ಲೋಕದರ್ಶನ ವರದಿ
ಕಂಪ್ಲಿ 1:ದೇವಾಂಗ ಸಮಾಜದವರ ಸಂಘಟನೆ, ಧರ್ಮ ಜಾಗೃತಿ ಮತ್ತು ಕಲ್ಯಾಣಕ್ಕಾಗಿ ಕುಲದೇವತೆ ಬಾದಾಮಿ ಬನಶಂಕರಿ ದೇವಿಗೆ ಹಂಪೆ ಹೇಮಕೂಟದ ಗಾಯತ್ರಿ ಪೀಠದಿಂದ ಪಲ್ಲಕ್ಕಿ ಮೂಲಕ ಪಾದಯಾತ್ರೆಯಿಂದ ಸಾಗಿ ಪೀತಾಂಬರ ಸೀರೆ ಅಪರ್ಿಸಲಾಗುವುದು. ಸಮಾಜದ ಸಮಸ್ತ ಸದ್ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹಂಪಿ ಗಾಯತ್ರಿ ಪೀಠಾಧ್ಯಕ್ಷರಾದ ದೇವಾಂಗ ಜಗದ್ಗುರು ದಯಾನಂದ ಪುರಿ ಮಹಾಸ್ವಾಮಿಗಳು ಹೇಳಿದರು.
ಭಾನುವಾರ ಇಲ್ಲಿನ ದೇವಾಂಗ ಪೇಟೆಯ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ, ಪಾದಯಾತ್ರೆ ಜಾಗೃತಿ ಸಮಾರಂಭದ ದಿವ್ಯಸಾನ್ನಿಧ್ಯವಹಿಸಿ, ದೇವಾಂಗಸಮಾಜದ ಗುರುಪೀಠ ವಿಜಯನಗರ ಸಾಮ್ರಾಜ್ಯದ ಹಂಪೆಯಲ್ಲಿ, ಕುಲದೇವತೆಯ ದೇವಸ್ಥಾನ ಚಾಲುಕ್ಯ ಸಾಮ್ರಾಜ್ಯದ ಬಾದಾಮಿಯಲ್ಲಿದ್ದು, ಬಾದಾಮಿ ಬನಶಂಕರಿ ದೇವಾಂಗ ಸಮುದಾಯದವರ ಕುಲದೇವತೆಯಾಗಿದ್ದು ಜಾಗೃತಿ ಮೂಡಿಸಬೇಕಾಗಿದೆ. ಶ್ರೀಶೈಲ ಮಲ್ಲಿಕಾಜರ್ುನನಿಗೆ ದೇವಾಂಗದವರು ನೇಯ್ದ 365ಮೊಳದ ಸೀರೆ ಅರ್ಪಣೆ, ಕಾಳಹಸ್ತೇಶ್ವರದಲ್ಲಿ ದೇವಾಂಗದವರ ಮೊದಲ ಪೂಜೆ, ಮಹಾರಾಷ್ಟ್ರದ ಶನೀಶ್ವರದಲ್ಲಿ, ತಮಿಳುನಾಡು ಸೇರಿ ಅನೇಕಡೆಗಳಲ್ಲಿ ದೇವಾಂಗದವರಿಗೆ ಮೊದಲ ಧಾಮರ್ಿಕ ಸೇವಾಹಕ್ಕುಗಳಿದ್ದು ಜಾಗೃತಿ ಮೂಡಿಸಬೇಕಾಗಿದೆ. ಸೂಳಿಭಾವಿಯ ಶಾಕಾಂಬರಿ ಸೊಸೈಟಿಯಿಂದ ನೇಯ್ದ ಪೀತಾಂಬರ ಸೀರೆಯನ್ನು ಹಂಪಿಯ ಗಾಯತ್ರಿ ಪೀಠದಿಂದ ಪಲ್ಲಕ್ಕಿಯಲ್ಲಿರಿಸಿಕೊಂಡು ಪಾದಯಾತ್ರೆ ಮೂಲಕ ಸಾಗಿ 2019ರ ಜ.20ರಂದು ಬಾದಾಮಿ ಬನಶಂಕರಿ ದೇವಿಗೆ ಅಪರ್ಿಸಬೇಕಾಗಿದ್ದು