ಲೋಕದರ್ಶನ ವರದಿ
ರಾಯಬಾಗ: ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಶ್ರೀ ಚ ವಿ ವ ಸಂಘದ ಆವರಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ಯ ರೈನಬೋ ಸೇಂಟ್ರಲ್ ಸ್ಕೂಲ್, ಬಾ.ಸಿ.ಮ. ಪ್ರಾಥಮಿಕ, ಬ.ನೀ.ಕುಲಿಗೋಡ ಪ್ರೌಢಶಾಲೆ ಹಾಗೂ ಪದವಿ-ಪೂರ್ವ, ಐ,ಟಿ,ಐ ಹಾಗೂ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ವಿದ್ಯಾಥರ್ಿಗಳಿಗೆ ವಿವಿಧ ಸ್ಪರ್ಧೆ ಗಳನ್ನು ಹಾಗೂ ಕೃಷ್ಣ ರಾಧೆಯರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿ ಮಾತನಾಡಿ ಶ್ರೀಕೃಷ್ಣನ ಆಶೀವರ್ಾದದಿಂದ ಈಡೀ ಜಗತ್ತು ಇಂದು ಮುಂದುವರಿದಿದೆ, ಅವನ ಆಜ್ಞೆ ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಸಹ ಅಲಗಾಡಲಾರದು, ಇಂದು ನಾವೇಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಆಶೀವರ್ಾದ ಪಡೆಯೋಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೈನಬೋ ಸೇಂಟ್ರಲ್ ಸ್ಕೂಲ್ನ ಸುಮಾರು 85ಕ್ಕೂ ಹೆಚ್ಚು ಮಕ್ಕಳು ಕೃಷ್ಣ ರಾಧೆಯರ ವೇಷಭೂಷಣ ಧರಿಸಿ ನೃತ್ಯಗಳನ್ನು ಮಾಡುವದರ ಮೂಲಕ ಎಲ್ಲರ ಗಮನ ಸೆಳೆದರು. ನಂತರ ಮಕ್ಕಳಿಗಾಗಿ ಏರ್ಪಡಿಸಿದ ನಡೆದ ವಿವಿಧ ಸ್ಪರ್ಧೆಗಳಲ್ಲಿ ಮೊಸರು ಗಡಿಗೆ ಒಡಿಯುವ ಸ್ಪರ್ಧೆ ಎಲ್ಲರ ಮನಸ್ಸನ್ನು ಸಂತೋಷಗೊಳಿಸುವದರೊಂದಿಗೆ ರೊಮಾಂಚನ ನೀಡಿತು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಡಾ.ಸಿ.ಬಿ.ಕುಲಿಗೋಡ, ಪ್ರಕಾಶ ಆದಪ್ಪಗೋಳ, ಪಿ.ಬಿ.ಖೇತಗೌಡರ, ವಿಜಯ ನಾಯಿಕ, ಯಮನಪ್ಪ ಬಾಬನ್ನವರ, ಆಡಳಿತ ಮಂಡಳಿಯ ಸದಸ್ಯರು, ಪುರಸಭೆ ಸದಸ್ಯರಾದ ಕಪೀಲ ಕರಿಭೀಮಗೋಳ, ಮಯೂರ ಕುರಾಡೆ, ಊರಿನ ಗಣ್ಯರು, ಪಾಲಕರು ಹಾಗೂ ಎಲ್ಲ ಅಂಗ ಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ಮತ್ತು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು