ಗೋಕಾಕ 26: 'ನಂಬಿಕೆ, ನಿಜ ಭಕ್ತಿಯಲ್ಲಿ ದೇವರಿದ್ದು, ಅಂತರಂಗದಿಂದ ದೇವರನ್ನು ಸ್ಮರಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು' ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ಹೇಳಿದರು.
ತಾಲ್ಲೂಕಿನ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಜಾತ್ರೆಯ ಪ್ರವಚನ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಸೌರಭವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಧರ್ಮಶಾಸ್ತ್ರಗಳು ಮನುಕುಲದ ಹಿತವನ್ನು, ಏಳ್ಗೆಯನ್ನು ಬಯಸುತ್ತಿದ್ದು, ಪ್ರತಿ ವ್ಯಕ್ತಿಯು ನಡೆ, ನುಡಿಗಳಲ್ಲಿ ಸದ್ಭಾವ ರೂಢಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಬಳೂಟಗಿಯ ಸಿದ್ದೇಶ್ವರ ಶಾಸ್ತ್ರೀಗಳು ಪ್ರವಚನದ ಮೂಲಕ ಮಾನವೀಯ ಮೌಲ್ಯ ಮತ್ತು ಮಾನವ ಧರ್ಮದ ಕುರಿತು ವ್ಯಾಖ್ಯಾನ ಮಾಡಿದರು.
ಕನರ್ಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ವೀರೇಶ ಕಿತ್ತೂರ ಅವರ ಗಾಯನ ಮನಸೂರೆಗೊಳಿಸಿತು. ಹನಮಂತ ಕಾಮನಹಳ್ಳಿ ಅವರ ಕೊಳಲು ವಾದನ, ವಿಜಯ ದೊಡ್ಡಣ್ಣವರ ತಬಲಾ ಸಾಥ್ ಸಂಗೀತ ಗೋಷ್ಠಿಗೆ ಮೆರಗು ನೀಡಿತ್ತು. ಕುಮಾರ ಬಡಿಗೇರ, ಶಾಂಭವಿ ಮತ್ತು ಸರಸ್ವತಿ ಸಹೋದರಿಯರ ಗಾಯನ ಎಲ್ಲರ ಮೆಚ್ಚುಗೆ ಗಳಿಸಿತು.
ಉಪನ್ಯಾಸ: ಶಿಕ್ಷಕ ಅಪ್ಪಾಸಾಹೇಬ ಕುರುಬರ ಅವರ 'ತತ್ವಪದಗಳಲ್ಲಿ ಮಾನವೀಯ ಮೌಲ್ಯಗಳು' ಕುರಿತು ಉಪನ್ಯಾಸ ನೀಡಿದರು. ಅತಿಥಿಯಾಗಿ ನಿವೃತ್ತ ಚಿತ್ರಕಲಾವಿದ ಜಿ.ಎ. ಪತ್ತಾರ ಭಾಗವಹಿಸಿದ್ದರು.
ಮಲ್ಲಕಂಬ ಪ್ರದರ್ಶನ: ಸಂಜೆ ಜರುಗಿದ ಹಳ್ಳೂರಿನ ಮಹಾಲಕ್ಷ್ಮೀದೇವಿ ಡೊಳ್ಳು ಕುಣಿತ ಕಲಾ ತಂಡದವರು ಪ್ರದಶರ್ಿಸಿದ ವೈಶಿಷ್ಟ್ಯಪೂರ್ಣವಾದ ಡೊಳ್ಳು ಕುಣಿತವು ಸೇರಿದ ಜನಸಾಗರವನ್ನು ರಂಜಿಸಿತು.
ಸಂಚಾಲಕ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಯಶೋಧಾ ಮರಬಸನ್ನವರ, ರೋಹಿಣಿ ಬಂಗಾರಿ ನಿರೂಪಿಸಿದರು.
ಇಂದಿನ ಕಾರ್ಯಕ್ರಮ: ಏ. 27ರಂದು ಸಂಜೆ 7.30ಕ್ಕೆ ದೂರದರ್ಶನದ 'ಮಧುರ, ಮಧುರ ಮಂಜುಳ ಗಾನ' ಕಾರ್ಯಕ್ರಮದ ಖ್ಯಾತಿಯ ವಿಶ್ರಾಂತ ದೂರದರ್ಶನ ಹೆಚ್ಚುವರಿ ಮಹಾನಿದರ್ೇಶಕ ಮಹೇಶ ಜೋಶಿ 'ಧರ್ಮ ಸೌಹಾರ್ದತೆ' ಕುರಿತು ಮಾತನಾಡುವರು. ಡಾ. ಸಿದ್ದಣ್ಣ ಉತ್ನಾಳ ಭಾಗವಹಿಸುವರು.