ಬೈಕ ಮುಖಾಮುಖಿ ಡಿಕ್ಕಿ: ಪೇದೆ ಸಾವು
ರಾಯಬಾಗ 20: ತಾಲೂಕಿನ ನಂದಿಕುರಳಿ ಗ್ರಾಮದ ವ್ಯಾಪ್ತಿಯ ಗೊಬ್ಬರ ಫ್ಯಾಕ್ಟರಿ ಹತ್ತಿರ ಗುರುವಾರ ಎರಡು ಬೈಕ ಮುಖಾಮುಖಿ ಡಿಕ್ಕಿಯಾಗಿ ರಸ್ತೆ ಅಪಘಾತದಲ್ಲಿ ಚಿಕ್ಕೋಡಿ ಪೋಲಿಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೌಮ್ಯ ಸ್ವಭಾವದ ಪೇದೆ ಮಂಜುನಾಥ ಪುಂಡಲೀಕ ಸತ್ತೀಗೇರಿ (26) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಕೆಲಸ ಮೇಲೆ ಕುಡಚಿಗೆ ಹೋಗಿ, ಮರಳಿ ಚಿಕ್ಕೋಡಿಗೆ ಬರುವಾಗ ಈ ಅಪಘಾತ ಸಂಭವಿಸಿದ್ದು, ಮತ್ತೊಬ್ಬ ಬೈಕ ಸವಾರ ತೀವ್ರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಬಾಗ ಪೋಲಿಸ ಠಾಣೆಯ ಪ್ರಕರಣ ದಾಖಲಾಗಿದೆ.