ಢಪಳಾಪುರ ವಿದ್ಯಾವಿಹಾರ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮ
ಮಹಾಲಿಂಗಪುರ 08: ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಸಿಬಿಎಸ್‌ಇ ಶಾಲೆಯಲ್ಲಿ ಇಸ್ರೋ ಸಹಯೋಗದಲ್ಲಿ ಸಂಚಾರಿ ಬಾಹ್ಯಾಕಾಶ ಪ್ರದರ್ಶನ ಏರಿ್ಡಸಿ, ಇಸ್ರೋ ಹಿರಿಯ ವಿಜ್ಞಾನಿ ಪಿ.ಎನ್.ಮೂರ್ತಿಯವರಿಂದ ಮಹಾಲಿಂಗಪುರ ಮತ್ತು ಸುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಜ್ಞಾನವನ್ನು ದೊಕಿಸಿಕೊಡಲಾಯಿತು.
ಗ್ರಾಮೀಣ ಮಕ್ಕಳಿಗೆ ಇಸ್ರೋ ವಿಜ್ಞಾನಿಯೊಬ್ಬರೊಡನೆ ಮುಖಾಮುಖಿ ಸಂವಾದ ಮಾಡುವ ಹಾಗೂ ತಮ್ಮ ಕೌತುಕಗಳಿಗೆ ಅವರಿಂದಲೇ ಪರಿಹಾರ ಪಡಯುವ ಸೌಭಾಗ್ಯ ಕಲ್ಪಿಸಲಾಗಿತ್ತು.
ಸುತ್ತಲಿನ ಅವರಾದಿ, ಢವಳೇಶ್ವರ, ಬೆಳಗಲಿ, ಮಹಾಲಿಂಗಪುರ, ತೇರದಾಳ, ರಬಕವಿ, ಬನಹಟ್ಟಿ, ಸಂಗಾನಟ್ಟ ಹೀಗೆ 30ಕ್ಕೂ ಅಧಿಕ ಶಾಲಾ ಕಾಲೇಜುಗಳ 6 ರಿಂದ ಪದವಿವರೆಗಿನ ವಿದ್ಯಾರ್ಥಿಗಳು ಆಗಮಿಸಿದ್ದು, ಅದರಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಚಾರಿ ಬಾಹ್ಯಾಕಾಶ ವೀಕ್ಷಣೆಯ ಜೊತೆ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಪರೂಪದ ಸಮಾಜ ವಿಜ್ಞಾನ ಪ್ರಯೋಗಾಲಯ ಸೇರಿದಂತೆ ಗಣಿತ ಪ್ರಯೋಗಾಲಯ ವೀಕ್ಷಿಸಿದರು.
ಜಮಖಂಡಿಯ ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಉದ್ಘಾಟಿಸಿದರು.ಸಂಸ್ಥೆಯ ಕಾರ್ಯದರ್ಶಿ ವಿವೇಕ ಢಪಳಾಪುರ, ಪ್ರಾಂಶುಪಾಲ ಲೂಯಿಸ್ ಬರಟೋ ಇದ್ದರು. ವರ್ಷಾ ಪಾಟೀಲ ಪರಿಚಯಿಸಿ, ಪ್ರೇಮಾ ಪಾಟೀಲ ನಿರೂಪಿಸಿ, ಸುಪ್ರೀತಾ ಹವಾಲ್ದಾರ ವಂದಿಸಿದರು.
ಗ್ರಾಮೀಣ ಪ್ರದೇಶದ ಅದರಲ್ಲಿಯೂ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಸ್ರೋದ ವಿಜ್ಞಾನಿಯೊಬ್ಬರೊಂದಿಗೆ ಸಂವಾದ ಮಾಡಿ ಜ್ಞಾನ ಪಡೆದುಕೊಳ್ಳಲು ಹಾಗೂ ಬಾಹ್ಯಾಕಾಶದ ಪ್ರಾಯೋಗಿಕ ಜ್ಞಾನ ಪಡೆಯವಂತೆ ವಿಶಿಷ್ಠ ಕಾರ್ಯಕ್ರಮ ರೂಪಿಸಿದ ವಿವೇಕ ಢಪಳಾಪುರ ಮತ್ತು ಸಂಸ್ಥೆಯ ಕಾರ್ಯ ಶ್ಲಾಘನೀಯ.
- ಎ.ಕೆ.ಬಸಣ್ಣವರ, ಜಮಖಂಡಿಯ ಕ್ಷೇತ್ರಶಿಕ್ಷಣಾಧಿಕಾರಿ.