ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ಕರ್ನಾಟಕದ ಬೆಳಗಾವಿಯಲ್ಲಿ ವಿಶೇಷ ಶೋರೂಂ ಉದ್ಘಾಟನೆ
ಬೆಳಗಾವಿ 07: ಇದು ಭಾರತದಲ್ಲಿ ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ಇಂಡಿಯಾದ 64ನೇ ಶೋರೂಂಪ ಈ ಅತ್ಯಾಧುನಿಕ ಸೌಲಭ್ಯವು ಕಂಪನಿಯ ಇಡೀ 125ಸಿಸಿ-650ಸಿಸಿ ಪ್ರೀಮಿಯಂ ಮಾಡೆಲ್ ಶ್ರೇಣಿಯನ್ನು ಪ್ರದರ್ಶಿಸುತ್ತದೆ ಬೆಳಗಾವಿ, ಕರ್ನಾಟಕ, ಜನವರಿ 7, 2025: ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ಇಂಡಿಯಾ ಕರ್ನಾಟಕದ ಬೆಳಗಾವಿಯ ಮತ್ತಿಕೊಪ್ ಕಟ್ಟಡ, 976, ಎಸ್.ಪಿ. ಆಫೀಸ್ ರಸ್ತೆ, ರಾಜ್ಯ ಅಬಕಾರಿ ಕಛೇರಿಯ ಎದುರು, ಕೊಲ್ಹಾಪುರ ವೃತ್ತದ ಬಳಿ, ಅಯೋಧ್ಯ ನಗರ, ಸದಾಶಿವ ನಗರ, ಬೆಳಗಾವಿ, ಕರ್ನಾಟಕ 590016. ಈ ಬ್ರಾಂಡ್ ಹೊಚ್ಚಹೊಸ ಸೌಲಭ್ಯ ಹೊಂದಿದ್ದು ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ರೈಡರ್ ಗಳಿಗೆ ಕರ್ನಾಟಕ ಬೆಳಗಾವಿ ಮತ್ತು ಸುತ್ತಮುತ್ತಲಲ್ಲಿ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಬೆಂಬಲವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಬಿ.ಎಫ್. ಮತ್ತಿಕೊಪ್ ಮೋಟಾರ್ಸ್ ಬ್ಯಾನರ್ ಅಡಿಯಲ್ಲಿ ಪ್ರಾರಂಭವಾದ ಈ 35 ಸೌಲಭ್ಯವನ್ನು ಶ್ರೀ ಆದರ್ಶ್ ಮತ್ತಿಕೊಪ್, ಡೀಲರ್ ಪ್ರಿನ್ಸಿಪಾಲ್, ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್- ಬೆಳಗಾವಿ, ಕರ್ನಾಟಕ ಅವರು ನಿರ್ವಹಿಸುತ್ತಿದ್ದಾರೆ. ಈ ಹೊಸ ಮಳಿಗೆಯೊಂದಿಗೆ ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ಇಂಡಿಯಾ ಭಾರತದಾದ್ಯಂತ 60+ ಟಚ್ ಪಾಯಿಂಟ್ ಗಳಲ್ಲಿ ಸದೃಢ ಜಾಲ ವಿಸ್ತರಿಸಿದಂತಾಗಿದೆ. ಈ ಸೌಲಭ್ಯವು ಬೆನೆಲ್ಲಿ ಶ್ರೇಣಿಯ ಸೂಪರ್ ಬೈಕ್ ಗಳು ಹಾಗೂ ಇತ್ತೀಚೆಗೆ ಬಿಡುಗಡೆಯಾದ ಹಂಗೇರಿಯನ್ ಖ್ಯಾತಿಯ ಕೀವೇ ಉತ್ಪನ್ನಗಳನ್ನು ಹೊಂದಿದೆ. ಈ ಶೋರೂಂ ಆಕರ್ಷಕ ಶ್ರೇಣಿಯ ಅಧಿಕೃತ ಸರಕು ಮತ್ತು ಅಕ್ಸೆಸರಿಗಳನ್ನು ಪ್ರದರ್ಶಿಸುತ್ತದೆ. ಈ ಉದ್ಘಾಟನೆಯ ಕುರಿತು ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಕಾಸ್ ಝಬಖ್, “ನಾವು ಭಾರತದಾದ್ಯಂತ ನಮ್ಮ ಗ್ರಾಹಕರಿಗೆ ಹತ್ತಿರವಾಗಲು ನಮ್ಮ ಡೀಲರ್ ಶಿಪ್ ಜಾಲವನ್ನು ವಿಸ್ತರಿಸುತ್ತಿದ್ದೇವೆ. ಈ ವಿಸ್ತರಣೆಯು ಅವರಿಗೆ ಬೆನೆಲ್ಲಿ, ಕೀವೇ, ಮೊಟೊ ಮೊರಿನಿ, ಝೆಂಟೆಸ್ ಮತ್ತು ಕ್ಯೂಜೆ ಮೋಟಾರ್ ನಂತಹ ಖ್ಯಾತ ಬ್ರಾಂಡ್ ಗಳ ಸೂಪರ್ ಬೈಕ್ ಗಳ ಅನುಭವ ಪಡೆದುಕೊಳ್ಳುವುದೇ ಅಲ್ಲದೆ ಸರಿಸಾಟಿ ಇರದ ಗ್ರಾಹಕ ಸೇವೆಯನ್ನು ಆನಂದಿಸಲೂ ಅವಕಾಶ ಕಲ್ಪಿಸುತ್ತದೆ. ನಾವು ಬಿ.ಎಫ್. ಮತ್ತಿಕೊಪ್ ಮೋಟಾರ್ಸ್ ಜೊತೆಯಲ್ಲಿ ಸಹಯೋಗಕ್ಕೆ ಬಹಳ ಸಂತೋಷ ಹೊಂದಿದ್ದೇವೆ ಮತ್ತು ಅವರ ಮೂಲಕ ನಾವು ಈ ಬ್ರಾಂಡ್ ಖ್ಯಾತಿ ಪಡೆದಿರುವ ಮುಂಚೂಣಿಯ ಗ್ರಾಹಕ ಸೇವೆಯನ್ನು ಒದಗಿಸಲು ಶಕ್ತರಾಗಿದ್ದೇವೆ. ಮುಖ್ಯವಾಗಿ ಗ್ರಾಹಕ-ಪ್ರಥಮ ವಿಧಾನದ ಸಿದ್ಧಾಂತವು ಕಂಪನಿಯ ಧ್ಯೇಯೋದ್ದೇಶಕ್ಕೆ ಪೂರಕವಾಗಿದೆ” ಎಂದರು. ಈ ಉದ್ಘಾಟನೆ ಕುರಿತು ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್- ಬೆಳಗಾವಿ, ಕರ್ನಾಟಕದ ಡೀಲರ್ ಪ್ರಿನ್ಸಿಪಾಲ್ ಶ್ರೀ ಆದರ್ಶ್ ಮತ್ತಿಕೊಪ್, “ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ಇಂಡಿಯಾದ ಸಹಯೋಗಕ್ಕೆ ನಾವು ಬಹಳ ಸಂತೋಷ ಹೊಂದಿದ್ದೇವೆ. ನಮ್ಮ ಗ್ರಾಹಕ ಪ್ರಥಮ ವಿಧಾನದಿಂದ ನಾವು ನಮ್ಮ ಎಲ್ಲ ಗ್ರಾಹಕರಿಗೂ ತಡೆರಹಿತ ಮಾರಾಟ ಮತ್ತು ಸೇವಾ ಅನುಭವವನ್ನು ನಮ್ಮ ಗ್ರಾಹಕರಿಗೆ ಒದಗಿಸುವ ಗುರಿ ಹೊಂದಿದ್ದೇವೆ. ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್- ಬೆಳಗಾವಿ ಕರ್ನಾಟಕದಲ್ಲಿ ನಮ್ಮ ತಂಡವು ಕಂಪನಿಯಿಂದ ಜಾಗತಿಕ ಮಾನದಂಡಗಳ ಅನ್ವಯ ತರಬೇತಿ ಪಡೆದಿದ್ದು ಅತ್ಯುತ್ತಮ ಮಾಲೀಕತ್ವ ಅನುಭವ ನೀಡುತ್ತದೆ” ಎಂದರು. ಹೊಸದಾಗಿ ಪ್ರಾರಂಭವಾದ ಶೋರೂಂ ಈ ಕೆಳಕಂಡ ಬೆನೆಲ್ಲಿ ಽ ಕೀವೇ ಽ ಮೊಟೊ ವಾಲ್ಟ್ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಕೀವೇ ಶ್ರೇಣಿಯಲ್ಲಿ 125 ಸಿಸಿಯಿಂದ 300 ಸಿಸಿ ಮಾದರಿಗಳವರೆಗೆ ಒಳಗೊಂಡಿದ್ದು ಬೆಲೆಗಳು ರೂ. 1.20 ಲಕ್ಷಗಳಿಂದ ಪ್ರಾರಂಭಿಸಿ ರೂ.4.29 ಲಕ್ಷಗಳವರೆಗೆ (ಎಲ್ಲ ಬೆಲೆಗಳು ಎಕ್ಸ್-ಶೋರೂಂ, ಭಾರತ). ಇವುಗಳಲ್ಲಿ ಎಸ್.ಆರ್.125 (ರೆಟ್ರೊ ಕ್ಲಾಸಿಕ್), ಎಸ್.ಆರ್.250(ನಿಯೊ-ರೆಟ್ರೊ), ಕೆ-ಲೈಟ್ 250ವಿ (ಅರ್ಬನ್ ಕ್ರೂಸರ್), ಕೆ300 ಎನ್ (ಸ್ಟ್ರೀಟ್ ನೇಕೆಡ್ ಸ್ಪೋರ್ಟ), ಕೆ300ಆರ್ (ಸೂಪರ್ ಸ್ಪೋರ್ಟ), ವಿ302ಸಿ (ಬಾಬ್ಬರ್), ಸಿಕ್ಸ್ಟೀಸ್ 300ಐ (ರೆಟ್ರೊ ಸ್ಕೂಟರ್) ಮತ್ತು ವಿಯೆಸ್ಟೆ 300 (ಮ್ಯಾಕ್ಸಿ ಸ್ಕೂಟರ್).
ಬೆನೆಲ್ಲಿ ಶ್ರೇಣಿಯಲ್ಲಿ 500ಸಿಸಿ ವರ್ಗವೂ ಒಳಗೊಂಡಿದ್ದು ಬೆಲೆಗಳು ರೂ.5.85 ಲಕ್ಷಗಳಿಂದ ಪ್ರಾರಂಭವಾಗುತ್ತವೆ. ಇವುಗಳಲ್ಲಿ ಟಿ.ಆರ್.ಕೆ. 502 (ಗ್ರಾಂಡ್ ಟೂರರ್) ಒಳಗೊಂಡಿದೆ.
ಮೊಟೊ ವಾಲ್ಟ್ ಉತ್ಪನ್ನ ಶ್ರೇಣಿಯಲ್ಲಿ ಮೊಟೊ ಮೊರಿನಿ-ಎಕ್ಸ್-ಕೇಪ್ 650ಎಕ್ಸ್ (ಅಡ್ವೆಂಚರ್ ಟೂರರ್) ಎಕ್ಸ್-ಕೇಪ್-650 (ಟೂರಿಂಗ್), ಸೀಮ್ಮೆಝೆ ರೆಟ್ರೊ ಸ್ಟ್ರೀಟ್, ಸೀಮೆಝೆ ಸ್ಕ್ರಾಂಬ್ಲರ್, ಝೆಂಟೆಸ್-350 ಆರ್ (ನೇಕೆಡ್ ಸ್ಟ್ರೀಟ್), 350 ಎಕ್ಸ್ (ಸ್ಪೋರ್ಟ್ಸ್), ಜಿಕೆ 350 (ಕೆಫೆ ರೇಸರ್), 350 ಟಿ (ಟೂರಿಂಗ್ ಮತ್ತು 350 ಟಿ ಎಡಿವಿ (ಅಡ್ವೆಂಚರ್), ಕ್ಯೂಜೆ-ಮೋಟಾರ್-ಎಸ್.ಆರಿ್ಸ.250 (ನಿಯೊ-ರೆಟ್ರೊ), ಎಸ್.ಆರಿ್ವ.300 (ಬಾಬ್ಬರ್), ಎಸ್.ಆರ್.ಕೆ. 400 (ಸ್ಪೋರ್ಟ್ಸ ನೇಕೆಡ್) ಮತ್ತು ಎಸ್.ಆರಿ್ಸ. 500 (ರೆಟ್ರೊ-ಕ್ಲಾಸಿಕ್) ಮತ್ತು ಈ ಬೆಲೆಯ ಶ್ರೇಣಿಯು ರೂ.1.79 ಲಕ್ಷಗಳಿಂದ ರೂ.6.49 ಲಕ್ಷಗಳವರೆಗೆ ಇರುತ್ತದೆ.