ಪಿಂಚನಿ ಪಡೆದುಕೊಳ್ಳದ ಫಲಾನುಭವಿಗಳು

ಲೋಕದರ್ಶನ ವರದಿ

ಹುಕ್ಕೇರಿ :  ಆಶ್ವಾಸನೆಗೆ ಸೀಮಿತವಾದ ರಾಜ್ಯ ಸಕರ್ಾರ ವಿವಿಧ ಪಿಂಚಣಿ ಫಲಾನುಭವಿಗಳಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ.  ಜತೆಗೆ ತಾಲೂಕ ಆಡಳಿತ ಅಧಿಕಾರಿಗಳು  ಬಡವರ ಬಾಳಿನೊಂದಿಗೆ  ಚೆಲ್ಲಾಟವಾಡುತ್ತಿದ್ದಾರೆಂದು ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು  ಸ್ಥಳಿಯ ಪುರಸಭೆ ನೂತನ ಸದಸ್ಯರು ಖಡಕ್ ಎಚ್ಚರಿಕೆ ನೀಡಿದರು.

ದಿ.21 ರಂದು ಪಟ್ಟನದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್ಟಿಐ ಕಾರ್ಯಕರ್ತ ಹಾಗೂ ಪುರಸಭೆ ಸದಸ್ಯ ಭೀಮಶಿ ಗೋರಖನಾಥ, ಭಿದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಹಾಯಧನವನ್ನು ಸಮೃದ್ಧಿ ಯೋಜನೆಯಡಿಯಲ್ಲಿ  ರಾಜ್ಯ ಸಕರ್ಾರ ನೀಡುತ್ತಿದೆ. ಆದರೆ ಕಳೆದ ವರ್ಷದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಬಿಪಿಎಲ್ ಫಲಾನುಭವಿ ಕುಟುಂಬದ ಸದಸ್ಯರು ಮೃತ ಪಟ್ಟಲ್ಲಿ ಅಂತ್ಯಕ್ರೀಯೆ ನೇರವೆರಿಸಲು 5 ಸಾವಿರ ರೂ. ಸಹಾಯ ಧನ ಇದುವರೆಗೆ ಯಾರೊಬ್ಬರಿಗೂ ದೊರಕಿಲ್ಲ. ವೃದ್ಧಾಪ್ಯ,ಅಂಗವಿಕಲರಿಗೆ ಸಹ ಸರಿಯಾಗಿ ಮಾಸಾಶನ ಸಿಗುತ್ತಿಲ್ಲ ಎಂದು ಹಲವರು ತಮ್ಮ ಬಳಿ ಹೇಳಿಕೊಂಡಿದ್ದಾರೆ. ಹಾಗಾಗಿ ಸಮಾನ ವಯಸ್ಕ ಸದಸ್ಯರು ಹಾಗೂ ಯುವ ಮುಖಂಡರು  ಚಚರ್ಿಸಿ ಈ ಸಂಗತಿಯ ಬಗ್ಗೆ  ತಾಲೂಕ ಆಡಳಿತದ ಗಮನಕ್ಕೆ ತಂದು ಪರಿಹರಿಸುವಂತೆ ನಿರ್ಧರಿಸಿದ್ದೇವೆ . 

ತಿಂಗಳೊಳಗೆ ಪರಿಹಾರ ದರಕದಿದ್ದರೆ ಎಲ್ಲ  ಫಲಾನುಭವಿಗಳೊಂದಿಗೆ  ಪ್ರತಿಭಟಿಸಲು ನಿರ್ಧರಿಸಿದ್ದೇವೆಂದು ಹುಕ್ಕೇರಿ ಪುರಸಭೆ ನೂತನ ಸದಸ್ಯರು ಮತ್ತು ಮುಖಂಡ ಭೀಮಶಿ ಗೋರಖನಾಥ ತಿಳಿಸಿದರು. ಈ ಸಂದರ್ಭದಲ್ಲಿ ರಾಜೇಶ ಮುನ್ನೋಳಿ, ರಾಜು ಮೋಮಿನದಾದಾಹಾಗೂ ಮುಖಂಡರಾದ  ಗುಂಡು ಪಾಟೀಲ, ಸಿದ್ದಪ್ಪ ಹಳಿಜೋಳ ಮುಂಂತಾದವರು ಉಪಸ್ಥಿತರಿದ್ದರು.

 ಕಾಲಂ 

ಸಮೃದ್ಧಿ ಯೋಜನೆಯಡಿ ಬೀದಿ ವ್ಯಾಪಾರಿಗಳೆಂದು  ಕೇವಲ 42 ಜನರನ್ನು ಮಾತ್ರ ಗುರುತಿಸಿದ್ದಾರೆ. ಆಯ್ಕೆ ಮಾನದಂಡದ ನಿಯಮಾಳಿಯ  ಅವೈಜ್ಞಾನಿಕವಾಗಿರುವದರಿಂದ ಹೇಚ್ಚಿನ ಭೀದಿ ವ್ಯಾಪಾರಿಗಳು  ಯೋಜನಾ ಲಾಭದಿಂದ ವಂಚಿತರಾಗುತ್ತಿದ್ದಾರೆ.

ಭೀಮಶಿ ಗೋರಖನಾಥ  ಆರ್ಟಿಐ ಕಾರ್ಯಕರ್ತ ಮತ್ತು ಹುಕ್ಕೇರಿ ಪುರಸಭೆ ಸದಸ್ಯ