ಸದ್ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲಬುಗರ್ಿ ಮಾತನಾಡಿ, 2019ರ ಜ.14ರ ಬೆಳಿಗ್ಗೆ 6ಗಂಟೆಯಿಂದ ಹಂಪೆಯ ಗಾಯತ್ರಿ ಪೀಠದಿಂದ ಪೀತಾಂಬರ ಇರಿಸಿದ ಪಲ್ಲಕ್ಕಿಯೊಂದಿಗೆ ಪಾದಯಾತ್ರೆ ಆರಂಭಗೊಂಡು ಬುಕ್ಕಸಾಗರ, ಕಡೆಬಾಗಿಲು ಸೇತುವೆ, ಗಂಗಾವತಿ, ಕನಕಗಿರಿ, ತಾವರಗೇರಾ, ಮುದೇನೂರು, ದೋಟಿಹಾಳ, ಇಲಕಲ್ಲ, ಹೂಲಗೇರಿ, ಗುಡೂರ, ಕಾಟಾಪುರ ಮಾರ್ಗವಾಗಿ 162ಕಿ.ಮಿ.ಕ್ರಮಿಸಿ ಜ.20ರ ಸಂಜೆ 6ಗಂಟೆಗೆ ಬಾದಾಮಿ ತಲುಪಿ ಪೀತಾಂಬರ ಅಪರ್ಿಸಲಾಗುವುದು. ಶಾಶ್ವತ ಪಾದಯಾತ್ರೆಗಾಗಿ ಹನ್ನೊಂದು ಸಾವಿರ ರೂಪಾಯಿಗಳನ್ನು ನೀಡಿದಲ್ಲಿ ಶಾಶ್ವತ ನಿಧಿ ಇಟ್ಟು ಬಡ್ಡಿಯನ್ನು ಬಳಸಿಕೊಂಡು ಮುಂಬರುವ ಪಾದಯಾತ್ರೆಗಳನ್ನು ಯಶಸ್ವಿಗೊಳಿಸಲಾಗುವುದು ಎಂದು ಹೇಳಿದರು. ಕಂಪ್ಲಿ ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪಾದಯಾತ್ರೆ ಸಂಚಾಲಕ ನಾಗರಾಜ ಪರಗಿ, ಇಲಕಲ್ನ ವಿರುಪಾಕ್ಷಪ್ಪ ಗೂಳಿ, ಹೊಸಪೇಟೆಯ ಅಗಳಿ ಪಂಪಾಪತಿ, ಬಸವಂತಪ್ಪ ವಡ್ಡೊಡಗಿ, ಪ್ರಭು ಬಾಪುರಿ, ಕಂಪ್ಲಿಯ ಡಾ.ಮಂಜುನಾಥ ಸಪ್ಪರದ, ಗುಂಡ್ಮಿ ಪಂಪಣ್ಣ, ಕೆ.ಬಸವರಾಜ, ದೂಪದ ಸುಭಾಶ್ಚಂದ್ರ, ತುಳಸಿ ರಾಮಚಂದ್ರ, ಹಂಪರಗುಂದಿ ನಾಗರಾಜ, ಮಿಟ್ಟಿ ಶಂಕರ್, ವಣಕಿ ವೆಂಕಟೇಶ್, ಕಾಕಂಡ್ಕಿ ಮಹೇಶ್, ಕುಚ್ಚ ಸುರೇಶ್, ಮಾಗನೂರು ನಾಗರಾಜ, ವಣಕಿ ಶಂಕರ್, ದೂಪದ ವೀರೇಶ್, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಇಂಡಿ ತಾರಾ, ಬಂಗಿ ಆಶ್ವಿನಿ, ಮಾಗನೂರು ಸುಧಾ ಸೇರಿ ದೇವಾಂಗ ಸಮಾಜದವರು ಪಾಲ್ಗೊಂಡಿದ್ದರು. ಬಂಗಿ ದೊಡ್ಡ ಮಂಜುನಾಥ ನಿರೂಪಿಸಿದರು.