ಗ್ರಾಮ ಸಭೆಯಲ್ಲಿ ಬಾಗವಹಿಸಲು ಕರೆ

ಲೋಕದರ್ಶನ ವರದಿ

ತಾಂಬಾ 07: ಗ್ರಾಮ ಸಭೆಗಳು ಹಳ್ಳಿಗಳ ಅಭಿವೃದ್ಧಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತಹ ಉತ್ತಮವಾದ ವೇದಿಕೆಗಳಾಗಿದ್ದು, ಇವುಗಳಲ್ಲಿ ಭಾಗವಹಿಸುವ ಮೂಲಕ ಜನರು ಹೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು ಎಂದು ನೋಡಲ್ ಅಧಿಕಾರಿ ಡಾ: ಎಸ್.ಡಿ. ಕುಂಬಾರ ಹೇಳಿದರು.

ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ಆಯೋಜಿಸಿದ 2018-19 ನೇ ಸಾಲಿನ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಗ್ರಾಮ ಸಭೆಗಳು ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಗ್ರಾಮ ಸಭೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯಗಳನ್ನು ಬಗೆಹರಿಸಿಕೊಳ್ಳಬೇಕು. ಗ್ರಾಮ ಸಭೆಗಳು ಸ್ಥಳೀಯ ಆಡಳಿತದ ಬುನಾದಿ ಆಗಬೇಕು. ನಮ್ಮ ಪಂಚಾಯಿತಿ ನಮ್ಮ ಭವಿಷ್ಯ ಎಂಬ ಭಾವನೆ ಗ್ರಾಮೀಣ ಭಾಗದ ಜನರಲ್ಲಿ ಮೂಡಬೇಕು ನಾನು 6ಪಂಚಾಯಿತಿಗಳ ನೋಡಲ್ ಅಧಿಕಾರಿಯಾಗಿ ಕಾರ್ಯ ಮಾಡುತ್ತಿದೆನೆ ಇಲ್ಲಿಯ ಗ್ರಾಮಸಭೆ ಅಚ್ಚುಕಟ್ಟಾಗಿ ನೀರ್ವಹಿಸಿದ ಗ್ರಾಪಂ  ಅಧ್ಯಕ್ಷ ಜಗದೇವಿ. ಗುರಸಂಗಪ್ಪ. ಬಾಗಲಕೋಟ ಅವರ ಕಾರ್ಯ ಶ್ಲಾಘನೀಯ ಎಂದರು.

