ಮೂಡಲಗಿ 12: ಅರಭಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ದೃಷ್ಟಿಯಿಂದ ರಾಜ್ಯಾಧ್ಯಕ್ಷ ದಿನೇಶ ಗುಂಡುರಾವ್ ಆದೇಶದಂತೆ ಅರಭಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಸಗುಪ್ಪಿಯ ಗುರುರಾಜ ಪೂಜೇರಿ, ಕಾರ್ಯಧ್ಯಕ್ಷರಾಗಿ ಗುರಪ್ಪ ಹಿಟ್ಟನಗಿ ಹಾಗೂ ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಬಳೋಬಾಳದ ಲಗಮಣ್ಣ ಕಳಸನ್ನವರ ಕಾರ್ಯಧ್ಯಕ್ಷರಾಗಿ ಲಕ್ಷ್ಮಣ ಆಲಕನೂರ ಇವರನ್ನು ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.
ಅವರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ಎರಡು ಪ್ರಬಲ ಸಮುದಾಯಕ್ಕೆ ಸೇರಿದವರನ್ನು ಆಯ್ಕೆಮಾಡಲಾಗಿದೆ. ಸದ್ಯದಲ್ಲಿಯೇ ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಅಲ್ಲದೇ ಸ್ಥಳೀಯ ಮಟ್ಟದ ಅಕ್ರಮ ಸಕ್ರಮ ನ್ಯಾಯ ಮಂಡಳಿ, ವಿದ್ಯುತ್ ಸಲಹಾ ಸಮಿತಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗುವುದು.
ಹಿರಿಯ ಮುಖಂಡ ಎಸ್.ಆರ್ ಸೋನವಾಲ್ಕರ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ ಗಾಂಧಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಡಿ ಕಾಂಗ್ರೆಸ್ ಪಕ್ಷಕ್ಕೆ ಸದಸ್ಯತ್ವ ನೋಂದಣಿ ಪ್ರಾರಂಭವಾಗಿದ್ದು ಮತದಾರರು ಮತ್ತು ಕಾರ್ಯಕರ್ತರು ತಮ್ಮ ಮೋಬೈಲ್ನಿಂದ ಡಿ.15ರೊಳಗಾಗಿ ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ 7045006100 ಈ ದೂರವಾಣಿ ಸಂಖ್ಯೆಗೆ ಕಳುಹಿಸಿ ಸದಸ್ಯತ್ವ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಅರಭಾಂವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುರಾಜ ಪೂಜೇರಿ, ಕೌಜಲಗಿ ಬ್ಲಾಕ್ ಅಧ್ಯಕ್ಷ ಲಗಮಣ್ಣ ಕಳಸನ್ನವರ, ಲಕ್ಷ್ಮಣ ಆಲಕನೂರ, ಗುರಪ್ಪ ಹಿಟ್ಟನಗಿ, ವಿ.ಪಿ ನಾಯ್ಕ, ಯಲ್ಲಪ್ಪ ಕಟ್ಟಿಕಾರ, ಗುಂಡಣ್ಣ ಕಮತೆ, ರವಿ ತುಪ್ಪದ, ಗಿರೀಶ ಕರಡಿ ಮತ್ತಿತರರು ಉಪಸ್ಥಿತರಿದ್ದರು.