ಲೋಕದರ್ಶನ ವರದಿ
ಬಳ್ಳಾರಿ 24: ನಗರದ ರೇಡಿಯೋ ಪಾರ್ಕ ಬಳಿ ಇರುವ ಐ.ಟಿ.ಐ ಕಾಲೇಜು ಮೈದಾನದಲ್ಲಿ ಇದೇ 24 ರಿಂದ ಜುಲೈ 4 ರವರೆಗೆ ಎಕ್ಸಿಬಿಷನ್ ನಡೆಯಲಿದೆ ಎಂದು ಮಾಲಿಕ ರಾಜೇಶ್ ಮತ್ತು ಚಂದು ಹಾಗೂ ಮ್ಯಾನೆಜರ್ ರೀಯಾಜಅಹ್ಮದ್ ಮತ್ತು ವಿ.ಬಿ.ಬಸವರಾಜ ಅವರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡುತ್ತಾ
ಇದೇ ಮೊದಲಬಾರಿಗೆ ಬಳ್ಳಾರಿಯಲ್ಲಿ ಇಂತಹ ಒಂದು ದೊಡ್ಡಮಟ್ಟದ ಎಕ್ಸಿಬಿಷನ್ ಹಾಕಿದ್ದು ಇದರಲ್ಲಿ 23 ರಾಜ್ಯಗಳಿಂದ ಬಂದಿರುವಂತಹ ಮಾರಾಟಗಾರರ ಮಳಿಗೆಗಳು, ಚಿಕ್ಕಮಕ್ಕಳಿಂದ ವಯಸ್ಸಾದವರಿಗೂ ಉಲ್ಲಾಸ ನೀಡುವಂತಹ ಆಟಗಳು (ಜ್ವಾಂಟಿ ವ್ಹಿಲ್, ಕೊಲಂಬಸ್, ಸೀಯಾರ, ಅಕ್ಟೊಪಸ್, ಸೊಲೊಂಬೋ, ಬ್ರೆಕ್ಡ್ಯಾನ್ಸ್ ಮತ್ತು ಚಿಕ್ಕಮಕ್ಕಳಿಗೆ ವಾಟರ್ಬೊಟ್, ಜಲ್ಲಿಕಟ್, ಜಂಪಿಂಗ್) ಹೀಗೆ ಹಲವಾರು ಭಗೆಯ ಕ್ರೀಡೆಗಳು ನಡೆಯಲಿವೆ. ಗೃಹಬಳಕೆ ವಸ್ತುಗಳ ಉಪಕರಣಗಳು, ಮಕ್ಕಳ ಆಟದ ಸಾಮಾಗ್ರಿಗಳು, ಅಡುಗೆ ಮಾಡುವ ರೆಡಿಮೇಡ್ ಉತ್ಪಾದನಗಳು, ಒಂದೇಸೂರಿನಡಿ ದೊರೆಯಲಿದೆ ಎಂದರು.
ಜೊತೆಗೆ ರುಚಿಕರವಾದ ಆಹಾರ ಪದಾರ್ಥಗಳು ಬಳ್ಳಾರಿ ಸ್ಪೆಷಲ್ ಪಾನಿಪೂರಿ, ಬೆಲ್ಪೂರಿ, ಹಿಟ್ಟು ಹಚ್ಚಿದ ಮೆಣಸಿಕಾಯಿ ಬಜಿ, ಜೊತೆಗೆ ತಂಪು ಪಾನಿಯಗಳು, ಐಸ್ಕ್ರಿಮ್ಗಳು, ಡೆಲ್ಲಿಹಪ್ಪಳ, ವಿಶೇಷವಾಗಿರುತ್ತದೆ.
ಎಕ್ಸಿಬಿಷನ್ನಲ್ಲಿ ಥ್ರಿಡಿ ಶೋ, ಸ್ಕೇರಿಹೌಸ್ ಫ್ರಿಂಜಿಂಗ್ ಶೋ ವಲ್ಡ್, ಸೆಲ್ಪಿಶೋ, ಆಕರ್ಷಣಿಯ ಕೊಡುಗೆಯಾಗಿದೆ. ಈ ಪ್ರದರ್ಶನವು ಜುಲೈ 4ರವರೆಗೆ ನಡೆಯಲಿದ್ದು 40 ಲಕ್ಷ ರೂ ವೆಚ್ಚದಲ್ಲಿ ತಯಾರುಮಾಡಲಾಗಿದೆ. ಜೊತೆಗೆ ಇದರಲ್ಲಿ ಕೆಲಸ ಮಾಡಲು ಸರಿಸುಮಾರು ಇನ್ನೂರು ಜನಕ್ಕೆ ಉದ್ಯೋಗ ಕಲ್ಪಿಸಲಾಗಿದೆ. ಸಾರ್ವಜನಿಕರು ಈ ಪ್ರದರ್ಶನಕ್ಕೆ ಬಂದು ತಮ್ಮ ಕುಟುಂಬ ಸಮೇತರಾಗಿ ಸಂತೋಷಿಸಿಬೇಕೆಂದು ಕೋರಿದರು.