ಲೋಕದರ್ಶನ ವರದಿ
ಶಿಗ್ಗಾವಿ 26: ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿಯಲ್ಲಿರುವ ಗುರುಬಸವೇಶ್ವರ ತಪೋವನ ದೇಸಾಯಿಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಬಸವೇಶ್ವರರ ಮೂತರ್ಿ ಮೆರವಣಿಗೆಗೆ ಮಾಜಿ ವಿದಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಪೂಜೆ ಸಲ್ಲಿಸುವದರೊಂದಿಗೆ ಚಾಲನೆ ನೀಡಿದರು.
ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಹುಚ್ಚೇಶ್ವರ ಮಹಾ ಮಠದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು. ಮೇರವಣಿಗೆಯನ್ನು ಭಕ್ತರು ಅಂಗಳಕೆ ನೀರು ಚಿಮುಕಿಸಿ ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಂಡು ನೂತನ ಬಸವೇಶ್ವರರ ಮೂತರ್ಿಗೆ ಹೂವಿನಮಾಲೆ, ಹಣ್ಣು, ಕಾಯಿ, ಕಪರ್ೂರ ಸಮಪರ್ಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು.
ಮೇರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ಕುದುರೆ ಕುಣಿತ, ಜಾಂಜ್ ಮೇಳ, ಶ್ರೀಂಗರಿಸಿದ ಎತ್ತುಗಳ ಮೇರವಣಿಗೆ ಸಾರ್ವಜನಿಕರ ಕಣ್ಮನ ಸೇಳೆದವು.
ಮೆರವಣಿಗೆ ಸಾಗಿಬಂದು ದೇಸಾಯಿಮಠದ ಆವರಣಕ್ಕೆ ಬಂದು ತಲುಪಿತು.
ತನ್ನಿಮಿತ್ಯ ಪ್ರಾಥ: ಕಾಲ ಗುರು ಶಾಂತೇಶ್ವರ ಕತರ್ೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಶ್ರಭಿಲ್ವಾರ್ಚನೆ, ಸಹಶ್ರನಾಮಾವಳಿ ಪಾರಾಯಣ, ರುದ್ರಾಣಿಬಳಗದ ತಾಯಂದಿರಿಂದ ರುದ್ರಪಠಣ ಸೇರಿದಂತೆ ವಿವಿದ ಪೂಜಾ ಕೈಂಕರ್ಯಗಳು ಭಕ್ತ ಜನಸಾಗರದ ಮದ್ಯ ಶ್ರದ್ಧಾ ಭಕ್ತಿಯಿಂದ ನಡೆದವು. ಮೇರವಣಿಗೆ ನಂತರ ಅನ್ನಪ್ರಸಾದದ ಸೇವೆ ನಡೆಯಿತು.
ದೇಸಾಯಿಮಠದ ಮಹಾಂತಸ್ವಾಮಿಗಳು, ಪುರಸಭೆ ಮಾಜಿ ಅದ್ಯಕ್ಷ ರಾಮಣ್ಣ ರಾಣೋಜಿ, ಚನ್ನಪ್ಪ ಹಳವಳ್ಳಿ, ಸಂಗಪ್ಪ ಹರವಿ, ಪೊಲೀಸ್ ಇಲಾಖೆ ಡಿ.ಎನ್.ಕುಡಲ, ತಾಲೂಕಾ ಬಿಜೆಪಿ ಕಾರ್ಯದಶರ್ಿ ಬಸವರಾಜ ನಾರಾಯಣಪುರ, ಮುಖಂಡರಾದ ಹುಚ್ಚಯ್ಯನವರು ಹುಚ್ಚಯ್ಯನಮಠ, ಸಂಗಯ್ಯ ದೇಸಾಯಿಮಠ, ಗಿರಿರಾಜ ದೇಸಾಯಿ, ಶಂಕ್ರಯ್ಯ ಹುಚ್ಚಯ್ಯನಮಠ, ನಿಂಗನಗೌಡ್ರ ಪಾಟೀಲ, ಬಸವರಾಜ ಶೆಟ್ಟರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.