ನೇತಾಜಿ ಸುಭಾಸ ಚಂದ್ರಭೋಸ ಜನ್ಮ ದಿನಾಚರಣೆ
ಧಾರವಾಡ 23: ನೇತಾಜಿ ಸುಭಾಸಚಂದ್ರಭೋಸ ಜನ್ಮದಿನಾಚರಣೆ ಅಂಗವಾಗಿ ಧಾರವಾಡ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ನೇತಾಜಿ ಸುಭಾಸ ಚಂದ್ರಭೋಸ ಪ್ರತಿಮೆಗೆ ಜ. 23ರಂದು ಮುಂಜಾನೆ 10-30 ಗಂಟೆಗೆ ರಾಮಪ್ಪ ಕೃಷ್ಣಪ್ಪ ಬಡಿಗೇರ, ಮಹಾಪೌರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇವರು ಮಾಲಾರೆ್ಣ ಮಾಡಿದರು. ಮಾಲಾರೆ್ಣ ಕಾರ್ಯಕ್ರಮದಲ್ಲಿ ಸುರೇಶ ಬೇದ್ರೆ, ಪಾಲಿಕೆ ಸದಸ್ಯರು, ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ ಬಿ., ಉಮೇಶ ಸವಣೂರು, ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ ಪಾಟೀಲ, ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಸಾರ್ವಜನಿಕರು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.