ಲೋಕದರ್ಶನ ವರದಿ
ಬೆಳಗಾವಿ 01: ಇತಿಹಾಸದಲ್ಲೇ ಮಹಿಳೆಯೊಬ್ಬರು ಪ್ರಪ್ರಥಮವಾಗಿ ಸುವ್ಯವಸ್ಥಿತ ಮಹಿಳಾ ಸೇನೆಯನ್ನು ಕಟ್ಟಿದ ಹೆಗ್ಗಳಿಕೆ ಬೆಳವಡಿ ಮಲ್ಲಮ್ಮಳಿಗೆ ಸಲ್ಲುತ್ತದೆ. ಬೆಳವಡಿ ಮಲ್ಲಮ್ಮಳ ಶೌರ್ಯ, ಸಾಹಸ ಜಗತ್ತಿಗೆ ಮಾದರಿಯಾಗಿದೆ ಎಂದು ಅವರು ಜಿಲ್ಲಾಧಿಕಾರಿಗಳಾದ ಎಸ್. ಬಿ. ಬೊಮ್ಮನಹಳ್ಳಿ ಅವರು ಹೇಳಿದರು.
ಗುರುವಾರ (ಫೆ.28) ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವೀರವನಿತೆ ಬೆಳವಡಿ ಮಲ್ಲಮ್ಮನ ಉತ್ಸವದ ಉದ್ಘಾಟನಾ ಸಮಾರಂಭಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳವಡಿ ಮಲ್ಲಮ್ಮ ಕೇವಲ ಶೌರ್ಯದಿಂದಲ್ಲದೇ, ಉತ್ತಮ ಸಂಸ್ಕೃತಿ, ಆಚಾರ, ವಿಚಾರಗಳಿಂದಲೂ ಎಲ್ಲ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು. ಬೈಲಹೊಂಗಲ ವೀರರು ಹಾಗೂ ಶೂರರ ನಾಡಾಗಿದೆ. ಯುವಕರು ಇತಿಹಾಸವನ್ನು ತಿಳಿದುಕೊಳ್ಳಬೇಕು. ಮಹಾನ ಪುರುಷರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಮಾತನಾಡಿ, ಪ್ರತಿಯೊಬ್ಬ ನಾಗರಿಕರು ತಮ್ಮ ಜೀವನದಲ್ಲಿ ಸನ್ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಮಹಾನ ಪುರುಷರ ಬಗ್ಗೆ ಯುವಜನರಿಗೆ ತಿಳಿಸಿಕೊಡಬೇಕೆಂಬುದು ಸಕರ್ಾರ ಉತ್ಸವಗಳನ್ನು ಹಮ್ಮಿಕೊಳ್ಳುವ ಉದ್ದೇಶವಾಗಿದೆ ಎಂದು ಹೇಳಿದರು. ಬೆಳವಡಿ ಮಲ್ಲಮ್ಮ ಆದರ್ಶವು ಪ್ರತಿಯೊಬ್ಬ ಮಹಿಳೆಯರಿಗೂ ಮಾದರಿಯಾಗಬೇಕೆಂದು ಹೇಳಿದರು.
ಪ್ರಶಸ್ತಿ ಸಮಾರಂಭ:
ರಾಣಿ ಮಲ್ಲಮ ಪ್ರಶಸ್ತಿ ಸ್ವೀಕರಿಸಿ ಬೆಳಗಾವಿ ರಾಷ್ಟ್ರೀಯ, ಮಿಲಿಟರಿ ಶಾಲೆಯ ಶ್ಯಾಮಲಿ ಆರ್ಯ ಅವರು ಮಾತನಾಡಿ ಎಲ್ಲ ಪಾಲಕರು ಮಕ್ಕಳಿಗೆ ಶಿಕ್ಷಣವನ್ನು ಕೋಟ್ಟು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡಿ ಎಂದು ಹೇಳುತ್ತ ಬೆಳವಡಿ ಮಲ್ಲಮ್ಮ ಮಹಾನ ಮಹಿಳೆ ಹಾಗೂ ಪುರುಷರ ಇತಿಹಾಸವನ್ನು ತಮ್ಮ ಮಕ್ಕಳಿಗೆ ತಿಳಿಸಿಕೊಟ್ಟು, ಮಕ್ಕಳಲ್ಲಿ ದೇಶಾಭಿಮಾನ, ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತರಾದ ನಿಕಟ ಪೂರ್ವ ಜಿಲ್ಲಾ ಕ.ಸಾ.ಪ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಯ.ರು.ಪಾಟೀಲ ಅವರು ರಾಜಾ ಈಶಪ್ರಭು ಪ್ರಶಸ್ತಿ ಪಡೆದು ಅವರ ಶೌರ್ಯ ಪರಾಕ್ರಮದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಬೆಳವಡಿ ಸಂಸ್ಥಾನದ ರಾಜಗುರುಗಳಾದ ಶಿವಮಹಾಂತ ಶಿವಾಚಾರ್ಯ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಜಿ.ಪಂ ಸದಸ್ಯರಾದ ಈರಣ್ಣ ಕರಿಕಟ್ಟಿ, ಶಂಕರ ಮಾಡಲಗಿ,ತಾ.ಪಂ ಅಧ್ಯಕ್ಷೆ ಈರವ್ವಾ ತಳವಾರ, ಬೈಲಹೊಂಗಲ ಉಪವಿಭಾಗಾದಿಕಾರಿಗಳಾದ ಎಸ್.ವಾಯ್.ಭಜಂತ್ರಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯ ನಿದರ್ೆಶಕರಾದ ಶ್ರೀಶೈಲ ಕರಿಶಂಕರಿ, ಬೆಳಗಾವಿ ರಾಷ್ಟ್ರೀಯ ಮಿಲಿಟರಿಸ್ಕೂಲ್ನನ ಆಡಳಿತ ಅಧಿಕಾರಿ ಮೇಜರ್ ಶ್ಯಾಮಲಿ ಆರ್ಯ, ನಿಕಟಪೂರ್ವ ಜಿಲ್ಲಾ ಕ.ಸಾಪ ಅಧ್ಯಕರಾದ ಯ.ರು ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:
ಉದ್ಭಾಟನಾ ಸಮಾರಂಭದ ನಂತರ ವೀರರಾಣಿ ಬೆಳವಡಿ ಮಲ್ಲಮ್ಮನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಭರತನಾಟ್ಯ, ಸುಗಮ ಸಂಗೀತ, ಸಮೂಹ ನೃತ್ಯ, ಪಾಶ್ಚಾತ್ಯ ನೃತ್ಯಗಳು, ಚಲನಚಿತ್ರ ಗೀತೆಗಳು, ರಸಮಂಜರಿ ಕಾರ್ಯಕ್ರಮ, ಶ್ರೀಕೃಷ್ಣ ಪಾರಿಜಾತ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.