ಫೆಬ್ರವರಿ 8ರಂದು ಬ್ರಿಲಿಯಂಟ್ ಉತ್ಸವ
ತಾಳಿಕೋಟಿ, 06: ಪಟ್ಟಣದ ಮೈಲೇಶ್ಟರ ಕ್ರಾಸ್ ನಲ್ಲಿರುವ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದರ ಬ್ರಿಲಿಯಂಟ್ ಉತ್ಸವ 2ಞ25 ಫೇ.8 ರಂದು ನಡೆಯಲಿದೆ.
ಮೈಲೇಶ್ವರದ ಹುಣಸಗಿ ರಸ್ತೆಯಲ್ಲಿರುವ ಬ್ರಿಲಿಯಂಟ್ ಶಾಲಾ ಆವರಣದಲ್ಲಿ ಶನಿವಾರ ಸಾಯಂಕಾಲ 4:00 ಘಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಜಾಲಹಳ್ಳಿ-ದೇವದುರ್ಗ ಬೃಹನ್ ಮಠದ ಪರಮ ಪೂಜ್ಯ ಶ್ರೀ ಷ.ಬ್ರ.ಜಯ ಶಾಂತಲಿಂಗೇಶ್ವರ ಶಿವಾಚಾರ್ಯರು ಹಾಗೂ ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟಿಯ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸುವರು. ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಸಮಾರಂಭವನ್ನು ಉದ್ಘಾಟಿಸುವರು.
ಹಿರಿಯ ಪತ್ರಕರ್ತ ಮತ್ತು ಅಧ್ಯಕ್ಷ ವಿಶ್ವ ದರ್ಶನ ಶಿಕ್ಷಣ ಸಮೂಹದ ಬಿ.ಎನ್. ನಾಯ್ಕೋಡಿ ಅತಿಥಿಗಳಾಗಿ ಆಗಮಿಸಲಿದ್ದು, ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಬಿ. ನಡುವಿನಮನಿ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ಶಿಕ್ಷಣ ಸಂಯೋಜಕ ತಾಳಿಕೋಟಿ ವಲಯ ಎಸ್.ಎಸ್.ಹಿರೇಮಠ, ತಾಳಿಕೋಟಿ ವಲಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಸಜ್ಜನ, ಬಿ.ಸಾಲವಾಡಗಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ಮೂರಮಾನ ಇವರ ಗೌರವ ಉಪಸ್ಥಿತಿ ಇದ್ದು,ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಆರಿ್ಬ. ನಡುವಿನಮನಿ, ಕಾರ್ಯದರ್ಶಿ ಎಂ.ಬಿ.ಮಡಿವಾಳರ, ನಿರ್ದೇಶಕರಾದ ಎಸ್.ಎಚ್. ಪಾಟೀಲ,ಶಶಿಧರ ಎಂ.ಬಿರಾದಾರ, ನಿರ್ದೇಶಕಿ ಎಲ್.ಎಂಬಿರಾದಾರ ಹಾಗೂ ಎನ್.ಎಸ್.ಗಡಗಿ ಇವರ ಉಪಸ್ಥಿತಿ ಇರುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.