ಲೋಕದರ್ಶನ ವರದಿ
ಬಳ್ಳಾರಿ 30: ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಅನುಭವಿ ಮಾರ್ಗದರ್ಶಕರ ಮುಖಾಂತರ ಉದ್ಯಮಶೀಲತೆಯ ತಂತ್ರಗಳನ್ನು ವಿದ್ಯಾಥರ್ಿಗಳಿಗೆ ಮುಟ್ಟಿಸಲು ಒಂದು ದಿನದ ಕಾರ್ಯಗಾರ (ಬೂಟ್ ಕ್ಯಾಂಪ್) ಮುಖಾಂತರ ಶುಕ್ರವಾರದಂದು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕಾರ್ಯಕ್ರಮ ನಡೆಯಿತು.
ಬಿ.ಐ.ಟಿ.ಎಂ. ನಿರ್ದೇಶಕ ಡಾ:ಯಶವಂತ್ ಭೂಪಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾಥರ್ಿಗಳು ತಮ್ಮ ಸ್ವಂತ ಬುದ್ದಿಶಕ್ತಿಯಿಂದ ಹೊಸ ಅವಿಷ್ಕಾರಗಳನ್ನು ಮಾಡಿ, ಹೊಸ ಉದ್ಯಮಗಳನ್ನು ಸೃಷ್ಠಿ ಮಾಡಬೇಕೆಂದು ತಿಳಿಸಿದರು.
ಕನರ್ಾಟಕ ಆವಿಷ್ಕಾರ ಮತ್ತು ತಂತ್ರಜ್ಙಾನ ಸಂಸ್ಥೆಯನ್ನು ಕನರ್ಾಟಕ ಸರ್ಕಾರ ಮಾಹಿತಿ ತಂತ್ರಜ್ಙಾನ, ಜೀವ ತಂತಜ್ಞಾನ, ವಿಜ್ಙಾನ ಮತ್ತು ತಂತ್ರಜ್ಞಾನ ಇಲಾಖೆಯು ಕೌಶಲ್ಯಾಭಿವೃದ್ಧಿಯ ಮೂಲಕ ಸ್ಟಾರ್ಟ್ಪ್ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ್ದು ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳೊಂದಿಗೆ ಮತ್ತು ಉದ್ಯಮಗಳೊಂದಿಗೆ ಸಹಯೋಗ ಹೊಂದಿದೆ ಎಂದರು.
ಭಾರತ್ಚಂದ್ರ ಮಾತನಾಡುತ್ತಾ ಈ ಬೂಟ್ ಕ್ಯಾಂಪ್ ಕರ್ನಾಟಕದ ಸರ್ಕಾರದ ಐಟಿ ಬಿಟಿ ಇಲಾಖೆ, ಕರ್ನಾಟಕ ಇನ್ನೋವೇಶನ್ ಟೆಕ್ನಾಲಜಿ ಸೊಸೈಟಿಯ ಒಂದು ಉಪಕ್ರಮವಾಗಿದೆ ವಿದ್ಯಾಥರ್ಿಗಳ ಪ್ರಾರಂಭದ ಕೋಶದ ಅಡಿಯಲ್ಲಿ ಪದವಿ ಮಟ್ಟದಲ್ಲಿಯೇ ನಾವೀನ್ಯತೆಯನ್ನು ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಇ-ಸ್ಟೆಪ್ ಬೂಟ್ ಕ್ಯಾಂಪ್ ಕರ್ನಾಟಕದ 19 ಜಿಲ್ಲೆಗಳಲ್ಲಿ 30 ಕಾಲೇಜುಗಳನ್ನು ಒಳಗೊಂಡಿದ್ದು, ಸಂಸ್ಥೆಯಡಿ ಮಾಡಲಾಗುತ್ತಿದೆ.
ವಿಷ್ಣು ನಾಗರಾಜ್, ಒಡಿಸಾ, ಗುಜುರಾತ್ ತಮಿಳುನಾಡು ಕನರ್ಾಟಕ ಮತ್ತು ಕೇರಳದಲ್ಲಿ ಅನೇಕ ಬೂಟ್ ಕ್ಯಾಂಪ್ಗಳನ್ನು ನಡೆಸಿದ್ದಾರೆ, ಈಗ ಕನರ್ಾಟಕ ಸಕರ್ಾರದೊಂದಿಗೆ ಸಹಯೋಗ ಹೊಂದಿ, ಕಾಲೇಜುಗಳಲ್ಲಿ ಉದ್ಯಮಶೀಲತೆ ಬೂಟ್ ಕ್ಯಾಂಪ್ಗಳನ್ನು ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ವಿ.ಸಿ.ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪದವಿ ವಿದ್ಯಾಭ್ಯಾಸದ ವೇಳೆಯಲ್ಲಿಯೇ ತಾವು ಉದ್ಯಮಶೀಲರಾಗಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಐ.ಟಿ.ಎಂ. ಮತ್ತು ಬಿಬಿಸಿ ಕಾಲೇಜಿನಿಂದ ಸುಮಾರು 250 ವಿದ್ಯಾರ್ಥಿಗಳು ಈ ಬೂಟ್ ಕ್ಯಾಂಪ್ನಲ್ಲಿ ಪಾಲ್ಗೊಂಡಿದ್ದರು.
ವೇದಿಕೆಯ ಮೇಲೆ ಉಪಪ್ರಾಚಾರ್ಯ ಡಾ.ಯಡವಳ್ಳಿ ಬಸವರಾಜ್, ವಿಭಾಗ ಮುಖ್ಯಸ್ಥ ಡಾ.ಬಿ.ಎಸ್.ಕೆಣೆದ್, ಡಾ.ಆರ್.ಎನ್.ಕುಲಕರ್ಣ ಡಾ.ಯು.ಈರಣ್ಣ, ಹಾಗೂ ಬ್ರಿಕ್ಸ್ ಕೋಆರ್ಡ್ನೇಟರ್ ಪ್ರೊ.ಮಲ್ಲಿಕಾರ್ಜುನ ಉಪಸ್ಥಿತರಿದ್ದರು.