23 ರಂದು ಜನ್ಮ ಶತಮಾನೋತ್ಸವ ಸಮಾರಂಭ

ಲೋಕದರ್ಶನ ವರದಿ

ಕೊಪ್ಪಳ 17: ವೃತ್ತಿ ರಂಗಭೂಮಿಯ ಮಿನುಗುತಾರೆ ಎಂದು ಖ್ಯಾತಿ ಹೊಂದಿದ್ದ ಜಿಲ್ಲೆಯ ಮೇರು ಕಲಾವಿದೆ ದಿವಂಗತ ರಹಿಮಾನವ್ವ ಕಲ್ಮನಿ ಕುಕನೂರು ಅವರ ಜನ್ಮ ಶತಮಾನೋತ್ಸವ ಸಮಾರಂಭವು ಅಕ್ಟೋಬರ್ 23ರಂದು ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ನಾಟಕ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಗಣೇಶ ಅಮೀನಗಡ ತಿಳಿಸಿದರು.

       ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿಷಯ ಸ್ಪಷ್ಟಪಿಡಿಸಿದರು. ಶತಮಾನೋತ್ಸವ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಉದ್ಘಾಟಿಸುವರು. ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ನಗರದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಗಂಗಾವತಿಯ ಎಸ್.ವಿ.ಪಾಟೀಲ್ ಗುಂಡೂರು ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸುವರು. ಅಕಾಡೆಮಿ ನಿದರ್ೇಶಕ ಬಿ.ಎಂ.ಗಿರಿರಾಜ ಸಾಕ್ಷ್ಯ ಚಿತ್ರ ಪ್ರದರ್ಶನ ಅನಾವರಣಗೊಳಿಸುವರು. ಹಿರಿಯ ರಂಗ ಕಲಾವಿದ ಡಾ. ಲಕ್ಷ್ಮಣ ದಾಸ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ಲದೆ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ್ ಮತ್ತು ಹಿರಿಯ ಕಲಾವಿದೆ ಹಾಗೂ ನಾಡೋಜ ಪ್ರಶಸ್ತಿ ವಿಜೇತರಾದ ಸುಭದ್ರಮ್ಮ ಮನ್ಸೂರು ರಂಗಗೀತೆ ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದರು.

       11.30 ಕ್ಕೆ ಆರಂಭವಾಗುವ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯಗುರು ಹಾಗೂ ಸಾಹಿತಿ ಎಚ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸುವರು. ಕಲಬುರಗಿ ಹಿರಿಯ ಸಾಹಿತಿ ಗವೀಶ ಹಿರೇಮಠ ಕಲಾವಿದೆ ರಹಿಮಾನವ್ವ ಕಲ್ಮನಿ ಅವರ ಬದುಕು-ಸಾಧನೆ ಕುರಿತು ಹಾಗೂ ಕೊಪ್ಪಳದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ನಟನೆ ಮತ್ತು ಸಂಘಟನೆ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡುವರು. ಕುಕನೂರಿನ ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

       ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ಕುಕನೂರಿನ ಬಾಬಣ್ಣ ಕಲ್ಮನಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಫಕೀರಪ್ಪ ವರವಿ, ತಳಕಲ್ ಗ್ರಾಮದ ಕಲಾವಿದರಾದ ಹಣಮಂತಪ್ಪ ದೇವರಮನಿ, ಹಾಗೂ ಭಾಗ್ಯವಾನ ಪತ್ತಾರ ಇವರುಗಳನ್ನು ಸನ್ಮಾನಿಸಿ, ಸತ್ಕರಿಸಲಾಗುವುದು ಎಂದು ಗಣೇಶ ಅಮೀನಗಡ ತಿಳಿಸಿದರು.

       ಸಂಜೆ 5.30 ಕ್ಕೆ ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ಎಸಿಬಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಅಧ್ಯಕ್ಷತೆ ವಹಿಸುವರು. ರಂಗಗೀತೆಗಳನ್ನು ಎಲ್.ಬಿ.ಶೇಖ್ ಹಾಗೂ ಬಸವರಾಜ ಹೂಗಾರ ಪ್ರಸ್ತುತ ಪಡಿಸುವರು. ಹುಲಗಿ ಕಲಾವಿದ ಕೊಟ್ರಯ್ಯ ಹಿರೇಮಠ ಹಾಗೂ ನಗರದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಉಪಸ್ಥಿತರಿರುವರು. ಸಾಯಂಕಾಲ 6.30 ಕ್ಕೆ ಗದುಗಿನ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದಿಂದ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಗಣೇಶ ತಿಳಿಸಿದರು. ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಎಚ್.ಎಸ್.ಪಾಟೀಲ್, ನಾಟಕ ಅಕಾಡೆಮಿ ಸದಸ್ಯೆ ಸಂಚಾಲಕಿ