ವಿದ್ಯಾಥರ್ಿಗಳಿಗೆ ಉತ್ತಮ ಗುಣಮಟ್ಟದ ಕಟ್ಟಡ ನಿಮರ್ಾಣಕ್ಕೆ ಕ್ರಮ: ಬಳ್ಳಾರಿ

ಲೋಕದರ್ಶನವರದಿ

ಬ್ಯಾಡಗಿ02: ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗೆ ಅಗತ್ಯವಾಗಿರುವ ಉತ್ತಮ ಗುಣಮಟ್ಟದ ಕಟ್ಟಡಗಳ ನಿಮರ್ಾಣಕ್ಕೆ ಕ್ರಮ ವಹಿಸಿದ್ದು, ಹೆಚ್ಚುವರಿ ಕಟ್ಟಡಗಳಿಗಾಗಿ ಕೇಂದ್ರ ಸರಕಾರಕ್ಕೆ 33 ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

       ತಾಲೂಕಿನ ಕುಮ್ಮೂರ ಗ್ರಾಮದಲ್ಲಿ ಫಾಸಿ ಪ್ರಭಾವತಿ ಸರಕಾರಿ ಪ್ರೌಢ ಶಾಲೆಯಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ 15.75 ಲಕ್ಷ ರೂ.ಗಳ ವೆಚ್ಚದಲ್ಲಿ ನಿಮರ್ಿಸಲಾಗುವ ನೂತನ ಶಾಲಾ ಕಟ್ಟಡಕ್ಕೆ ಭೂಮಿ ಪೂಜೆ ಹಾಗೂ ನಿಮರ್ಿತಿ ಕೇಂದ್ರದ ವತಿಯಿಂದ ನಿಮರ್ಿಸಲಾಗಿರುವ ರಂಗ ಮಂದಿರವನ್ನು ಉದ್ಘಾಟಿಸಿ ಮಾತನಾಡಿದರು. 

    ಗುತ್ತಿಗೆದಾರರು ಗುಣ ಮಟ್ಟದ ಕಟ್ಟಡಗಳನ್ನು ದೀರ್ಘ ಕಾಲದವರೆಗೆ ಬಾಳಿಕೆ ಬರುವಂತೆ ನಿಮರ್ಿಸಬೇಕು. ಕಳಪೆ ಕಾಮಗಾರಿ ನಿಮರ್ಿಸಿದರೇ ಅಂತಹ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದೆಂದು ಎಚ್ಚರಿಸಿದರು. ಪ್ರತಿಯೊಬ್ಬ ಶಿಕ್ಷಕರು ಪ್ರತಿಯೊಂದು ವಿಷಯದ ಬಗ್ಗೆ ಮಕ್ಕಳಲ್ಲಿ ಜ್ಞಾನಾರ್ಜನೆ ಮಾಡುವುದು ಅವಶ್ಯವಾಗಿದೆ. ಸರಕಾರವು ಸಹ ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ವಿದ್ಯಾಥರ್ಿಗಳು ಸಹ ಅವುಗಳನ್ನು ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿ ಸಾಧಿಸುವಂತೆ ಕರೆ ನೀಡಿದರು.

     ಗುಡ್ಡದ ಮಲ್ಲಾಪುರ ಏತ ನೀರಾವರಿ ಭೂಮಿ ಕಳೆದುಕೊಂಡ ರೈತರಿಗೆ ಶೇ.30 ರಷ್ಟು ಹೆಚ್ಚಳವಾಗಿ ಪರಿಹಾರ ಒದಗಿಸಲು ಸರಕಾರ ಬದ್ದವಾಗಿದ್ದು, ರೈತರು ಸಹ ಯಾವುದೇ ಆತಂಕ ಪಡಬಾರದೆಂದು ರೈತರಲ್ಲಿ ಮನವಿ ಮಾಡಿದರು. ಅಲ್ಲದೇ ರೈತರ ಎಲ್ಲಾ ಜಮೀನುಗಳಿಗೆ ನೀರುಣಿಸುವ ನಿಟ್ಟಿನಲ್ಲಿ ಯೋಜನೆ ಸಿದ್ದವಾಗಿದೆ. ಶೀಘ್ರದಲ್ಲಿಯೇ ಕಾರ್ಯ ರೂಪಕ್ಕೆ ಬರಲಿದೆ ಎಂದರು. 

  ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿದರ್ೇಶಕ ಸುರೇಶ ಯತ್ನಳ್ಳಿ ಮಾತನಾಡಿ ಶಿಕ್ಷಣ ಪ್ರೇಮಿಯಾಗಿರುವ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಶೈಕ್ಷಣಿಕ ಅಭಿವೃದ್ಧಿಗಾಗಿ ಈಗಾಗಲೇ ಕ್ಷೇತ್ರಕ್ಕೆ 25 ಕೋಟಿಗಿಂತಲೂ ಹೆಚ್ಚಿನ ಅನುದಾನವನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆಂದರು. 

      ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಶಂಕ್ರಪ್ಪ ಮಾತನವರ, ಗ್ರಾ.ಪಂ.ಉಪಾಧ್ಯಕ್ಷೆ ಬಸವಣ್ಣೆವ್ವ ಮೋಟೆವ್ವನವರ, ಎಪಿಎಂಸಿ ಸದಸ್ಯ ವೀರಭದ್ರಪ್ಪ ಗೊಡಚಿ, ಧುರೀಣರಾದ ಜಗದೀಶ ಕಣಗಲಬಾವಿ, ನೀಲಕಂಠಪ್ಪ ಫಾಸಿ, ಎನ್.ಆರ್.ಚೌಗಲೆ, ಸುಶೀಲವ್ವ ತಳವಾರ, ಗುಡ್ಡಪ್ಪ ಫಾಸಿ, ಹನುಮಗೌಡ್ರ ಪಾಟೀಲ, ಅಶೋಕ ಹಿರೇಹಳ್ಳಿ, ಮನೋಹರ ಕಾಳಪ್ಪನವರ, ಪುಟ್ಟಪ್ಪ ಫಾಸಿ, ಭೀಮಪ್ಪ ಉಪ್ಪಾರ, ಶೇಖರಗೌಡ ಗೌಡ್ರ, ಮಾರುತಿ ಅಸುಂಡಿ, ಎನ್.ಎಫ್.ಹರಿಜನ, ಸಹಾಯಕ ಅಭಿಯಂತರ ರಾಜಶೇಖರ ಹರಮಗಟ್ಟಿ, ಕೆ.ರಾಜಪ್ಪ, ಗುತ್ತಿಗೆದಾರ ಶಿವಪುತ್ರಪ್ಪ ಅಗಡಿ, ಸೇರಿದಂತೆ ಇತರರಿದ್ದರು. ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ ಭಜಂತ್ರಿ ಸ್ವಾಗತಿಸಿದರು. ಎಚ್.ಟಿ.ಸತ್ಯಪ್ರಕಾಶ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ವಂದಿಸಿದರು.