ರಸ್ತೆ ಕಾಮಗಾರಿಗೆ ಭೂಮಿಪೂಜೆ: ಶೈಲಾ ಬಾಕಳೆ

Bhumi Puja for road works: Shaila Bakale

  ರಸ್ತೆ ಕಾಮಗಾರಿಗೆ ಭೂಮಿಪೂಜೆ: ಶೈಲಾ ಬಾಕಳೆ

ಗದಗ :   ನಗರದ 31 ನೇ  ವಾರ್ಡಿನ ಜೋಡ ಮಾರುತಿ ದೇವಸ್ಥಾನದ ಹತ್ತಿರ  ಹಾಗೂ ರಂಗನವಾಡ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಳಿಗೆ ನಗರಸಭೆ ಸದಸ್ಯೆ    ಶೈಲಾ ಬಾಕಳೆ ಅವರು ಭೂಮಿಪೂಜೆ ನೆರವೇರಿಸಿದರು.    

 ನಂತರ ಮಾತನಾಡಿದ ಅವರು   31 ನೇ ವಾರ್ಡಿನಲ್ಲಿನ  ಜನರ ಸಮಸ್ಯೆಗಳಿಗೆ  ಸ್ಪಂಧಿಸಿ  ಹಂತ ಹಂತವಾಗಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿದ್ದು, ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡುವ ಮೂಲಕ ಜನರ ವಿಶ್ವಾಸಗಳಿಸಬೇಕು ಎಂದು ಹೇಳಿದರು.  

  ರಾಜ್ಯ  ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ  ಸುಧೀರ ಕಾಟಿಗರ ಅವರು ಮಾತನಾಡಿ,   ಸರಕಾರದಿಂದ ಇನ್ನಷ್ಟು ಅನುದಾನವನ್ನು ಪಡೆದು   31 ನೇ ವಾರ್ಡನ್ನು ಅಭಿವೃದ್ದಿಗೊಳಿಸುವ ಮೂಲಕ ಅವಳಿ ನಗರದಲ್ಲಿ ಮಾದರಿ ವಾರ್ಡವನ್ನಾಗಿ ಮಾಡಬೇಕು ಎಂದು ಹೇಳಿದರು.  

 ಈ ಸಂದರ್ಭದಲ್ಲಿ ವಾರ್ಡಿನ ಹಿರಿಯರಾದ ಲೋಕನಾಥಸಾ ಬದಿ, ಜಗದೀಶ ಶೇಜವಾಡೆಕರ,  ರಾಜು ಕಾಟಿಗರ, ನಿರಂಜನ ಓಝಾ, ಇರ್ಷಾದ ಮಾನ್ವಿ, ನಗರಸಭೆ ಮಾಜಿ ಸದಸ್ಯೆ ಯಲ್ಲೂಬಾಯಿ ನಿರಂಜನ, ಉದ್ಯಮಿ ಕಿರಣ ಬಾಂಡಗೆ,  ಶ್ರೀಕಾಂತ ಬಾಕಳೆ, ರಾಮಚಂದ್ರಸಾ ಶಿದ್ಲಿಂಗ, ರಾಜೇಶ ಖೋಡೆ, ನಾಸೀರ್ ನರೇಗಲ್,  ಅಂಜು ಖಟವಟೆ, ಶ್ರೀಕಾಂತ ಪವಾರ, ಪ್ರಕಾಶ ಕಾಟಿಗರ, ನಾಗರಾಜ ಖೋಡೆ, ಚಂದ್ರಕಾಂತ ಬಾಕಳೆ, ಮಾಧು ಬದಿ,  ರವಿ ಚವ್ಹಾಣ, ಭರತ ಮಾರೆಪ್ಪನವರ, ಮಯೂರ ಕಾಟಿಗರ, ವಿಠ್ಠಲ ಬದಿ, ಸರೋಜಾಬಾಯಿ ಶೇಜವಾಡೆಕರ, ಸುಮಿತ್ರಾಬಾಯಿ ಕಾಟಿಗರ, ರುಕ್ಮಣಿಬಾಯಿ ಕಾಟಿಗರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.