ಶಿಗ್ಗಾವಿ 20: ಬಂದಿಖಾನೆಯಲ್ಲಿರುವ ಕೈದಿಗಳಿಗೆ ನಿತ್ಯ ಊಟ ಸರುಬುರಾಜು ಮಾಡುತ್ತಿದ್ದ ಶಿಗ್ಗಾವಿ ಪಟ್ಟಣದ ರೇಣುಕಾ ಹೊಟೇಲ್ ಮಾಲೀಕರಿಗೆ ಊಟದ ಬಿಲ್ ಪಾವತಿಸಲು ಕಂದಾಯ ಇಲಾಖೆ ದಾಖಲೆ ಕೋಠಡಿ ಕ್ಲಕರ್್, ಬಂಧಿಖಾನೆ ಜೈಲರ್ ಕಿರಣ ತೇರದಾಳ ಎಂಬವರು 75 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲಿಗೆ ಬಿದ್ದ ಪ್ರಸಂಗ ಮಂಗಳವಾರ ನಡೆದಿದೆ.
ಹೊಟೇಲ್ ಮಾಲೀಕ ಶಂಕ್ರಪ್ಪ ಯಲ್ಲಪ್ಪ ಗೌಳಿ ಅವರಿಗೆ 2017 ರಿಂದ ಕೈದಿಗಳಿಗೆ ಊಟ ಸರುಬುರಾಜ ಮಾಡಿದ್ದ 6 ಲಕ್ಷ ರೂ. ಬಿಲ್ ಪಾವತಿಸಲು 1 ಲಕ್ಷ ರೂ.ಲಂಚದ ಹಣ ಕೇಳಿದ್ದಾರೆ ಎಂದು ಎಸಿಬಿ ಅಧಿಕಾರಿಗಳಿಗೆ ಗೌಳಿ ಅವರು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ಎಸಿಬಿ ಡಿವೈಎಸ್ಪಿ ಪ್ರಲ್ಹಾದ ಎಸ್.ಕೆ., ಅವರ ನೇತೃತ್ವದಲ್ಲಿ ಕೈಗೊಂಡ ದಾಳಿ ವೇಳೆ ಹಣ ಪಡೆಯತ್ತಿದ್ದಾಗ ಕಿರಣ ತೇರದಾಳ ಸಿಕ್ಕು ಬಿದ್ದಿದ್ದಾರೆ.
ಲಂಚದ ಹಣ ಪಡೆಯತ್ತಿದ್ದ ತೇರದಾಳ ಅವರನ್ನು ಬಂದಿಸಿದ್ದೇವೆ. ಘಟನೆ ಕುರಿತು ಕೈಗೊಳ್ಳಲಾದ ತನಿಖೆ ಪೂರ್ಣಗೊಂಡ ಬಳಿಕ ಸಂಜೆ ನ್ಯಾಯಾಧಿಶರ ಮುಂದೆ ಹಾಜರು ಪಡಿಸುವುದಾಗಿ ಎಸಿಬಿ ಡಿವೈಎಸ್ಪಿ ಪ್ರಲ್ಹಾದ ಎಸ್.ಕೆ. ತಿಳಿಸಿದ್ದಾರೆ.
ದಾಳಿಯಲ್ಲಿ ಇನ್ಸಪೆಕ್ಟರ್ಗಳಾದ ಬಸವರಾಜ ಹಳಬಣ್ಣ, ಸುದರ್ಶನ ಸೇರಿದಂತೆ ಎಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.