ಲೋಕದರ್ಶನ ವರದಿ
ಮುಂಡಗೋಡ 28: ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ವಿಆರ್ಎಲ್ ಟ್ರಕ್ ಮುಖಾಮುಖಿ ಢಿಕ್ಕಿ ಸಂಭವಿಸಿ ಟ್ರಕ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ ಶಿರಸಿ ರಸ್ತೆಯ ಮಳಗಿ ಗ್ರಾಮದ ಮುಕ್ತಿಮಠದ ಹತ್ತಿರ ಸಂಭವಿಸಿದೆ
ಮೃತಪಟ್ಟವನನ್ನು ಕಲಘಟಗಿ ತಾಲೂಕಿನ ಬಿರವಳ್ಳಿ ಗ್ರಾಮದ ದ್ಯಾಮಣ್ಣ ವಡ್ಡರ(30) ಎಂದು ಹೇಳಲಾಗಿದೆ.
ಬಸ್ನಲ್ಲಿದ್ದ 24 ಪ್ರಯಾಣಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಬಸ್ ಚಾಲಕನಿಗೆ ಎರಡು ಕೈ ಹಾಗೂ ಕಾಲೂ ಮತ್ತು ಸೊಂಟಕ್ಕೆ ಗಾಯವುಂಟಾದರೆ ನಿವರ್ಾಹಕನಿಗೆ ಗುಪ್ತಾಂಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ
ಬಸ್ ಶಿರಸಿಯಿಂದ ಮುಂಡಗೋಡ ಕಡೆಗೆ ವಿಆರ್ಎಲ್ ಟ್ರಕ್ ಶಿರಸಿ ದಿಕ್ಕಿಗೆ ಹೋರಟಿತ್ತು ಎಂದು ತಿಳಿದು ಬಂದಿದೆ.
ಬಸ್ ನ ಚಾಲಕನ ಸಮಯ ಪ್ರಜ್ಞೆಯಿಂದ ಅಪಾರ ಸಾವುನಷ್ಟವುಂಟಾಗುವುದನ್ನು ತಪ್ಪಿಸಿದ್ದಾನೆ ಎಂಬ ಮಾತು ಕೇಳಿಬಂದಿದೆ