ಲೋಕದರ್ಶನ ವರದಿ
ಕಂಪ್ಲಿ 09: ಸಾರ್ವಜನಿಕರು ದ್ವಿಚಕ್ರವಾಹನ ಚಾಲನೆ ಮಾಡುವಾಗ ಕಡ್ಡಾಯ ವಾಗಿಹೆಲ್ಮೆಟ್ ಧರಿಸಿ ಸಂಚಾರಿ ನಿಯಮಪಾಲಿಸಿದಾಗ ಮಾತ್ರ ಅಪಘಾತ ಹಾಗೂ ಅನಾಹುತಗಳನ್ನು ತಪ್ಪಿಸಬಹುದು. ಎಂದು ಸಿಪಿಐ ಡಿ.ಹುಲುಗಪ್ಪ ಹೇಳಿದರು.
ತಾಲೂಕಿನ ಪೊಲೀಸ್ ಠಾಣೆಯಲ್ಲಿ, ಇಲ್ಲಿನ ಪೊಲೀಸ್ ಠಾಣೆ ಏಪರ್ಾಡಿಸಿದ 'ರಸ್ತೆ ಸುರಕ್ಷತಾ ಸಪ್ತಾಹದ' ಅಂಗವಾಗಿ ಬೈಕ್ ರ್ಯಾಲಿಯೊಂದಿಗೆ ಹೆಲ್ಮೇಟ್ ಜಾಗೃತಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ದಿಚಕ್ರ ಪರವಾನಿಗೆಪಡೆದುವಾಹನ ಚಾಲನೆ ಮಾಡಬೇಕು. ವಾಹನ ಚಾಲನೆಗೆ ಅಗತ್ಯದಾಖಲೆಗಳನ್ನು ಪಡೆಯಬೇಕೆಂದರು ಹೆಲ್ಮಟ್ ಧರಿಸಿ ಜೀವ ಉಳಿಸಿ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರಿ ಸಂಚಾರಿ ನಿಯಮ ಪಾಲಿಸಿಯಂದ ನಾಮಫಲಕಗಳನ್ನು ಹಿಡಿದು ನಗರದ ವಿವಿಧ ರಸ್ತೆಗಳಲ್ಲಿ ದ್ವಿಚಕ್ರ ವಾಹನದ ಮೂಲಕ ಜಾಗೃತಿ ಮೂಡಿಸಲಾಯಿತು.ಎಂದರು
ಪುರಸಭೆ ಅಧ್ಯಕ್ಷ ಎಂ.ಸುಧೀರ್ ರಸ್ತೆ ಸುರಕ್ಷತಾ ಸಪ್ತಾಹದ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಸಾರ್ವಗಜನಿಕರು ರಸ್ತೆ ನಿಯಮಗಳನ್ನು ತಪ್ಪದೆ ಪರಿಪಾಲಿಸುವಲ್ಲಿ ಎಂದು ಹೇಳಿದರು.
ಪಿಎಸ್ಐ ಕೆ.ಬಿ.ವಾಸುಕುಮಾರ್, ಅಪರಾಧ ವಿಭಾಗದ ಪಿಎಸ್ಐ ಮೋಹನ್ಕುಮಾರ್, ಸಕರ್ಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಮೋಹನ್ ಸೇರಿ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳದ ಸಿಬ್ಬಂದಿ, ಜೆಸ್ಕಾಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಬೈಕ್ ರ್ಯಾಲಿ ಪೊಲೀಸ್ ಠಾಣೆಯಿಂದ ಆರಂಭಗೊಂಡು ಮುಖ್ಯರಸ್ತೆಗಳಲ್ಲಿ ಸಾಗಿ ಪುನಹ ಠಾಣೆಯಲ್ಲಿ ಸಮಾವೇಶಗೊಂಡಿತು ಹೆಲ್ಮೆಟ್ ಕಡ್ಡಾಯ ಜಾಗೃತಿ ಜಾಥದ ಬೈಕ್ ರ್ಯಾಲಿಗೆ ಪುರಸಭೆ ಅಧ್ಯಕ್ಷ ಎಂ.ಸುಧೀರ್ ಚಾಲನೆ ನೀಡಿದರು.