ಎಲ್ಲ ಔಷಧಿಗಳ ಮೂಲ ಆಯುವರ್ೇದ: ಸಿಇಓ ಮಾನಕರ

ಬಾಗಲಕೋಟೆ 05: ಇತ್ತಿಚಿನ ಅಲೋಪತಿ, ಹೋಮೋಪತಿ ಮುಂತಾದ ನವೀನ ಔಷಧಗಳ ಮೂಲ ಆಯುವರ್ೇದವಾಗಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ 3ನೇ ರಾಷ್ಟ್ರೀಯ ಆಯುವರ್ೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರಿ.ಶ ಪೂರ್ವದಾಚೆ ಚರಕ, ಪತಂಜಲಿ ಋಷಿ ಮಹಾತ್ಮರ ಹಾಗೂ ಸಾಧು ಸಂತರು ಪ್ರಕೃತಿಯಲ್ಲಿ ಸಿಗುವ ಅಪರೂಪದ ಔಷಧಯುಕ್ತ ಗಿಡ-ಮರಗಳನ್ನು ಸಂಶೋಧಿಸಿದ ಉಪಯುಕ್ತವಾದ ಔಷಧಿಕಗಳ ಪದ್ದತಿಯೇ ಆಯುವರ್ೇದವಾಗಿದೆ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಆಯುವರ್ೇದಕ್ಕೆ ಪ್ರಥಮ ಆದ್ಯತೆ ನೀಡಲಾಗಿದ್ದು, ಬ್ರಿಟೀಷರ ಆಳ್ವಿಕೆ ಕಾಲದಿಂದ ಅವರ ಅನುಕರಿಸುವ ವಸ್ತ್ರವಿನ್ಯಾಸ, ಆಹಾರ ವಿವಾಹ ಬದಲಾದಂತೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಔಷಧಿಗಳು ಸಹ ಬದಲಾವಣೆಯಾಗಿದ್ದು, ಇದರಿಂದ ಆಯುವರ್ೇದ ಔಷಧಿ ಉಪಯೋಗ ಕಡಿಮೆಯಾಗುತ್ತಾ ಬಂದಿದೆ. ಆಯುವೇದದಿಂದ ಸಂಪೂರ್ಣವಾಗಿ ರೋಗ ನಿಮರ್ೂಲನೆ ಮಾಡಿಕೊಳ್ಳಬಹುದು. ಆದರೆ ಕಾಲಾವಕಾಶ ತೆಗೆದುಕೊಳ್ಳುತ್ತಿರುವದರಿಂದ ಈ ಔಷಧಿಗೆ ಹೆಚ್ಚಿನ ಬೇಡಿಕೆ ದೊರೆಯುತ್ತಿಲ್ಲ. ಸರಕಾರವು ಕೂಡಾ ಈ ಔಷಧಿ ಬಳಕೆಗೆ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯವಿದೆ ಎಂದರು.

ಸಾರ್ವಜನಿಕರು ಆರೋಗ್ಯ ರಕ್ಷಣೆಗಾಗಿ ಕಾಲಾವಧಿ ಪಡೆದರೂ ಶಾಶ್ವತ ಪರಿಹಾರ ಪಡೆದುಕೊಳ್ಳಲು ಆಯುವರ್ೇದ ಬಸಳಿಕೊಳ್ಳಲು ಕರೆ ನೀಡಿದರು. ಸರಕಾರ ಈಗಾಗಲೇ ಆಯುಷ ಇಲಾಖೆಯ ಮೂಲಕ ಆಯುವರ್ೇದಿಕ್ ಔಷಧ ಹಾಗೂ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಜಿಲ್ಲಾ ಪಂಚಾಯತಿಯಿಂದ ಶಾಲಾ ಮಕ್ಕಳಲ್ಲಿ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರಿಗೆ ಆಯುವರ್ೇದದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು. 

ಆಯುವರ್ೇಧ ಔಷಧ ಪ್ರಚಲಿತವಾಗಬೇಕಾದರೆ ಸರಕಾರಿ ಕಚೇರಿಗಳ ಆವರಣಗಳಲ್ಲಿ, ಶಾಲಾ ಮೈದಾನ ಆವರಣಗಳಲ್ಲಿ ಔಷಧಿಯುಕ್ತ ಸಸಿಗಳುಳ್ಳ ಉದ್ಯಾನವನವನ್ನು ನಿಮರ್ಿಸುವ ಚಿಂತನೆಯಲ್ಲಿದೆ. ಇಂದಿನ ಯುವಕರಿಗೆ ತಿಳಿಯದೇ ಇರುವದಂತಹ ಅಪರೂಪದ ಗಿಡಮೂಲಿಕೆಗಳ ಪರಿಚಯಿಸುವದರ ಜೊತೆಗೆ ಅದರಿಂದಾಗುವ ಉಪಯುಕ್ತದ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡಲಾಗುವುದು. ಆಯುಷ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಸಾರ್ವಜನಿಕರಿಗೆ ಹಾಗೂ ಸರಕಾರಕ್ಕೆ ತನ್ನ ಕಾರ್ಯವೈಖರಿ ಬಗ್ಗೆ ಸಮಗ್ರ ವಿವರಣೆ ನೀಡಿ ಸಾಧಕ ಬಾದಕಗಳನ್ನು ಅವಲೋಕಿಸಿ ಆಯುವರ್ೇದ ಪ್ರೋತ್ಸಾಹಿಸುವಲ್ಲಿ ಸಮರ್ಥ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ತುಮಕೂರಿನ ಚೈತನ್ಯ ವಿಕಾಸ ಯೋಗ & ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ.ಶ್ರೀಶೈಲ ಬದಾಮಿ ಅವರು ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದ ಪಾತ್ರ ಕುರಿತು, ತೇರದಾಳದ ಎಸ್ಡಿಎಂ ಟ್ರಸ್ಟ್ ಆಯುವರ್ೇದ ಮೆಡಿಕಲ್ ಕಾಲೇಜಿನ ಪ್ರಾದ್ಯಾಪಕ ಡಾ.ಶಿವಪುತ್ರ ಬಾಲರೆಡ್ಡಿ ಪ್ರೀವೆಂನ್ಶನ್ ಜನರಲ್ ಡೈಸಿಸ್ ಕುರಿತು ಹಾಗೂ ಬಿವಿವಿ ಸಂಘದ ಆಯುವೇದ ಮೆಡಿಕಲ್ ಕಾಲೇಜಿನ ಪ್ರಾದ್ಯಾಪಕ ಡಾ.ಜಯಶ್ರೀ ಗಿರಿಸಾಗರ ಆಯುವರ್ೇದದಲ್ಲಿ ಪಂಚಕರ್ಮ ಮಹತ್ವ ಕುರಿತು ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ ಅಧಿಕಾರಿ ಶಿವಾನಂದ ಬ್ಯಾಕೋಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ತೋವಿವಿಯ ಸಹ ಪ್ರಾದ್ಯಾಪಕ ಡಾ.ಎ.ಪಿ.ಸಿಂಗ್, ಲಯನ್ಸ್ ಕ್ಲಬ್ನ ಚೇರಮನ್ ಡಾ.ವಿಕಾಸ ದಡ್ಡೇನವರ, ಜಿಲ್ಲಾ ಯೋಗ ವಿಜ್ಞಾನ ಕೇಂದ್ರದ ರಂಗನಗೌಡ ದಡ್ಡೇನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.