ಲೋಕದರ್ಶನ ವರದಿ
ಯಲಬುಗರ್ಾ 12: ಸ್ಥಳೀಯ ಪೋಲಿಸ್ ಠಾಣೆಗೆ ನೂತನ ಪಿಎಸ್ಐಯಾಗಿ ನೇಮಕವಾಗಿರುವ ಬಸವರಾಜ ಅಡವಿಭಾವಿಯವರು ಅಧಿಕಾರ ವಹಿಸಿಕೊಂಡರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಾನು ಕೇಳಿದಂತೆ ಇಲ್ಲಿಯ ಜನತೆ ಅತ್ಯಂತ ಶಾಂತಿ ಪ್ರೀಯರು ಹಾಗೂ ನಮ್ಮ ಇಲಾಖೆಯೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದಾರೆ ಹಾಗೂ ಅದರ ಜೋತೆಗೆ ನನ್ನ ಅಧಿಕಾರ ಅವಧಿಯಲ್ಲಿ ನಮ್ಮ ಠಾಣಾ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಯಾವುದೇ ತರನಾದ ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವದು ಹಾಗೂ ಸಾರ್ವಜನಿಕರು ತಮ್ಮ ಗಮನಕ್ಕೆ ಬಂದಂತಹ ಯಾವುದೇ ಅಕ್ರಮ ಚಟುವಟಿಕೆಗಳಿದ್ದರೆ ತಕ್ಷಣ ನಮಗೆ ಮಾಹಿತಿ ನೀಡಬೇಕು.
ಪ್ರತಿಯೊಬ್ಬರೂ ಹೆಲ್ಮೇಟ್ ಬಳಸಬೇಕು ಹಾಗೂ ನಗರದಲ್ಲಿ ಕಡ್ಡಾಯವಾಗಿ ರಸ್ತೆ ನಿಯಮಗಳನ್ನ ಪಾಲಿಸಬೇಕು ಯಾವುದೇ ಅಕ್ರಮ ವ್ಯವಹಾರಗಳಿಗೆ ಅವಕಾಶ ಇರುವದಿಲ್ಲಾ ಪ್ರತಿಯೊಬ್ಬರಿಗೂ ತಮ್ಮದೆ ಆದಂತಹ ಹಕ್ಕು ಇದೇ ಅದಕ್ಕೆ ತೊಂದರೆ ಆದರೆ ನಮ್ಮನ್ನು ಸಂಪಕರ್ಿಸಿ ನ್ಯಾಯ ಪಡೆಯಬೇಕು ಹಾಗೂ ಪೋಲಿಸ್ ಇಲಾಖೆಯೂ ಅತ್ಯಂತ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಅದರ ಜೊತೆಗೆ ನಮಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಯಲಬುಗರ್ಾ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಿರ್ಗಮಿತ ಪಿಎಸ್ಐ ವಿನಾಯಕ, ಹಾಗೂ ನೂತನ ಪಿಎಸ್ಐ ಬಸವರಾಜ ಅಡವಿಭಾವಿ ಅವರನ್ನು ಸನ್ಮಾನಿಸಲಾಯಿತು, ಎಎಸ್ಐ ಶರಣಬಸಪ್ಪ ಹೂಗಾರ ಸಿಬ್ಬಂದಿಗಳಾದ ತಮ್ಮನಗೌಡ, ಬಾಬುಸಾಬ, ಕಾ,ನಿ,ಪ,ಸಂ,ತಾಲೂಕಾದ್ಯಕ್ಷ ಇಮಾಮ್ ಬಿ ಸಂಕನೂರು, ಉಪಾದ್ಯಕ್ಷ ವಿ ಎಸ್ ಶಿವಪ್ಪಯ್ಯನಮಠ, ಕಾರ್ಯದಶರ್ಿ ರವಿಕುಮಾರ ಛಲವಾದಿ, ಶ್ಯಾಮೀದಸಾಬ ತಾಳಕೇರಿ, ಶರಣಕುಮಾರ ಅಮರಗಟ್ಟಿ, ದಾದು ಎಲಿಗಾರ, ಭರಮಪ್ಪ ಸೂಡಿ, ಮಂಜು ರಾಜೋಳ್ಳಿ, ಸೇರಿದಂತೆ ಪೋಲಿಸ್ ಸಿಬ್ಬಂದಿ ಹಾಗೂ ಇನ್ನೀತರರು ಹಾಜರಿದ್ದರು.