ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಬೆಳಗಾವಿ 03 : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಭೂಮಿ ಪೂಜೆ ನೆರವೇರಿಸಿದರು. ಸುಮಾರು 25 ಲಕ್ಷ ರೂ.ಗಳ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳಲಿದ್ದು, ಗ್ರಾಮಸ್ಥರ ಅವಶ್ಯಕತೆಗೆ ತಕ್ಕಂತೆ ಉತ್ತಮವಾಗಿ ಭವನ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು. ಈ ವೇಳೆ ಗ್ರಾಮ ಉಪಾಧ್ಯಕ್ಷರಾದ ಚೇತನ ಕುರಂಗಿ, ಅಶೋಕ ಕುರಂಗಿ, ಇಂದ್ರಜಿತ್ ಕುರಂಗಿ, ಲಕ್ಕಪ್ಪ ಕುರಂಗಿ, ರಾಜೇಶ್ ವಡಗಾಂವಿ, ಸಿದ್ದು ಕುರಂಗಿ, ಮರೆಪ್ಪ ಕುರಂಗಿ, ವಿಜಯ ಕೋಲಕಾರ, ತಮ್ಮಣ್ಣ ಮೇತ್ರಿ, ಲಕ್ಷ್ಮಣ ಕೋಲಕಾರ, ಹನಮಂತ ಕುರಂಗಿ, ವಿಜಯ ಬೊಮ್ಮಣ್ಣವರ, ಸುರೇಶ ಕುರಂಗಿ, ಕೃಷ್ಣ ಕುರಂಗಿ, ಫಕೀರ್ ವಡಗಾಂವಿ, ಬಾವಕಣ್ಣ ಕುರಂಗಿ, ಹರೀಶ್ ಕುರಂಗಿ, ಗೋಪಾಲ ಎಮ್, ರಾಹುಲ್ ವಡಗಾಂವಿ, ರಾಮಾ ವಡಗಾಂವಿ, ಪರಶುರಾಮ ಕೋಲಕಾರ, ಭರತ ಬೊಮ್ಮಣ್ಣವರ್, ಮಲ್ಲಪ್ಪ ಕುರಂಗಿ, ಬಾಹು ಕುರಂಗಿ, ಅಪ್ಪಯ್ಯ ಕೋಲಕಾರ, ಮಲ್ಲಪ್ಪ ಕೋಲಕಾರ ಉಪಸ್ಥಿತರಿದ್ದರು.