ಲೋಕದರ್ಶನ ವರದಿ
ಯಲುಬುರ್ಗಾ 05: ರಾಜ್ಯದ ಪುತ್ತೂರಿನ ವಿದ್ಯಾಥರ್ಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಭಾರತ ವಿದ್ಯಾರ್ಥಿ ಪರಿಷತ್(ಎಸ್ಎಪ್ ಐ) ತಿವ್ರವಾಗಿ ಖಂಡಿಸುತ್ತದೆ ಎಂದು ತಾಲೂಕ ಅದ್ಯಕ್ಷ ಎಂ ಸಿದ್ದಪ್ಪ ಹೇಳಿದರು.
ಪಟ್ಟಣದಲ್ಲಿ ತಹಸೀಲ್ದಾರ ರಮೇಶ ಅಳವಂಡಿಕರ್ ಅವರ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಗಾಂಜಾ ಸೇವಿಸುವದರಿಂದ ಸರಣಿ ಕೃತ್ಯಗಳು ನಡೆಯುತ್ತಿವೆ ಇತ್ತಿಚೀಗೆ ದೇರಳಕಟ್ಟೆಯಲ್ಲಿ ನಡೆದ ಕೊಲೆ ಯತ್ನದಲ್ಲಿಯ ಅಪರಾಧಿ ಅಮಲು ಪಧಾರ್ಥ ಸೇವನೆ ಮಾಡಿ ಅಂತಹ ಕೃತ್ಯ ನಡೆಸಿದ್ದಾನೆ, ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಘಟನೆಯಲ್ಲೂ ಅತ್ಯಾಚಾರಿಗಳು ಅಮಲು ಪದಾರ್ಥ ಸೇವನೆ ಮಾಡಿ ತಲೆ ತಗ್ಗಿಸುವಂತಹ ಕೃತ್ಯ ನಡೆಸಿದ್ದಾರೆ.
ಇತ್ತಿಚೀಗೆ ಬೆಳ್ತಂಗಡಿ ಕಾಲೇಜಿನಲ್ಲಿ ಎಬಿವಿಪಿ ಗೂಂಡಾಗಳು ವಿದ್ಯಾರ್ಥಿ ಯ ಮೇಲೆ ಹಲ್ಲೆ ನಡೆಸಿದ್ದರು ಈ ಘಟನೆಯಲ್ಲಿಯೂ ಅತ್ಯಾಚಾರಿಗಳು ಎಬಿವಿಪಿ ಸಂಘಟನೆಯವರಾಗಿದ್ದರು, ಈ ಬಗ್ಗೆ ದ್ವನಿ ಎತ್ತಿ ಗಾಂಜಾ, ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಬೇಕಿದ್ದ ಜಿಲ್ಲೆಯ ಸಂಸದರು, ಶಾಸಕರು ಗೋವು ಮತ್ತು ಆಪರೇಷನ್ ಕಮಲ, ಆಪರೇಷನ್ ಹಸ್ತ, ಎಂಬ ರಾಜಕೀಯದಲ್ಲಿ ತಲ್ಲಿನರಾಗಿದ್ದಾರೆ ಈ ರಾಜಕಾರಣಿಗಳು ನಮ್ಮ ಮಕ್ಕಳ ಪರವಾಗಿ ದ್ವನಿ ಎತ್ತುತ್ತಾರೆ ಎಂಬ ನೀರಿಕ್ಷೆ ಹುಸಿಯಾಗಿದೆ ಹಾಗೂ ಬಿಜೆಪಿ ನಾಯಕಿ ಸುನೀತಾ ಸಿಂಗ್, ಹೆಣ್ಣುಮಕ್ಕಳನ್ನು ಹತ್ಯಾಚಾರ ಮಾಡಿ ಎಂದು ಸಂಘ ಪರಿವಾರದವರಿಗೆ ಕರೆ ನೀಡಿದ್ದಾರೆ ಅದು ಆದ ನಂತರ ನಾಲ್ಕೆ ದಿನಗಳಲ್ಲಿ ಈ ಕೃತ್ಯ ನಡೆದಿದೆ ಎಂದು ಅವರು ದೂರಿದ್ದಾರೆ.
ಈ ಸಂದರ್ಭದಲ್ಲಿ ಬಾಲರಾಜ ದೊಡ್ಡಮನಿ, ಪ್ರಶಾಂತ ಬಾಗಲಕೋಟಿ, ಅಶೋಕ, ಮಲ್ಲಿಖಾಜರ್ುನ, ಗವಿಸಿದ್ದಯ್ಯ, ಜಗದೀಶ, ಹನಮೇಶ, ಕರಿಬಸಪ್ಪ, ಕುಬೇರ, ಮರೆಗೌಡ್ರ, ಮುತ್ತಣ್ಣ, ನಾಗರಾಜ, ರಮೇಶ, ಪರಶುರಾಮ, ಮಂಜಿನಾಥ ಸೇರಿದಂತೆ ಅನೇಕರು ಹಾಜರಿದ್ದರು.