       ಗ್ರಾಪಂ  ಅಧ್ಯಕ್ಷ ಜಗದೇವಿ. ಗುರಸಂಗಪ್ಪ. ಬಾಗಲಕೋಟ ಮಾತನಾಡಿ  ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಗ್ರಾಮಸಭೆಗಳು ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತಾಗಬೇಕು. ಜಿಪಂ ಸದಸ್ಯ ಸುಭಾಸ ಕಲ್ಲೂರ ಮಾತನಾಡಿ ಸಭೆ ಸ್ವಚ್ಚ ಭಾರತ ಮಿಸನ್ ಯೊಜನೆಯಡಿ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮವನ್ನಾಗಿಸುವ ವಿಷಯದ ಕುರಿತು ಚಚರ್ೆ ಮಾಡಿ ಸಲಹೆ ಸೂಚನೆಗಳನ್ನು ಆಲಿಸಿ ಅದರಂತೆ ಕಾರ್ಯನ್ಮೊಕರಾಗುವ ನಿದರ್ಾರಕ್ಕೆ ಬರಲಾಯಿತು ಅದೆ ರೀತಿ ಗ್ರಾಮದಲ್ಲಿ ಭಿದಿ ದೀಪಗಳನ್ನು ಸರಿಯಾದ ಸಮಯಕ್ಕೆ ಅಳವಡಿಸುವದು ಗ್ರಾಮದ ರಸ್ತೆಗಳನ್ನು ಸಿ ಸಿ ರಸ್ತೆಗಳನ್ನಾಗಿ ನಿಮರ್ಾಣ ಮಾಡುವ ವಿಷಯ ಚಚರ್ಿಸಲಾಯಿತು ಡಾ.ಬಿ ಆರ್ ಅಂಬೇಡ್ಕರ ಕನಸಿನಂತೆ ಪ್ರತಿ ಗ್ರಾಮದಲ್ಲಿ ಅಶ್ಕೃಶ್ಯತೆ ನಿವಾರಣೆ ಮಾಡಿ ಸಮಾಜದಲ್ಲಿ ಸಮಾನತೆ ಕಾಪಾಡಿಕೊಳ್ಳುವ ವ್ಯಸನ ಮುಕ್ತ ಗ್ರಾಮವನ್ನಾಗಿಸುವ ಶುದ್ದ ಕುಡಿಯುವ ನೀರು ವದಗಿಸಿ ಆರೋಗ್ಯಯುತ ಗ್ರಾಮವನ್ನಾಗಿ ಮಾಡುವ ಕುರಿತು ಚಚರ್ೆ ನಡೆಸಿ ಗಾಮಸ್ಥರಿಂದ ಸಲಹೆ ಸೂಚನೆಗಳನ್ನು ಪಡೆಯಲಾಯಿತು.  ಈ ಭಾಗದ ಮಾಜಿ ಶಾಸಕರಾದ ರಮೇಶ ಭೂಸನೂರ 17.50ಕೋಟಿ ರೂಗಳಲ್ಲಿ  ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ನಮ್ಮ ಗ್ರಾಮಕ್ಕೆ ನೀರಿನ ಸಮಸ್ಯೆ ಇಲ್ಲಾ ಈ ಹಿಂದಿನ ಅಧ್ಯಕ್ಷರು ಅಗಷ್ಟ ತಿಂಗಳಲ್ಲಿ ಕೊಡಾ ನೀರಿನ ಟ್ಯಾಂಕರ್ ಬಳಸಿ ಗ್ರಾಮದ ಜನಪ್ರತಿನಿಧಿಗಳು ಹಂಚ್ಚಿಕೊಂಡು ಹಣತಿಂದು ಹಾಕಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದರು. ಅಭಿವೃದ್ಧಿ ಅಧಿಕಾರಿ ಬಾಬು. ಉಮದಿ ವಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳು ದೊರೆಯುವ ಅನುದಾನ ಹಾಗೂ ಉಪಯೋಗಗಳ ಕುರಿತು ವಿವರಿಸಿದರು.

ಸಭೆಯಲ್ಲಿ ತಾ.ಪಂ ಸದಸ್ಯ ಪ್ರಕಾಶ. ಮುಂಜಿ ಗ್ರಾ.ಪಂ ಉಪಾಧ್ಯಕ್ಷ ಸಂಜು. ಗೊರನಾಳ ಮಾಜಿ ಅಧ್ಯಕ್ಷ ಸಿದ್ದಪ್ಪ. ಚಟ್ಟರಕಿ. ಮಾಜಿ ಉಪಾಧ್ಯಕ್ಷ ಜಿ. ಬಿ. ಅಂಗಡಿ ಗಾ.ಪಂ ಸದಸ್ಯ ಹೊನ್ನಪ್ಪ. ಕಳ್ಳಿ ಗ್ರಾ.ಪಂ ಸದಸ್ಯ ಸಿದ್ದನಗೌಡ. ಪಾಟೀಲ ಧ್ರಾಕ್ಷ್ಯಾಣಿ. ಅ. ಅವಟ್ಟಿ. ರೇಖಾ ಹೊತರ್ಿ. ಜಗದೇವಿ. ವಿ. ಮೂಲಿಮನಿ. ಯಮನವ್ವ. ಮಾಶಾಳ ಶ್ರೀಶೈಲ. ನಿಂಗಮನಿ. ಮೈಹಿಬುಬಸಾಬ. ಜಾಲೇಗಾರ ಪೈಗಂಬರ. ಹಚ್ಚಾಳ ಬಂದು. ಚಿಕಗಸಿ ಬಿ. ಎಸ್. ತೋಟದ ಶ್ರೀಕಾಂತ. ಹಡಲಸಂಗ ಆದಮ. ಮನಿಯಾರ ಹುಸೇನಬಾಷಾ. ಜಾಲೇಗಾರ ಸಂದಪ್ರಿಯಾ. ನಡಗಡ್ಡಿ ಹಾಜಿ. ಧಡೇದ ಅನೇಕರು ಉಪಸ್ಥಿತರಿಂದರು.