ಲೋಕದರ್ಶನ ವರದಿ
ಕುಕನೂರು 03: ತಾಲೂಕಿನ ಮಂಗಳೂರು ಗ್ರಾಪಂ ಪಿಡಿಓನವರು ಇತರೆ ಸದಸ್ಯರ ಗಮನಕ್ಕೆ ಬಾರದೆ ಹಲವಾರು ಕಾರ್ಯಕ್ರಮಗಳು ಹಾಗೂ ಅನುಧಾನವನ್ನು ಖಚರ್ು ಮಾಡುತ್ತಿದ್ದು ನಮ್ಮ ಗಮನಕ್ಕೆ ತರುತ್ತಿಲ್ಲಾ ಎಂದು ಮಂಗಳೂರು ಗ್ರಾಪಂ ಸದಸ್ಯೆ ರೇಣಕವ್ವ ಬಸಪ್ಪ ಮದಕಟ್ಟಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂತೆ ಹರಾಜು, 14ನೇ ಹಣಕಾಸು ಯೋಜನೆಯ ಪಾಸ್ ಬುಕ್, ಠರಾವು ಪುಸ್ತಕ, ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಹಲವಾರು ಭಾರಿ ಮಾಹಿತಿ ಕೇಳಿದರು ನಮಗೆ ಇಲ್ಲಿಯವರೆಗೆ ಕೊಟ್ಟಿರುವದಿಲ್ಲಾ ಈ ಕುರಿತು ರಜೆಯಲ್ಲಿರುವ ಪಿಡಿಓ ಮಹಮ್ಮದ್ ಜುಬೇರ ಅವರನ್ನು ಪ್ರಶ್ನಿಸಿದರೆ ಎಲ್ಲಾ ದಾಖಲಾತಿಗಳು ನಮ್ಮ ಮನೆಯಲ್ಲಿರುವಾದಾಗಿ ತಿಳಿಸುತ್ತಾರೆ ಆದ್ದರಿಂದ ನಮಗೆ ಜನತೆಗೆ ಉತ್ತರ ನೀಡಲು ಆಗುತ್ತಿಲ್ಲಾ ಹಾಗೂ ಹೊಸದಾಗಿ ಆಗಮಿಸಿದ ಪಿಡಿಓ ಅವರಿಗೂ ಕರ್ತವ್ಯ ನಿರ್ವಹಿಸಲು ಸಾದ್ಯವಾಗುತ್ತಿಲ್ಲಾ ತಾಪಂ ಇಓ ಅವರು ಕೂಡಲೆ ಕ್ರಮ ತೆಗೆದುಕೊಂಡು ನಮಗೆ ಮಾಹಿತಿ ಒದಗಿಸಿ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.