ಲೋಕದರ್ಶನ ವರದಿ
ರಾಣೇಬೆನ್ನೂರು 08 : ಮಣ್ಣಲ್ಲಿ ಮಣ್ಣಾಗಿ ದುಡಿದರೆ ಭೂ ತಾಯಿ ನಮ್ಮನು ಕೈ ಬಿಡುವದಿಲ್ಲ ಒಬ್ಬ ರೈತ ತನ್ನ ಹೂಲದಲ್ಲಿ ಕಷ್ಟಪಟ್ಟು ದುಡಿದಾಗ ಮಾತ್ರ ಫಲ ಸಿಕ್ಕೆಸಿಗುತ್ತದೆ ತೋಟಗಾರಿಕೆ ಇಲಾಖೆ ಜೊತೆಗೆ ರೈತರು ಕೈ ಜೋಡಿಸಿದಾಗ ಅವರು ವಿವಿಧ ಸೌಲಭ್ಯ ನೀಡುತ್ತದೆ. ಪರಿಸರ ನಾಶಕ್ಕೆ ಅವಕಾಶವನ್ನು ಕೊಡದೇ ತೋಟಗಾರಿಕೆಯಿಂದ ಬರುವ ಲಾಭವನ್ನು ರೈತರು ಪಡೆದುಕೊಂಡು ಉತ್ತಮ ಜೀವನ ನಡೆಸಬೇಕೆಂದು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಹೊನ್ನತ್ತಿ ಗ್ರಾಮದಲ್ಲಿ ಏರ್ಪಡಿಸಿದ್ದಾ ಜಿಲ್ಲಾ ಪಂಚಾಯತ್ ಹಾವೇರಿ ತಾ.ಪಂ ರಾಣೇಬೆನ್ನೂರು ತೋಟಗಾರಿಕೆ ಇಲಾಖೆ ಕೃಷಿ ವಿಶ್ವವಿದ್ಯಾಲಯ ಹನುಮನಮಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ವಿಚಾರ ಸಂಕೀರಣ ಮತ್ತು ಬೆಳೆ ಬೆಳೆಯುವ ವಿವಿಧ ಹೇಗೆ ಎಂಬುದರ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯ ಬಗ್ಗೆ ನೀರು ಬಳಕೆಯಿಂದ ಎಲ್ಲಾ ಸಸಿಗಳು ನಾವು ಉತ್ತಮ ರೀತಿಯಲ್ಲಿ ಬೆಳೆಸಿ ಹೆಚ್ಚಿನ ಲಾಭ ಪಡೆಯಬಹುದು ಹೊನ್ನತ್ತಿ ಕೆರೆ ತುಂಬಿಸುವ ಯೋಜನೆ ಮುಗಿದಿದ್ದು ಕೃಷಿಯಿಂದ ನಾವು ಹಿನ್ನಡೆಯಾಗದೆ ಬಂದರ ಭೂಮಿಯಲ್ಲಿ ಬೆಳೆ ಬೆಳೆಯುವುದು ಉತ್ತಮ ತಳಿ ತೆಗೆದು ಅದರಿಂದ ಹೆಚ್ಚು ಲಾಭ ಪಡೆಯಲು ಸಾಧ್ಯತ್ತೇಯಿಂದೆ.
ಜಿಲ್ಲಾ ಪಂ ಸದಸ್ಯ ಏಕನಾಥ ಬಾನುವಳ್ಳಿ ಮಾತನಾಡಿ ತೋಟಗಾರಿಕೆ ಅಧಿಕಾರಿಗಳು ರೈತರಿಗೆ ತರಬೇತಿ ನೀಡುವುದನ್ನು ಸ್ಥಳ ಪರಿಶೀಲನೆಯಲ್ಲಿ ಮಾಡಬೇಕು ಎಂದು ಕೇಳಿದಾಗ ನಾನು ಹೊನ್ನತ್ತಿ ಗ್ರಾಮದಲ್ಲಿ ಮಾಡಿದ್ದಾರೆ ಸೂಕ್ತ ಎಂದು ಹೇಳಿದೆ ಅದೇ ತರನಾಗಿ ತೋಟಗಾರಿಗೆ ಇಲಾಖೆ ಪ್ರಾರಂಭಿಸಿದೆ.
ಹೊನ್ನತ್ತಿ ಗ್ರಾಮವು ಎಲೆಬಳ್ಳಿ ಕ್ಷೇತ್ರವೆಂದು ಹೆಸರಾಗಿದೆ ಇದ್ದು 45 ವರ್ಷಗಳ ಇತಿಹಾಸಯುಳ್ಳ ಸಾಧನೆ ಇಂತಹ ಬಂದರ ಭೂಮಿಯಲ್ಲಿ ಇಲ್ಲಿಯ ರೈತರು ಕಷ್ಟ ಪಟ್ಟು ತಮ್ಮ ಬೆಳೆಯನ್ನು ಉತ್ತಮ ರೀತಿಯಲ್ಲಿ ಬೆಳೆದು ಹೆಚ್ಚಿನ ಫಲ ತೆಗೆಯುವುದರಲ್ಲಿ ಯಶಸ್ವಿ ಸಾಧಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಬಸಪ್ಪ ಪೂಜಾರ್, ತಾ.ಪಂ ಸದಸ್ಯ ಭರಮ್ಮಪ್ಪ ಉಮ್ಮರ್ಿ, ಎ.ಪಿ.ಎಂ.ಸಿ ಸದಸ್ಯ ಬಸವರಾಜ ಸವಣೂರು, ಶಿವಪ್ಪ ಲಮಾಣಿ, ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿಂದರು.