ಬಳ್ಳಾರಿ: ಅಕ್ರಮಗಳ ಬಗ್ಗೆ ಪ್ರಶ್ನಿಸಿದರೆ ಜಾತಿ ನಿಂದನೆ ಬೆದರಿಕೆ ಎಬಿವಿಪಿ ಆರೋಪ

ಬಳ್ಳಾರಿ 22: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಬೋಧಕ ಮತ್ತು ಬೋಧಕೇತರ ನೇಮಕಾತಿಯಲ್ಲಿ ಅಕ್ರಮಗಳ ಬಗ್ಗೆ ಪ್ರಶ್ನಿಸಿದರೆ ಜಾತಿ ನಿಂದನೆ ಕೇಸು ದಾಖಲಿಸುವುದಾಗಿ ಕುಲಪತಿ ಡಾ. ಸುಬಾಸ್ ಬೆದರಿಕೆ ಹಾಕುತ್ತಿದ್ದಾರೆಂದು ಎಬಿವಿಪಿ ಆರೋಪಿಸಿದೆ. 

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಎಬಿವಿಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯುವರಾಜ, ಸೇವಾ ಅವಧಿಯ ತಮ್ಮ ಕೊನೆಯ ದಿನಗಳಲ್ಲಿ ತುರಾತುರಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ  ನೇಮಕಾತಿ ಉಲ್ಲಂಘನೆ ಮಾಡಿದ್ದಾರೆಂದರು. ಹುದ್ದೆಗಳ ನೇಮಕಾತಿಗೆ ಮುಂದಾಗಿರುವ ಬಗ್ಗೆ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳು  ಪ್ರಶ್ನಿಸಿದರೆ ನಿಮ್ಮ ವಿರುದ್ದ ಅಟ್ರಾಸಿಟಿ ಕೇಸ್ ಹಾಕಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ. 

ಕುಲಪತಿಗಳು 2016ರ ನೇಮಕಾತಿ ಆದೇಶವನ್ನು ಇಟ್ಟುಕೊಂಡು ಸ್ಥಳಿಯರಿಗೆ ಅನ್ಯಾಯ ಮಾಡುತ್ತಿದ್ದಾರೆ. 2018ರ ನಿಯಮಾವಳಿ ರಚೆನೆಯಾಗಿದ್ದರೂ ಇನ್ನು ತಮಗೆ ಬೇಕಾದವರಿಗೆ ಅನುಕೂಲ ಮಾಡಲು 2016ರ ನಿಯಾಮವಳಿಗೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದಾರೆ. ಈ ಹಿಂದೆ ಪರಿಶಿಷ್ಟ ಜಾತಿಗೆ ಮೀಸಲಿದ್ದ ಉಪ ಕುಲಸಚಿವರ ಹುದ್ದೆಯನ್ನು ಈಗ ಸಾಮಾನ್ಯವರ್ಗಕ್ಕೆ ಮೀಸಲಿಡಿಸಿದ್ದಾರೆ. ಸ್ವತಹ ಕಂಪ್ಯೂಟರ್ ವಿಭಾದ ಪ್ರಾಧ್ಯಪಕ ಹುದ್ದೆಗೆ ಅಜರ್ಿ ಸಲ್ಲಿಸಿರುವ ಕುಲಸಚಿವ (ಮೌಲ್ಯ ಮಾಪನ) ರಮೇಶ ಅವರೆ ನೇಮಕಾತಿ ಪ್ರಕ್ರೀಯೆಯಲ್ಲಿದ್ದಾರೆ ಇದು ಸರಿಯೇ ಎಂದು ಪ್ರಶ್ನಿಸಿದರು. ಹೀಗೆ ಹಲವಾರು ರೀತಿಯ ನಿಯಮಗಳ ಉಲ್ಲಂಗನೆಯ ಮೂಲಕ ನಡೆದಿರುವ ನೇಮಕಾತಿ ರದ್ದುಪಡಿಸಬೇಕು. ಕುಲಪತಿಗಳನ್ನು ತಕ್ಷಣ ವಜಾಗೊಳಿಸಬೇಕು ಎಂದು ರಾಜ್ಯಪಾಲರ ಮತ್ತು ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ  ಪತ್ರ ಬರೆದಿದ್ದೇವೆ ಎಂದು ತಿಳಿಸಿದರು. 

ಇದೆಲ್ಲವಕ್ಕೂ ಉತ್ತರ ಜೂನ್ 01ರೊಳಗೆ ಅವರಿಂದ ಸೂಕ್ತ ಪ್ರಕ್ರೀಯೆ ಬರದಿದ್ದರೇ ವಿಶ್ವವಿದ್ಯಾಲಯದ ಮುಂದೆ ವಿವಿದ ರೀತಯ ಪ್ರತಿಭಟನೆಯ ಜೊತೆಗೆ ವಿ.ವಿಗೆ ಬೀಗ ಹಾಕಲಿದ್ದೇವೆ. ಜೊತೆಗೆ ನ್ಯಾಯಾಂಗದ ಮೂಲಕವು ಹೋರಾಟ ಮಾಡಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಶ್ರೀಕಾಂತರೆಡ್ಡಿ, ನಗರ ಸಹಕಾರ್ಯದಶರ್ಿ ವೀರನಗೌಡ, ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.