ರಾಯಬಾಗ 16: ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಕಡ್ಡಾಯ ಹಾಗೂ ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕೆಂದು ರಾಯಬಾಗ ಸಹಾಯಕ ಚುನಾವಣಾಧಿಕಾರಿ ಎನ್.ಕೆ.ತೊರವಿ ಕರೆ ನೀಡಿದರು.
ಶನಿವಾರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲೂಕಾ ಸ್ವಿಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ಆಯೋಗ 100ರಷ್ಟು ಮತದಾನವಾಗಬೇಕೆಂದು ಸಂಕಲ್ಪ ಮಾಡಿದ್ದು, 18 ವರ್ಷ ತುಂಬಿದ ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬೇಕೆಂದರು.
ಜಾಥಾದಲ್ಲಿ ಮುಖ್ಯವೈದ್ಯಾಧಿಕಾರಿ ಡಾ.ಆರ್.ಎಚ್.ರಂಗನ್ನವರ, ಆರೋಗ್ಯ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ, ಆರ್.ಎಫ್.ಹಂದಿಗುಂದ, ಆರ್.ಕೆ.ನಿಂಗನೂರೆ, ಎಸ್.ಕೆ.ಚೌಗಲಾ, ಉಮೇಶ ಪೋಳ, ಎಮ್.ಬಿ.ಮಾಳಿ, ಆರ್.ಬಿ.ಮನವಡ್ಡರ, ಕಾವೇರಿ ತಳವಾರ ಹಾಗೂ ಆಶಾ ಕಾರ್ಯಕತರ್ೆಯರು ಮತ್ತು ಶಾಲಾ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.
ಮತದಾನ ಜಾಗೃತಿ ಜಾಥಾ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಸಂಚರಿಸಿ ಮತದಾನದ ಮಹತ್ವವನ್ನು ಸಾರಲಾಯಿತು.