಲ ಶೆಟ್ಟಿ, ಗೋಮ್ಮಟೇಶ ಪಾಟೀಲ, ಉಮೇಶ ಪೋಳ, ಎಸ್.ಎಮ್.ಹೆಬ್ಬಾಳೆ, ಸಂದೀಪ ಚೌಗಲಾ ಸೇರಿದಂತೆ ಅನೇಕರು ಇದ್ದರು.